ಈತನ ಸಾಮರ್ಥ್ಯ ಅರಿಯುವಲ್ಲಿ ಎಡವಿದ್ದರು ರೋಹಿತ್ ಶರ್ಮಾ! ವಿಶ್ವಕಪ್ ನಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದು ಇದೇ ಆಟಗಾರ!

Mohammed Shami Records:ಮೊಹಮ್ಮದ್ ಶಮಿ  ಮಾರಕ ಬೌಲಿಂಗ್ ಕಾರಣದಿಂದಲೇ ಟೀಂ ಇಂಡಿಯಾ 2023 ರ ವಿಶ್ವಕಪ್‌ನಲ್ಲಿ ಮಿಂಚುತ್ತಿದೆ. 2023ರ ವಿಶ್ವಕಪ್‌ನ ಮೊದಲ 4 ಪಂದ್ಯಗಳಲ್ಲಿ  ತಂಡದಿಂದ ಹೊರಗುಳಿದಿದ್ದ ಮೊಹಮ್ಮದ್ ಶಮಿ, ವಿಶ್ವ ಕ್ರಿಕೆಟ್‌ನ ಅತ್ಯಂತ ಅಪಾಯಕಾರಿ ವೇಗದ ಬೌಲರ್‌ಗಳಲ್ಲಿ ಒಬ್ಬರು ಎಂಬುದನ್ನು ಇಡೀ ಜಗತ್ತಿಗೆ ತೋರಿಸಿ ಕೊಟ್ಟಿದ್ದಾರೆ. 

Written by - Ranjitha R K | Last Updated : Nov 3, 2023, 10:35 AM IST
  • ತ್ರಿವರ್ಣ ಧ್ವಜದ ವೈಭವ ಹೆಚ್ಚಿಸಿದ ಶಮಿ
  • ಸಾಮರ್ಥ್ಯ ಸಾಬೀತುಪಡಿಸಿದ ಛಲಗಾರ
  • ಶ್ರೀಲಂಕಾ ವಿರುದ್ದ ಬಿರುಗಾಳಿ ಎಬ್ಬಿಸಿದ ಶಮಿ
ಈತನ ಸಾಮರ್ಥ್ಯ ಅರಿಯುವಲ್ಲಿ ಎಡವಿದ್ದರು ರೋಹಿತ್ ಶರ್ಮಾ! ವಿಶ್ವಕಪ್ ನಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದು ಇದೇ ಆಟಗಾರ!  title=

Mohammed Shami Records:ಮೊಹಮ್ಮದ್ ಶಮಿ ಅವರ ಮಾರಕ ಬೌಲಿಂಗ್ ನಿಂದಾಗಿಯೇ ಟೀಂ ಇಂಡಿಯಾ ವಿಶ್ವಕಪ್ 2023 ರಲ್ಲಿ  ಕೀರ್ತಿ ಪಾತಾಕೆ ಹಾರಿಸುತ್ತಿದೆ. 2023ರ ವಿಶ್ವಕಪ್‌ನ ಮೊದಲ 4 ಪಂದ್ಯಗಳಲ್ಲಿ ತಂಡದಿಂದ ಹೊರಗುಳಿದಿದ್ದ ಶಮಿ, ವಿಶ್ವ ಕ್ರಿಕೆಟ್‌ನ ಅತ್ಯಂತ ಅಪಾಯಕಾರಿ ವೇಗದ ಬೌಲರ್‌ಗಳಲ್ಲಿ ಒಬ್ಬರು ಎಂಬುದನ್ನು ಇಡೀ ಜಗತ್ತಿಗೆ ಸಾರಿದ್ದಾರೆ. ಟೀಮ್ ಇಂಡಿಯಾ ಈ ಮ್ಯಾಚ್ ವಿನ್ನಿಂಗ್ ಬೌಲರ್ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡಿರಬಹುದು. ಆದರೆ, ಮೊಹಮ್ಮದ್ ಶಮಿ ತ್ರಿವರ್ಣ ಧ್ವಜದ ಕೀರ್ತಿಯನ್ನು ಹಾರಿಸಿದ್ದಾರೆ. ಮೊಹಮ್ಮದ್ ಶಮಿ ತನ್ನ ಮಾರಕ ಬೌಲಿಂಗ್ ಮೂಲಕ ಶ್ರೀಲಂಕಾ ತಂಡವನ್ನು ಕೇವಲ 55 ರನ್‌ಗಳಿಗೆ  ಕಟ್ಟಿ ಹಾಕಿದರು.

ತ್ರಿವರ್ಣ ಧ್ವಜದ ವೈಭವ ಹೆಚ್ಚಿಸಿದ ಶಮಿ :  
ಮೊಹಮ್ಮದ್ ಶಮಿ ಮಾರಕ ಬೌಲಿಂಗ್ ಮಾಡಿ 5 ಓವರ್‌ಗಳಲ್ಲಿ ಕೇವಲ 18 ರನ್ ನೀಡಿ 5 ವಿಕೆಟ್  ಕಬಳಿಸಿದರು. ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಶ್ರೀಲಂಕಾ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ 5 ವಿಕೆಟ್ ಪಡೆಯುವ ಮೂಲಕ ಹೀರೋ ಆಗಿ ಹೊರಹೊಮ್ಮಿದ್ದಾರೆ. ವಿಶ್ವಕಪ್ 2023 ರ ಮೊದಲ ಪಂದ್ಯದಲ್ಲಿ, ಮೊಹಮ್ಮದ್ ಶಮಿ ಬದಲಿಗೆ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ನೊಂದಿಗೆ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ  ಕಣಕ್ಕಿಳಿದಿತ್ತು. ಇದಾದ ಬಳಿಕ ಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶ ವಿರುದ್ಧದ ಪಂದ್ಯಗಳಲ್ಲೂ ಮೊಹಮ್ಮದ್ ಶಮಿಗೆ ಟೀಂ ಇಂಡಿಯಾದಲ್ಲಿ  ಅವಕಾಶ ನೀಡಲಿಲ್ಲ. ಮೊಹಮ್ಮದ್ ಶಮಿ ಬದಲಿಗೆ ಭಾರತ ತಂಡದ ಮ್ಯಾನೇಜ್‌ಮೆಂಟ್ ಆಲ್‌ರೌಂಡರ್ ಶಾರ್ದೂಲ್ ಠಾಕೂರ್‌ಗೆ ಆದ್ಯತೆ ನೀಡಿತ್ತು.   

ಇದನ್ನೂ ಓದಿ : My Name Is... ಕ್ರಿಕೆಟ್ ಮೈದಾನದಲ್ಲಿ ದೊಡ್ಡ ಎಂಟರ್ಟೈನರ್ ವಿರಾಟ್ ಕೊಹ್ಲಿ, ವಿಡಿಯೋ ವೈರಲ್

ಸಾಮರ್ಥ್ಯ ಸಾಬೀತುಪಡಿಸಿದ ಛಲಗಾರ  : 
ಶಾರ್ದೂಲ್ ಠಾಕೂರ್ ಅವರ ಫ್ಲಾಪ್ ಶೋ ಮತ್ತು ಹಾರ್ದಿಕ್ ಪಾಂಡ್ಯ ಗಾಯಗೊಂಡ ನಂತರ,  ಮೊಹಮ್ಮದ್ ಶಮಿಗೆ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಸಿಕ್ಕಿತು. ಅಕ್ಟೋಬರ್ 22 ರಂದು, ಮೊಹಮ್ಮದ್ ಶಮಿ 2023 ರ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ತಮ್ಮ ಮೊದಲ ಪಂದ್ಯವನ್ನು ಆಡಿದರು. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಬದಲಿಗೆ ಮೊಹಮ್ಮದ್ ಶಮಿ ಪ್ಲೇಯಿಂಗ್ 11 ನಲ್ಲಿ ಅವಕಾಶ ಪಡೆದರು. ಇಲ್ಲೇ ಶಮಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು.  

 ಶ್ರೀಲಂಕಾ ವಿರುದ್ದ ಬಿರುಗಾಳಿ ಎಬ್ಬಿಸಿದ ಶಮಿ : 
ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಮೊಹಮ್ಮದ್ ಶಮಿ 10 ಓವರ್‌ಗಳಲ್ಲಿ 54 ರನ್ ನೀಡಿ 5 ವಿಕೆಟ್ ಕಬಳಿಸಿದ್ದರು. ಇದಾದ ಬಳಿಕ ಮೊಹಮ್ಮದ್ ಶಮಿ ಮಾರಕ ಬೌಲಿಂಗ್ ಮೂಲಕ ಇಂಗ್ಲೆಂಡ್ ತಂಡದ ಬೆವರಿಳಿಸಿದ್ದರು. ಅಕ್ಟೋಬರ್ 29 ರಂದು ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಮೊಹಮ್ಮದ್ ಶಮಿ 7 ಓವರ್‌ಗಳಲ್ಲಿ 22 ರನ್ ನೀಡಿ 4 ವಿಕೆಟ್ ಪಡೆದಿದ್ದಾರೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ  ನಿನ್ನೆ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ, ಮೊಹಮ್ಮದ್ ಶಮಿಯ ಇನ್ನಷ್ಟು ಅಪಾಯಕಾರಿ ರೂಪ  ಪ್ರದರ್ಶಿಸಿದ್ದಾರೆ. ಮೊಹಮ್ಮದ್ ಶಮಿ ಶ್ರೀಲಂಕಾ ವಿರುದ್ಧ ಮಾರಕ ಬೌಲಿಂಗ್ ಮಾಡಿ 5 ಓವರ್ ಗಳಲ್ಲಿ ಕೇವಲ 18 ರನ್ ನೀಡಿ 5 ವಿಕೆಟ್ ಕಬಳಿಸಿದರು. ಮೊಹಮ್ಮದ್ ಶಮಿ ಅವರ ಈ ಮಾರಕ ಬೌಲಿಂಗ್‌ ನಿಂದಾಗಿಯೇ ಭಾರತ ಶ್ರೀಲಂಕಾವನ್ನು 302 ರನ್‌ಗಳಿಂದ ಸೋಲಿಸುವುದು ಸಾಧ್ಯವಾಯಿತು. ಬಿರುಸಿನ ಬೌಲಿಂಗ್‌ಗಾಗಿ ಮೊಹಮ್ಮದ್ ಶಮಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.  

ಇದನ್ನೂ ಓದಿ : ಲಂಕಾ ವಿರುದ್ಧ ಟೀಂ ಇಂಡಿಯಾ ಗೆದ್ದಿದ್ದು ಶಮಿಯಿಂದಲ್ಲ, ಈತನಿಂದ..! ಈತನೇ ಮ್ಯಾಚ್ ವಿನ್ನರ್ ಎಂದ ರೋಹಿತ್ ಶರ್ಮಾ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News