Viral Video: ಪ್ರತಿಯೊಂದು ದಿನ ನೀವು ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ವಿಡಿಯೋಗಳನ್ನು ವೀಕ್ಷಿಸುತ್ತಿರಬಹುದು, ಅವುಗಳಲ್ಲಿ ಕೆಲ ವಿಡಿಯೋಗಳನ್ನು ನೋಡಿದಾಗ ಇದು ನಿಜವಾಗಿಯೂ ಸಂಭವಿಸಬಹುದೇ ಎಂಬ ಪ್ರಶ್ನೆ ಕಾಡಲಾರಂಭಿಸುತ್ತದೆ. ವಿಶ್ವಾದ್ಯಂತೆ ಅಂತಹ ಅನೇಕ ವಿಷಯಗಳು ಪ್ರತಿದಿನ ನಮ್ಮ ಕಣ್ಣ ಮುಂದೆ ಹಾದು ಹೋಗುತ್ತವೆ, ಆದರೆ ಅಂತಹದ್ದೊಂದು ವೀಡಿಯೊ ಅಥವಾ ಫೋಟೋ ಭಾರತದಿಂದ ಹೊರಹೊಮ್ಮಿದ್ದೆ ಆಗಿದ್ದರೆ, ನಾವು ಅದನ್ನು ಒಮ್ಮೆ ಅಲ್ಲ ಮತ್ತೆ ಮತ್ತೆ ನೋಡುತ್ತೇವೆ. ಅಂತಹ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅದರಲ್ಲಿ ಕಟ್ಟಡವೊಂದು ಗೋಚರಿಸುತ್ತಿದೆ. ಕಟ್ಟಡದ ವಿಡಿಯೋದಲ್ಲಿ ಏನಿದೆ ವಿಶೇಷ ಎಂದು ಈಗ ನೀವು ಆಶ್ಚರ್ಯ ಪಡಬಹುದು, ಆದರೆ ಈ ಕಟ್ಟಡವನ್ನು ನೀವು ನೋಡಿದರೆ, ನೀವು ಖಂಡಿತವಾಗಿಯೂ ಗೊಂದಲಕ್ಕೊಳಗಾಗುತ್ತೀರಿ. (Viral News In Kannada)
ನೀವು ಎಂದಾದರೂ ಮಲಗಿರುವ ಕಟ್ಟಡ ನೋಡಿದ್ದೀರಾ?
ವಿಡಿಯೋದಲ್ಲಿ ಕಂಡುಬರುತ್ತಿರುವ ಕಟ್ಟಡ ಮಹಾರಾಷ್ಟ್ರದ ಪುಣೆಯದ್ದು ಎನ್ನಲಾಗಿದೆ. ವಾಸ್ತವದ್ಲಲಿ, ಇದು ಬಿಲ್ಡಿಂಗ್ ಕಟ್ಟುವ ಕಂಪನಿಯೊಂದರ ಪ್ರಧಾನ ಕಛೇರಿಯಾಗಿದೆ, ಇದು ಸಾಕಷ್ಟು ಪ್ರಸಿದ್ಧವಾಗಿದೆ. ಈ ಕಟ್ಟಡವನ್ನು ನೋಡಿದರೆ, ಇದನ್ನು ಹೇಗೆ ನಿರ್ಮಿಸಲಾಗಿದೆ ಎಂದು ನೀವು ನಂಬಲು ಸಾಧ್ಯವಾಗುವುದಿಲ್ಲ. ಏಕೆಂದರೆ, ಕಟ್ಟಡವು ಸಾಮಾನ್ಯ ಕಟ್ಟಡಗಳಂತೆ ಭೂಮಿಯ ನಿಂತಿರುವಂತೆ ಕಂಗೊಳಿಸುವುದಿಲ್ಲ, ಆದರೆ ಸಂಪೂರ್ಣವಾಗಿ ಮಲಗುತ್ತಿದೆಯೇ ಎಂಬಂತೆ ಕಾಣುತ್ತದೆ. ಮೊದಲ ನೋಟದಲ್ಲಿ ಈ ಕಟ್ಟಡವು ಕುಸಿಯಲಿದೆ ಅಥವಾ ಬೀಳುತ್ತಿದೆ ಎಂದು ನಿಮಗೆ ಅನಿಸುತ್ತದೆ. ಹತ್ತಿರ ಹೋದಾಗ ಕಟ್ಟಡ ವಕ್ರವಾಗಿದೆ ಅನಿಸುತ್ತದೆ.
ಇದನ್ನೂ ಓದಿ-Viral Video: ವಾಹನದಲ್ಲಿ ಇಂಧನ ಖಾಲಿ, ಕೈದಿಗಳಿಂದಲೇ ವಾಹನ ತಳ್ಳಿಸಿದ ಪೊಲೀಸರು! 'ಅದು ಬಿಹಾರ' ಎಂದ ನೆಟ್ಟಿಗರು!
ನೋಡಿದ್ರೆ ತಲೆ ಗಿರ್ರ್ ಅನ್ನಿಸುತ್ತೆ
ಈ ಕಟ್ಟಡವು ಒಂದು ಕ್ಷಣ ನಿಮ್ಮ ತಲೆಗೂ ಯೋಚಿಸುವಂತೆ ಮಾಡುತ್ತದೆ ಮತ್ತು ನೀವು ಅದನ್ನು ಮರೆಯಲು ಸಾಧ್ಯವಾಗುವುದಿಲ್ಲ. ಸರಳ ಭಾಷೆಯಲ್ಲಿ ಹೇಳುವುದಾದರೆ, ಇದು ಆರಾಮವಾಗಿ ಮಲಗಿರುವ ಕಟ್ಟಡವಾಗಿದೆ, ಇದರಲ್ಲಿ ಅನೇಕ ಜನರು ಕೆಲಸ ಮಾಡುತ್ತಾರೆ. ಕಟ್ಟಡದ ಹೊರಭಾಗದಲ್ಲಿ, ಗಾಜಿನ ಕಿಟಕಿಗಳನ್ನು ಹೊಂದಿರುವ ಕೆಲವು ಚೌಕಾಕಾರದ ಆಕೃತಿಗಳು ಕೂಡ ನಿಮಗೆ ಗೋಚರಿಸುತ್ತವೆ, ಅದರಲ್ಲಿ ಕಚೇರಿಗಳು ಇವೆ. ಈ ವೀಡಿಯೋ ನೋಡಿ ಜನರು ತಮಾಷೆಯಿಂದ ಕೂಡಿದ ಕಾಮೆಂಟ್ಗಳನ್ನೂ ಮಾಡುತ್ತಿದ್ದಾರೆ. ಈ ಕುರಿತು ಬರೆದುಕೊಂಡ ಓರ್ವ ಬಳಕೆದಾರ 'ಇದು ಡಾಕ್ಟರ್ ಸ್ಟ್ರೇಂಜ್ ಅವರ ಮನೆ ಎಂಬಂತೆ ಕಾಣುತ್ತಿದೆ' ಎಂದು ಬರೆದಿದ್ದಾರೆ. ಪುಣೆ ಈಸ್ ಲವ್ ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಿಂದ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ, ಈ ವೀಡಿಯೊದೊಂದಿಗೆ, 'ನೀವು ಪುಣೆಯಲ್ಲಿ ಈ ಕಟ್ಟಡವನ್ನು ನೋಡಿದ್ದೀರಾ..?? ಪುಣೆಯ ನಮ್ಮ ಕ್ಯಾಂಪ್ ಪ್ರದೇಶದಲ್ಲಿ ಬರ್ಗರ್ ಕಿಂಗ್ ಹೇಗೆ ಪ್ರಸಿದ್ಧವಾಗಿದೆಯೋ, ಕುಮಾರ್ ಬಿಲ್ಡರ್ಸ್ನ ಈ ಕಟ್ಟಡವೂ ಅಷ್ಟೇ ಪ್ರಸಿದ್ಧವಾಗಿದೆ ಎಂದು ಹೇಳಲಾಗಿದೆ.
ವೈರಲ್ ಆಗುತ್ತಿರುವ ವಿಡಿಯೋ ಇಲ್ಲಿದೆ
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.