ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯ ಮೆಟ್ರೋದಲ್ಲಿಯೇ ಯುವತಿಯರಿಬ್ಬರು ಹೋಳಿ ಹಬ್ಬದ ರೀಲ್ಸ್ ಮಾಡಿದ್ದಾರೆ. ಸಹ ಪ್ರಯಾಣಿಕರ ಸಮ್ಮುಖದಲ್ಲಿಯೇ ಮೆಟ್ರೋದಲ್ಲಿ ಅನುಚಿತವಾಗಿ ವರ್ತಿಸಿ ಹೋಳಿ ಹಬ್ಬದ ರೀಲ್ಸ್ ಮಾಡಿರುವ ಯುವತಿಯರ ನಡೆಗೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಬಿಳಿ ಬಣ್ಣದ ಬಟ್ಟೆ ತೊಟ್ಟು ಇಬ್ಬರು ಯುವತಿಯರು ದೆಹಲಿಯ ಮೆಟ್ರೋದಲ್ಲಿ ಸಾರ್ವಜನಿಕರ ಎದುರೇ ಅಸಭ್ಯವಾಗಿ ವರ್ತಿಸುತ್ತಾ ಪರಸ್ಪರ ಬಣ್ಣ ಬಳಿದು ಅಪ್ಪಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಬಿಯರ್‌ಗೆ 50 ರೂಪಾಯಿ ಹೆಚ್ಚಿಗೆ ತೆಗೆದುಕೊಂಡಿದ್ದಕ್ಕೆ ಮರವನ್ನೇರಿ ಆತ್ಮಹತ್ಯೆಗೆ ಯತ್ನಿಸಿದ ಭೂಪ!
Just imagine how much outrage would have happened if instead of these girls playing Holi in Delhi Metro, A Muslim had been Offering Namaaz? pic.twitter.com/2gqgdowzsN
— هارون خان (@iamharunkhan) March 23, 2024
@iamharunkhan ಎಂಬ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ʼದೆಹಲಿ ಮೆಟ್ರೋದಲ್ಲಿ ಈ ಹುಡುಗಿಯರು ಹೋಳಿ ಆಡುವ ಬದಲು ಒಬ್ಬ ಮುಸಲ್ಮಾನ ವ್ಯಕ್ತಿ ನಮಾಜ್ ಮಾಡುತ್ತಿದ್ದರೆ ಎಷ್ಟು ಆಕ್ರೋಶ ವ್ಯಕ್ತವಾಗುತ್ತಿತ್ತು ಊಹಿಸಿ?ʼ ಅಂತಾ ಬರೆದುಕೊಂಡಿದ್ದಾರೆ.
ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಬಹುತೇಕರು ಯುವತಿಯರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇನು ಮೆಟ್ರೋ ರೈಲೋ ಅಥವಾ ನಿಮ್ಮ ಖಾಸಗಿ ಕೊಠಡಿಯೋ ಅಂತಾ ಪ್ರಶ್ನಿಸಿ ಕಿಡಿಕಾರಿದ್ದಾರೆ.
ಇದನ್ನೂ ಓದಿ: ತಂದೆಯನ್ನು ಹತ್ಯೆಗೈದು ಮನೆಯೊಳಗೆ ಶವ ಹೂತಿಟ್ಟ ಮಗ: ಕಾರಣವೇನು ಗೊತ್ತಾ?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ