Comedian Tukali Santhosh car accident: ಹಾಸ್ಯನಟ. ಬಿಗ್ ಬಾಸ್ ಸ್ಪರ್ಧಿ ತುಕಾಲಿ ಸಂತೋಷ್ ದಂಪತಿ ಪ್ರಯಾಣಿಸುತ್ತಿದ್ದ ಕಾರು ಮತ್ತು ಆಟೋ ರಿಕ್ಷಾ ನಡುವೆ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಆಟೋ ಚಾಲಕ ಮೃತಪಟ್ಟಿದ್ದಾನೆ.
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕುರುಡಿಹಳ್ಳಿ ಸಮೀಪ ಕಳೆದ ರಾತ್ರಿ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಮೃತಪಟ್ಟಿರುವ ಆಟೋ ಚಾಲಕನನ್ನು ಕೋಡಹಳ್ಳಿಪಾಳ್ಯ ಗ್ರಾಮದ ವಾಸಿ ಜಗದೀಶ್ (44) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ- ಜಗಳ ಬಿಡಿಸಿದ ಕಾರಣಕ್ಕೆ ದೋಸೆ ಹಂಚಿನಿಂದ ಹೊಡೆದು ಮಹಿಳೆಯ ಕೊಲೆ
ಬುಧವಾರ ರಾತ್ರಿ ಹಾಸ್ಯನಟ ತುಕಾಲಿ ಸಂತೋಷ್ ಹಾಗೂ ಅವರ ಪತ್ನಿ ಮಾನಸ ಅವರು ತುಮಕೂರಿನಲ್ಲಿ ಸಿನಿಮಾ ಚಿತ್ರೀಕರಣ ಮುಗಿಸಿಕೊಂಡು ತನ್ನ ಗ್ರಾಮ ಹೊಳೆನರಸಿಪುರಕ್ಕೆ ಕಾರಿನಲ್ಲಿ ತೆರಳುವಾಗ ಕುಣಿಗಲ್ ಕಡೆಯಿಂದ ಕೋಡಹಳ್ಳಿಪಾಳ್ಯ ಗ್ರಾಮಕ್ಕೆ ಹೋಗುತ್ತಿದ್ದ ಆಟೋ- ಕಾರಿನ ನಡುವೆ ಡಿಕ್ಕಿ ಸಂಭವಿಸಿದೆ.
ಇದನ್ನೂ ಓದಿ- Job Fraud Alert: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ!
ಈ ಅಪಘಾತದಲ್ಲಿ ಆಟೋ ಚಾಲಕ ತೀವ್ರವಾಗಿ ಗಾಯಗೊಂಡಿದ್ದು ತಕ್ಷಣವೇ ಅವರನ್ನು ಕುಣಿಗಲ್ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ದುರದೃಷ್ಟವಶಾತ್, ಚಿಕಿತ್ಸೆ ಫಲಕಾರಿ ಆಗದೆ ಗುರುವಾರ (ಮಾರ್ಚ್ 14) ಬೆಳಗಿನ ಜಾವ ಆಟೋ ಚಾಲಕ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
ಘಟನೆ ನಡೆದದ್ದು ಹೇಗೆ?
ಕುಣಿಗಲ್ ಹೈವೆಯಲ್ಲಿ ತುಕಾಲಿ ಸಂತೋಷ್ ಕಾರು ಅಪಘಾತ ನಡೆದಿದೆ. ತುಕಾಲಿ ಸಂತೋಷ್ ಕಾರಿಗೆ ಆಟೋ ಚಾಲಕನೇ ಬಂದು ಗುದ್ದಿದ್ದಾನೆ. ತುಮಕೂರಿನಲ್ಲಿ ಶೂಟಿಂಗ್ ಮುಗಿಸಿ ಮಂಡ್ಯಕ್ಕೆ ತೆರಳೋ ವೇಳೆ ಈ ಅಪಘಾತ ನಡೆದಿದೆ. ರಾತ್ರಿ ಏಳು ಗಂಟೆ ವೇಳೆಯಲ್ಲಿ ಅಪಘಾತ ಆಗಿದೆ.
ತುಕಾಲಿ ಸಂತೋಷ್ ಹೇಳಿದ್ದೇನು?
ಆಟೋ ಡ್ರೈವರ್ ಏಕಾಏಕಿ ಬಂದು ನಮ್ಮ ಕಾರಿಗೆ ಡಿಕ್ಕಿ ಹೊಡೆದರು. ನಾವೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದೆವು. ನಮ್ಮ ಕಾರು ಈಗ ಕುಣಿಗಲ್ ಪೊಲೀಸ್ ಠಾಣೆಯಲ್ಲಿದೆ. ಪೊಲೀಸರು ನಾಳೆ ಬನ್ನಿ ಅಂತ ಹೇಳಿದ್ದಾರೆ ಎಂದು ತುಕಾಲಿ ಸಂತೋಷ್ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.