ನವದೆಹಲಿ: ಸರ್ಕಾರಿ ನೌಕರರಿಗೆ ಸಿಹಿಸುದ್ದಿಯೊಂದು ಪ್ರಕಟವಾಗಿದೆ. ಹೊಸ ವರ್ಷ ಬರುವ ಮುನ್ನವೇ ಮತ್ತೊಂದು ರಾಜ್ಯ ಸರ್ಕಾರ ನೌಕರರಿಗೆ ಭರ್ಜರಿ ಸುದ್ದಿ ನೀಡಿದೆ. ಪಂಜಾಬ್ ಸರ್ಕಾರ ಕೂಡ ತುಟ್ಟಿಭತ್ಯೆಯನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ಈ ಬಗ್ಗೆ ಪಂಜಾಬ್ ಮುಖ್ಯಮಂತ್ರಿ ಮಾಹಿತಿ ನೀಡಿದ್ದಾರೆ. ನೌಕರರ ಈ ತುಟ್ಟಿಭತ್ಯೆ ಡಿಸೆಂಬರ್ ತಿಂಗಳಿನಿಂದ ಜಾರಿಗೆ ಬರಲಿದೆ.(Business News In Kannada)
ಪಂಜಾಬ್ ರಾಜ್ಯ ಸಚಿವಾಲಯದ ಅಲೈಡ್ ಸರ್ವಿಸಸ್ ಯೂನಿಯನ್ (ಪಿಎಸ್‌ಎಂಎಸ್‌ಯು) ಅಧ್ಯಕ್ಷ ಅಮ್ರಿಕ್ ಸಿಂಗ್, ಹೆಚ್ಚಳದ ನಂತರ, ಡಿಎ ಶೇ. 38 ರಷ್ಟು ಹೆಚ್ಚಾಗಲಿದೆ ಎಂದಿದ್ದಾರೆ. ಪಿಎಸ್‌ಎಂಎಸ್‌ಯು ಪ್ರತಿನಿಧಿಗಳೊಂದಿಗೆ ಇಲ್ಲಿ ನಡೆದ ಸಭೆಯ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ ಮುಖ್ಯಮಂತ್ರಿ ಮಾನ್ ನೌಕರರ ವಿವಿಧ ಬೇಡಿಕೆಗಳ ಕುರಿತು ಚರ್ಚೆ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ನೀಡಿದ್ದಾರೆ
ಇಂದು ಪಂಜಾಬ್ ರಾಜ್ಯ ಸಚಿವಾಲಯದ ಅಲೈಡ್ ಸರ್ವೀಸಸ್ ಯೂನಿಯನ್ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲಾಗಿದೆ ಮತ್ತು ಅವರ ಸಮಸ್ಯೆಗಳನ್ನು ವಿವರವಾಗಿ ಚರ್ಚಿಸಲಾಗಿದೆ ಎಂದು ಮಾನ್ ಸಾಮಾಜಿಕ ಮಾಧ್ಯಮ ವೇದಿಕೆ 'X' ನಲ್ಲಿ ಬರೆದುಕೊಂಡಿದ್ದು, ನಾವು ಉದ್ಯೋಗಿಗಳಿಗೆ ಹೊಸ ವರ್ಷದ ಉಡುಗೊರೆಯನ್ನು ನೀಡಲಿದ್ದೇವೆ ಎಂದು ತಿಳಿಸಲು ನನಗೆ ಅತೀವ ಸಂತಸವಾಗುತ್ತಿದೆ ಎಂದಿದ್ದಾರೆ. ಇದರ ಜೊತೆಗೆ ತುಟ್ಟಿಭತ್ಯೆಯನ್ನು ಶೇ.4 ರಷ್ಟು ಹೆಚ್ಚಿಸಲಾಗಿದ್ದು, ಇದು ಡಿಸೆಂಬರ್ 1, 2023 ರಿಂದ ಜಾರಿಗೆ ಬರಲಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ-ಇಂದಿನಿಂದ ಅಗ್ಗದದ ದರದಲ್ಲಿ ಚಿನ್ನ ಮಾರಾಟ ಆರಂಭ, ಈ ಸುವರ್ಣಾವಕಾಶ ತಪ್ಪಿಸಿಕೊಳ್ಳಬೇಡಿ!
ಸಭೆಯಲ್ಲಿ ಈ ಮಾಹಿತಿ ನೀಡಲಾಗಿದೆ
ಉಳಿದ ಶೇಕಡ ಎಂಟರ ಡಿಎಯನ್ನೂ ಶೀಘ್ರ ನೀಡಲಾಗುವುದು ಎಂದು ಮುಖ್ಯಮಂತ್ರಿ ಮಾನ್ ಭರವಸೆ ನೀಡಿದ್ದಾರೆ ಎಂದು ಸಭೆಯ ನಂತರ ಪಿಎಸ್‌ಎಂಎಸ್‌ಯು ಅಧ್ಯಕ್ಷರು ತಿಳಿಸಿದ್ದಾರೆ. ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಬೇಕು, ಬಾಕಿ ಇರುವ ಶೇ 12 ಡಿಎ ಬಿಡುಗಡೆ ಮಾಡಬೇಕು ಮತ್ತು ಗುತ್ತಿಗೆ ನೌಕರರನ್ನು ಕಾಯಂಗೊಳಿಸಬೇಕು ಎಂದು ನೌಕರರು ಈ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ-ನಿಮ್ಮ ಖಾತೆಯಲ್ಲಿ 35 ಸಾವಿರ ರೂ.ಗಳಿವೆಯಾ? ಈ ದೇಶಕ್ಕೆ ಹೋಗಿ ಕೋಟ್ಯಾಧೀಶರಾಗುವಿರಿ!
ಮುಷ್ಕರವನ್ನು ಮುಂದೂಡಲಾಗಿದೆ
ಈ ಸಭೆಯಬಲಿಕ ನವೆಂಬರ್ 8 ರಂದು ಆರಂಭಗೊಂಡ ಒಂದು ತಿಂಗಳ ಮುಷ್ಕರವನ್ನು ಭಾನುವಾರ PSMSU ಸ್ಥಗಿತಗೊಳಿಸಿದೆ. ಮುಖ್ಯಮಂತ್ರಿ ಭೇಟಿಗೂ ಮುನ್ನವೇ ಧರಣಿಯನ್ನು ಸಂಘಟನೆ ಮೂಂದೂಡಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ