Rice Ganji : ನಮ್ಮ ಪೂರ್ವಜರು ಗಂಜಿ ಕುಡಿದು ಗಟ್ಟಿಯಾಗಿರುತ್ತಿದ್ದರು.. 90ರ ದಶಕದ ಯುವಕರಿಗೆ ಇಂದಿಗೂ ಇದು ಬಾಲ್ಯದ ನೆಚ್ಚಿನ ಆಹಾರ. ಆದರೆ ಇತ್ತೀಚಿನ ದಿನಗಳಲ್ಲಿ ಇದರ ಪ್ರಾಮುಖ್ಯತೆ ಕಡಿಮೆಯಾಗಿದೆ. ಬಹುತೇಕರಿಗೆ ಗಂಜಿ ಎಂದರೇನು ಅಂತ ಗೊತ್ತಿಲ್ಲ... ಅಲ್ಲದೆ ಇದರ ಮಹತ್ವವೂ ತಿಳಿದಿಲ್ಲ..
ಗಂಜಿ ತುಂಬಾ ಸುಲಭವಾಗಿ ಜೀರ್ಣವಾಗುವ ಆಹಾರ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಶಾಂತಗೊಳಿಸುತ್ತದೆ. ಅಜೀರ್ಣ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಗಂಜಿಯಲ್ಲಿ ಕಾರ್ಬೋಹೈಡ್ರೇಟ್ ಸಮೃದ್ಧವಾಗಿದ್ದು, ದೇಹಕ್ಕೆ ಶಕ್ತಿಯನ್ನು ಒದಗಿಸುತ್ತವೆ. ಆಯಾಸವನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ:ಇದ್ದಕ್ಕಿದ್ದಂತೆ ತೂಕ ಇಳಿಕೆಯಾಗಿದ್ಯಾ? ಈ ರೋಗಗಳ ಲಕ್ಷಣವೂ ಆಗಿರಬಹುದು ಎಚ್ಚರ
ಗಂಜಿಯಲ್ಲಿ ನೀರು ಅಧಿಕವಾಗಿರುತ್ತದೆ. ಇದು ದೇಹವನ್ನು ಹೈಡ್ರೇಟ್ ಆಗಿ ಇಡುತ್ತದೆ. ಬೇಸಿಗೆಯಲ್ಲಿ ಬಾಯಾರಿಕೆ ನೀಗಿಸಲು ಗಂಜಿ ತುಂಬಾ ಒಳ್ಳೆಯದು. ಗಂಜಿ ಜೀವಸತ್ವಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ..
ಗಂಜಿಯಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ತ್ವಚೆಯನ್ನು ಆರೋಗ್ಯವಾಗಿರಿಸುತ್ತದೆ. ಸುಕ್ಕುಗಳು ಮತ್ತು ಕಲೆಗಳನ್ನು ತಡೆಯುತ್ತದೆ. ಗಂಜಿ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಇದು ದೀರ್ಘಕಾಲದವರೆಗೆ ಹಸಿವನ್ನು ದೂರವಿರಿಸುತ್ತದೆ. ಗಂಜಿ ಕುಡಿಯುವುದರಿಂದ ಒತ್ತಡ ಮತ್ತು ಆತಂಕ ಕಡಿಮೆಯಾಗುತ್ತದೆ..
ಅಕ್ಕಿ ಗಂಜಿ ಮಾಡುವ ವಿಧಾನ
ಪದಾರ್ಥಗಳು:
ಅಕ್ಕಿ
ನೀರು
ಉಪ್ಪು
ತುಪ್ಪ
ತಯಾರಿಸುವ ವಿಧಾನ:
ಅಕ್ಕಿಯನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ನೆನೆಸಿಡಿ.
ಪಾತ್ರೆಯಲ್ಲಿ ನೀರನ್ನು ಕುದಿಸಿ, ನೆನೆಸಿದ ಅಕ್ಕಿಯನ್ನು ಹಾಕಿ ಬೇಯಿಸಿ.
ಅನ್ನ ಬೆಂದ ನಂತರ ಉಪ್ಪು ಮತ್ತು ತುಪ್ಪ ಹಾಕಿ ಚೆನ್ನಾಗಿ ಕಲಸಿ ತಿನ್ನಿ.
ನೀವು ಗಂಜಿಗೆ ನಿಮ್ಮ ನೆಚ್ಚಿನ ಪದಾರ್ಥಗಳನ್ನು ಕೂಡ ಸೇರಿಸಬಹುದು. ಉದಾಹರಣೆಗೆ, ಕೊತ್ತಂಬರಿ, ಪುದೀನ, ತುಳಸಿ ಎಲೆಗಳು ಹಾಕಬಹುದು.. ಗಂಜಿ ಬಿಸಿಯಾಗಿ ಕುಡಿಯುವುದು ಉತ್ತಮ ಫಲಿತಾಂಶವನ್ನು ನೀಡುತ್ತದೆ. ಪ್ರತಿದಿನ ಗಂಜಿ ಕುಡಿಯುವುದರಿಂದ ಆರೋಗ್ಯ ಸುಧಾರಿಸುತ್ತದೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.