Weight Loss Tea: ಈ ಸ್ಪೆಷಲ್ ಟೀ ಸೇವನೆಯಿಂದ ಒಂದೇ ತಿಂಗಳಲ್ಲಿ ಕಡಿಮೆಯಾಗುತ್ತೆ ತೂಕ

Weight Loss Tea: ಟೀ, ಕಾಫಿ ಹೆಸರು ಕೇಳಿದರೆ ಸಾಕು ಕೆಲವರಿಗೆ ಬಾಯಲ್ಲಿ ನೀರೂರುತ್ತದೆ. ಭಾರತದಾದ್ಯಂತ ಹಾಲು, ಸಕ್ಕರೆ ಮತ್ತು ಚಹಾ ಎಲೆಗಳಿಂದ ತಯಾರಿಸಿದ ಚಹಾವನ್ನು ವ್ಯಾಪಕವಾಗಿ ಸೇವಿಸಲಾಗುತ್ತದೆ. ಆದರೆ, ನೀವು ಎಂದಾದರೂ ಗಿಡಮೂಲಿಕೆಗಳಿಂದ ತಯಾರಿಸಿದ ಚಹಾ ಕುಡಿದಿದ್ದೀರಾ? ಆರೋಗ್ಯಕ್ಕೆ ಇದು ಎಷ್ಟು ಪ್ರಯೋಜನಕಾರಿ ಎಂದು ತಿಳಿದಿದೆಯೇ? 

Written by - Yashaswini V | Last Updated : Dec 18, 2023, 10:16 AM IST
  • ವೈಟ್ ಟೀ ಅನ್ನು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
  • ಇದೊಂದು ಗಿಡಮೂಲಿಕೆ ಚಹಾ
  • ಈ ಚಹಾ ಸೇವನೆಯಿಂದ ತಿಂಗಳೊಳಗೆ ತೂಕ ಇಳಿಕೆಯಾಗುವುದರ ಜೊತೆಗೆ ಚರ್ಮದ ಆರೋಗ್ಯಕ್ಕೂ ಇದು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
Weight Loss Tea: ಈ ಸ್ಪೆಷಲ್ ಟೀ ಸೇವನೆಯಿಂದ ಒಂದೇ ತಿಂಗಳಲ್ಲಿ ಕಡಿಮೆಯಾಗುತ್ತೆ ತೂಕ  title=

Weight Loss Tea: ಭಾರತದಾದ್ಯಂತ ಚಹಾ ಪ್ರಿಯರಿಗೇನು ಕಡಿಮೆಯಿಲ್ಲ. ಹಾಲು, ಸಕ್ಕರೆ, ಟೀ ಪುಡಿಯಿಂದ ತಯಾರಿಸುವ ಚಹಾ ಜೊತೆಗೆ ಮಸಾಲೆ ಚಹಾ, ಬ್ಲಾಕ್ ಟೀ, ಗ್ರೀನ್ ಟೀಯಂತಹ ಚಹಾ ಬಳಕೆಯೂ ಕೂಡ ಹೆಚ್ಚಾಗಿದೆ. ಆದರೆ, ವೈಟ್ ಟೀ ಎಂದರೆ ಬಿಳಿ ಚಹಾದ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? 

ಆರೋಗ್ಯ ತಜ್ಞರ ಪ್ರಕಾರ, ವೈಟ್ ಟೀ ಅನ್ನು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದೊಂದು ಗಿಡಮೂಲಿಕೆ ಚಹಾ ಆಗಿದ್ದು ಈ ಚಹಾ ಸೇವನೆಯಿಂದ ತಿಂಗಳೊಳಗೆ ತೂಕ ಇಳಿಕೆಯಾಗುವುದರ ಜೊತೆಗೆ ಚರ್ಮದ ಆರೋಗ್ಯಕ್ಕೂ ಇದು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ ಯಾವುದೀ ಚಹಾ, ಇದರಲ್ಲಿ ಯಾವೆಲ್ಲಾ ಪೋಷಕಾಂಶಗಳು ಹೆಚ್ಚಾಗಿವೆ. ಇದರ ಪ್ರಯೋಜನಗಳೇನು ಎಂದು ತಿಳಿಯೋಣ... 

ಪೋಷಕಾಂಶಗಳ ಗಣಿ ಬಿಳಿ ಚಹಾ: 
ವೈಟ್ ಚಹಾ/ಬಿಳಿ ಚಹಾವು ಆಂಟಿಮೈಕ್ರೊಬಿಯಲ್ ಗುಣಮಟ್ಟವನ್ನು ಹೊಂದಿದ್ದು ಇದು ನಮ್ಮನ್ನು ಹಲವು ರೋಗಗಳಿಂದ ದೂರ ಉಳಿಯುವಂತೆ ಮಾಡುತ್ತದೆ. ಇದಲ್ಲದೆ, ವೈಟ್ ಟೀಯಲ್ಲಿ ಪಾಲಿಫಿನಾಲ್‌ಗಳು, ಫೈಟೊನ್ಯೂಟ್ರಿಯೆಂಟ್‌ಗಳು ಮತ್ತು ಅನೇಕ ರೀತಿಯ ಕ್ಯಾಟೆಚಿನ್‌ಗಳು,  ಟ್ಯಾನಿನ್‌ಗಳು, ಫ್ಲೋರೈಡ್ ಮತ್ತು ಫ್ಲೇವನಾಯ್ಡ್‌ಗಳು ಕೂಡ ಕಂಡು ಬರುತ್ತವೆ. 

ಇದನ್ನೂ ಓದಿ- ಅಡುಗೆ ಮನೆಯಲ್ಲಿರುವ ಈ 2 ಪದಾರ್ಥ ಬಳಸಿ ಮನೆಯಲ್ಲಿಯೇ ತಯಾರಿಸಿ ಈ ಎಣ್ಣೆ, ಕೂದಲುದುರುವಿಕೆಗೆ ರಾಮಬಾಣ!

ವೈಟ್ ಟೀ ಕುಡಿಯುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳು ಲಭ್ಯವಾಗಲಿವೆ?  
ಗ್ರೇಟರ್ ನೋಯ್ಡಾದ GIMS ಆಸ್ಪತ್ರೆಯ ಮಾಜಿ ಆಹಾರ ತಜ್ಞ ಡಾ. ಆಯುಷಿ ಯಾದವ್ ಅವರ ಪ್ರಕಾರ, ವೈಟ್ ಟೀ ಕುಡಿಯುವುದರಿಂದ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಗಳಿವೆ. ಅವುಗಳೆಂದರೆ... 
* ತೂಕ ಇಳಿಕೆ:
ವೈಟ್ ಟೀ ಸೇವನೆಯು ಗ್ರೀನ್ ಟೀಯಂತೆಯೇ ತೂಕ ಇಳಿಕೆಗೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. 

* ಸ್ವತಂತ್ರ ರಾಡಿಕಲ್ಗಳಿಂದ ರಕ್ಷಣೆ: 
ಬಿಳಿ ಚಹಾದಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು ಇದು ನಮ್ಮನ್ನು ದೇಹಕ್ಕೆ ಹಾನಿ ಮಾಡುವ ಸ್ವತಂತ್ರ ರಾಡಿಕಲ್ಗಳಿಂದ ರಕ್ಷಿಸುತ್ತದೆ. 

* ಚರ್ಮಕ್ಕೆ ಪ್ರಯೋಜನಕಾರಿ: 
ವೈಟ್ ಟೀಯಲ್ಲಿ ವಿರೋಧಿ ವಯಸ್ಸಾದ ಗುಣಲಕ್ಷಣಗಳು ಹೆಚ್ಚಾಗಿ ಕಂಡು ಬರುವುದರಿಂದ ಇದು  ಮುಖದ ಸುಕ್ಕುಗಳು ಮತ್ತು ಸೂಕ್ಷ್ಮ ಗೆರೆಗಳನ್ನು ಮಾಯವಾಗಿಸುತ್ತದೆ. ಮಾತ್ರವಲ್ಲ, ನಿಯಮಿತವಾಗಿ ವೈಟ್ ಚಹಾ ಸೇವನೆಯಿಂದ ಚಿರ ಯೌವನವನ್ನು ಕಾಪಾಡಿಕೊಳ್ಳಬಹುದು. 

* ಎನರ್ಜಿ ಬೂಸ್ಟರ್: 
ವೈಟ್ ಟೀ ಕುಡಿಯುವುದರಿಂದ ನಿಮಗೆ ಉಲ್ಲಾಸ ಸಿಗುತ್ತದೆ ಮತ್ತು ಆಯಾಸ ದೂರವಾಗುತ್ತದೆ.ಮುಂಜಾನೆ ಖಾಲಿ ಹೊಟ್ಟೆಯಲ್ಲಿ ವೈಟ್ ಟೀ ಕುಡಿಯುವುದರಿಂದ ದಿನವಿಡೀ ಶಕ್ತಿಯುತವಾಗಿರಲು ಇದು ಸಹಕಾರಿ ಆಗಿದೆ.  

* ಸಿಹಿ ತಿನಿಸುಗಳ ಕಡುಬಯಕೆ: 
ಬಿಳಿ ಚಹಾ ಕುಡಿಯುವುದರಿಂದ ಸಿಹಿ ತಿನಿಸುಗಳ ಕಡುಬಯಕೆ ಕಡಿಮೆಯಾಗುತ್ತದೆ. ಇದರಿಂದಾಗಿ ತೂಕ ಕಡಿಮೆಯಾಗುವುದರ ಜೊತೆಗೆ ಇದು ಒಟ್ಟಾರೆ ಆರೋಗ್ಯವನ್ನೂ ಸುಧಾರಿಸುತ್ತದೆ. 

ಇದನ್ನೂ ಓದಿ- ಕೆಲಸ ಮಾಡುವಾಗ ಸ್ವಲ್ಪ ಮಟ್ಟಿಗೆ ನಿದ್ರಿಸುವುದು ಒಳ್ಳೆಯದೇ? ಇಲ್ಲಿದೆ ಕೆಲವು ಮಹತ್ವದ ಸಲಹೆಗಳು 

* ಮಲಬದ್ಧತೆ ನಿವಾರಣೆ: 
ನಿಯಮಿತವಾಗಿ ಬಿಳಿ ಚಹಾ ಸೇವನೆಯಿಂದ ಅಜೀರ್ಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದ್ದು ಇದು ಗ್ಯಾಸ್ಟ್ರೀಕ್ ಸಮಸ್ಯೆಯಿಂದ ಮುಕ್ತಿ ನೀಡಲಿದೆ. ಇದು ಮಲಬದ್ಧತೆ ನಿವಾರಣೆಗೂ ಪ್ರಯೋಜನಕಾರಿ ಆಗಿದೆ. 

* ಮೆಮೋರಿ ಪವರ್: 
ಬಿಳಿ ಚಹಾದಲ್ಲಿ  ಕಂಡುಬರುವ ಪಾಲಿಫಿನಾಲ್‌ಗಳು  ನೆನಪಿನ ಶಕ್ತಿಯನ್ನು ಹೆಚ್ಚಿಸಲು ತುಂಬಾ ಪ್ರಯೋಜನಕಾರಿ ಆಗಿವೆ. 
 

ಸೂಚನೆ:  ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News