Pushpa 2 ಸೆಟ್‌ನಿಂದ ರಶ್ಮಿಕಾ ಮಂದಣ್ಣ ಶೇರ್ ಮಾಡಿದ ಫೋಟೋ ಫುಲ್ ವೈರಲ್

Photo from Pushpa The Rule Set:ಈ ಮಧ್ಯೆ ನಟಿ ರಶ್ಮಿಕಾ ಮಂದಣ್ಣ ಸೆಟ್‌ನಿಂದ ಹೊಸ ಫೋಟೋವನ್ನು ಶೇರ್ ಮಾಡುವ ಮೂಲಕ ಸಂಚಲನ ಮೂಡಿಸಿದ್ದಾರೆ.

Written by - Ranjitha R K | Last Updated : Feb 13, 2024, 01:16 PM IST
  • 'ಪುಷ್ಪಾ 2: ದಿ ರೂಲ್' ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ.
  • ಚಿತ್ರಕ್ಕಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.
  • ಸದ್ಯ ಚಿತ್ರದ ಶೂಟಿಂಗ್ ನಡೆಯುತ್ತಿದೆ.
Pushpa 2  ಸೆಟ್‌ನಿಂದ ರಶ್ಮಿಕಾ ಮಂದಣ್ಣ  ಶೇರ್ ಮಾಡಿದ ಫೋಟೋ ಫುಲ್ ವೈರಲ್ title=

Rashmika Mandanna Shares Photo from Pushpa The Rule Set : 'ಪುಷ್ಪಾ 2: ದಿ ರೂಲ್' ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಚಿತ್ರಕ್ಕಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.  ಈ ಚಿತ್ರವು ಮೊದಲ ಭಾಗಕ್ಕಿಂತ ಕುತೂಹಲಕಾರಿಯಾಗಿರಲಿದೆ ಎನ್ನುವುದನ್ನು ಅಲ್ಲು ಅರ್ಜುನ್ ಕೂಡಾ ಹಂಚಿಕೊಂಡಿದ್ದಾರೆ. ಇದು ಜನರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಸದ್ಯ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಈ ಮಧ್ಯೆ ನಟಿ ರಶ್ಮಿಕಾ ಮಂದಣ್ಣ ಸೆಟ್‌ನಿಂದ ಹೊಸ ಫೋಟೋವನ್ನು ಶೇರ್ ಮಾಡುವ ಮೂಲಕ ಸಂಚಲನ ಮೂಡಿಸಿದ್ದಾರೆ.

'ಪುಷ್ಪ 2: ದಿ ರೂಲ್' ಚಿತ್ರೀಕರಣದಲ್ಲಿ ನಿರತರಾಗಿರುವ ನಟಿ ರಶ್ಮಿಕಾ ಮಂದಣ್ಣ  ಚಿತ್ರದ ಸೆಟ್‌ಗಳಿಂದ ಚಿತ್ರದ ನಿರ್ದೇಶಕ ಸುಕುಮಾರ್ ಅವರ ಚಿತ್ರವನ್ನು ಹಂಚಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ನಿರ್ದೇಶಕ ಸುಕುಮಾರ್ ಸಿಂಹದ ಪ್ರತಿಮೆಯ ಬಳಿ ನಿಂತಿರುವುದನ್ನು ಕಾಣಬಹುದು.

ಇದನ್ನೂ ಓದಿ : Upendra UI Film Song: ಪ್ರೇಮಿಗಳ ದಿನಕ್ಕೆ ಹೊಸ ಸರ್ಪ್ರೈಸ್‌ ನೀಡಲಿದ್ದಾರೆ ರಿಯಲ್‌ ಸ್ಟಾರ್‌

'ಪುಷ್ಪ 2: ದಿ ರೂಲ್' ಚಿತ್ರದ ಶೂಟಿಂಗ್ : 
'ಪುಷ್ಪ 2: ದಿ ರೂಲ್' ಚಿತ್ರದ ಶೂಟಿಂಗ್ ವೇಗವಾಗಿ ನಡೆಯುತ್ತಿದೆ. 'ಪುಷ್ಪ 2: ದಿ ರೂಲ್' ಚಿತ್ರವು 15 ಆಗಸ್ಟ್ 2024 ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಚಿತ್ರದ ಪೋಸ್ಟರ್ ಈಗಾಗಲೇ ಅಧಿಕೃತವಾಗಿ ಬಿಡುಗಡೆಯಾಗಿದೆ.

 

'ಪುಷ್ಪ: ದಿ ರೈಸ್' ದಾಖಲೆಯ ಯಶಸ್ಸನ್ನು ಗಳಿಸಿತ್ತು :
'ಪುಷ್ಪ : ದಿ ರೈಸ್' ಚಿತ್ರದ ದಾಖಲೆಯ ಯಶಸ್ಸಿನ ನಂತರ, ರಾಷ್ಟ್ರ ಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್ ಸುಕುಮಾರ್ ನಿರ್ದೇಶನದ ಈ ಚಿತ್ರದ ಸೀಕ್ವೆಲ್‌ ನೊಂದಿಗೆ ಮರಳುತ್ತಿದ್ದಾರೆ. ಮುಂದಿನ ಭಾಗದಲ್ಲಿ ರಶ್ಮಿಕಾ ಮಂದಣ್ಣ ಮತ್ತು ಫಹದ್ ಫಾಸಿಲ್ ಕೂಡಾ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ : ಟ್ರೈಲರ್ ನೋಡಿದ್ರೆ ಸಿನಿಮಾ ಬಗ್ಗೆ ಆಸಕ್ತಿ ಮೂಡುತ್ತೆ

2 ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿರುವ 'ಪುಷ್ಪ: ದಿ ರೈಸ್': 
'ಪುಷ್ಪ: ದಿ ರೈಸ್' ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಮೈತ್ರಿ ಮೂವೀ ಮೇಕರ್ಸ್ ಮತ್ತು ಸುಕುಮಾರ್ ರೈಟಿಂಗ್ಸ್ ನಿರ್ಮಿಸಿರುವ 'ಪುಷ್ಪ' ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜಿಸಿದ್ದಾರೆ. ಮಿರೋಸ್ಲಾವ್ ಕುಬಾ ಬ್ರೋಜೆಕ್ ಅವರ ಛಾಯಾಗ್ರಹಣವಿದೆ.ಚಿತ್ರದ ಸಂಕಲನವನ್ನು ಕಾರ್ತಿಕಾ ಶ್ರೀನಿವಾಸ್ ಮತ್ತು ರೂಬೆನ್ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News