ವಿದ್ಯುತ್ ಆಘಾತಕ್ಕೆ ಸಿಎ ವಿದ್ಯಾರ್ಥಿನಿ ಬಲಿ!

Electric Shock: ನೀರು ತುಂಬಿದ್ದ ಗದ್ದೆಗೆ ಇಳಿದಿದ್ದ ನಾಯಿಯನ್ನು ಹೊರತರಲು ಆಶ್ನಿ ಶೆಟ್ಟಿ ಗದ್ದೆಗೆ ಕಾಲಿಟ್ಟ ವೇಳೆ ವಿದ್ಯುತ್ ಆಘಾತ (Electric Shock) ಸಂಭವಿಸಿ ಆಕೆ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಪ್ರತ್ಯಕ್ಷ ದರ್ಶಿಗಳು ಮಾಹಿತಿ ನೀಡಿದ್ದಾರೆ. 

Written by - Yashaswini V | Last Updated : Jul 19, 2024, 03:58 PM IST
  • ಮೃತ ಯುವತಿಯ ತಂದೆ ಹೈನುಗಾರಿಕೆ ನಡೆಸುತ್ತಿದ್ದು ಅವರು ಎಂದಿನಂತೆ ಬೆಳಿಗ್ಗೆ ದನ ಮೇಯಿಸಲು ಹೋಗಿದ್ದರು.
  • ಈ ವೇಳೆ ಅವರ ಸಾಕು ನಾಯಿಯೂ ಅವರೊಂದಿಗೆ ಹೋಗಿತ್ತು.
  • ನಾಯಿಯನ್ನು ಕರೆತರಲೆಂದು ಹೋಗಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ
ವಿದ್ಯುತ್ ಆಘಾತಕ್ಕೆ ಸಿಎ ವಿದ್ಯಾರ್ಥಿನಿ ಬಲಿ! title=

Electric Shock: ವಿದ್ಯುತ್ ಆಘಾತಕ್ಕೆ ಒಳಗಾಗಿ ಯುವತಿಯೊಬ್ಬಳು ಮೃತಪಟ್ಟ ದಾರುಣ ಘಟನೆ ಮಂಗಳೂರಿನ ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮದ ಕಲ್ಲಕಲಂಬಿ ಎಂಬಲ್ಲಿ ನಡೆದಿದೆ. ಮೃತರನ್ನು ಆಶ್ನಿ ಶೆಟ್ಟಿ (20) ಎಂದು ಗುರುತಿಸಲಾಗಿದ್ದು, ಈಕೆ ಸಿಎ ವ್ಯಾಸಂಗ (CA Student) ಮಾಡುತ್ತಿದ್ದರು ಎಂದು ತಿಳಿದುಬಂದಿದೆ. 

ಮೃತ ಯುವತಿಯ ತಂದೆ ಹೈನುಗಾರಿಕೆ ನಡೆಸುತ್ತಿದ್ದು ಅವರು ಎಂದಿನಂತೆ ಬೆಳಿಗ್ಗೆ ದನ ಮೇಯಿಸಲು ಹೋಗಿದ್ದರು. ಈ ವೇಳೆ ಅವರ ಸಾಕು ನಾಯಿಯೂ ಅವರೊಂದಿಗೆ ಹೋಗಿತ್ತು. ನಾಯಿಯನ್ನು ಕರೆತರಲೆಂದು ಹೋಗಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. 

ಇದನ್ನೂ ಓದಿ- Sucide Case: ಹೆಂಡತಿಯ ಮೇಕಪ್ ಕಾಟಕ್ಕೆ ಮನನೊಂದು ಗಂಡ ಸೂಸೈಡ್..!

ನೀರು ತುಂಬಿದ್ದ ಗದ್ದೆಗೆ ಇಳಿದಿದ್ದ ನಾಯಿಯನ್ನು ಹೊರತರಲು ಆಶ್ನಿ ಶೆಟ್ಟಿ ಗದ್ದೆಗೆ ಕಾಲಿಟ್ಟ ವೇಳೆ ವಿದ್ಯುತ್ ಆಘಾತ (Electric Shock) ಸಂಭವಿಸಿ ಆಕೆ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಪ್ರತ್ಯಕ್ಷ ದರ್ಶಿಗಳು ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ- ಹೊಲದಲ್ಲಿದ್ದ ಶೆಡ್‌ಗೆ ದುಷ್ಕರ್ಮಿಗಳಿಂದ ಬೆಂಕಿ: ಇಬ್ಬರು ಸಜೀವ ದಹನ, ಮೂವರು ಪಾರು

ಗದ್ದೆಯಲ್ಲಿದ್ದ ವಿದ್ಯುತ್ ಕಂಬದಿಂದ ವಿದ್ಯುತ್ ಪ್ರವಹಿಸುತ್ತಿದ್ದ ತಂತಿಯೊಂದು ತುಂಡಾಗಿ ಗದ್ದೆಗೆ ಬಿದ್ದಿದ್ದರಿಂದ ಈ ಅವಘಡ ಸಂಭವಿಸಿದೆ. ಘಟನೆ ನಡೆದ ತಕ್ಷಣ ಸ್ಥಳೀಯರು ಮೆಸ್ಕಾಂಗೆ ಮಾಹಿತಿ ನೀಡಿದ್ದು, ವಿದ್ಯುತ್ ಕಡಿತಗೊಳಿಸಿದ ಬಳಿಕ ನಾಯಿ ಮತ್ತು ಆಶ್ನಿ ಮೃತದೇಹವನ್ನು ನೀರಿನಿಂದ ಹೊರತೆಗೆಯಲಾಯಿತು ಎಂದು ವರದಿಯಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News