ದಿನಭವಿಷ್ಯ 21-10-2024: ಇಂದು ವರೀಯಾನ ಯೋಗದಿಂದ ಈ ರಾಶಿಯವರಿಗೆ ಆಸ್ತಿ ಖರೀದಿ ಯೋಗ

Today Horoscope 21st October 2024: ಈ ದಿನ ಸೋಮವಾರ ಮೃಗಶಿರಾ ನಕ್ಷತ್ರ, ವರೀಯಾನ ಯೋಗ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Oct 21, 2024, 07:37 AM IST
  • ಕೃಷ್ಣ ಪಕ್ಷ, ಪಂಚಮಿ ತಿಥಿಯ ಈ ದಿನ ಸೋಮವಾರ
  • ಮೃಗಶಿರಾ ನಕ್ಷತ್ರ, ವರೀಯಾನ ಯೋಗ
  • ಇಂದಿನ ದ್ವಾದಶ ರಾಶಿಗಳ ಫಲಾಫಲ
ದಿನಭವಿಷ್ಯ 21-10-2024:  ಇಂದು ವರೀಯಾನ ಯೋಗದಿಂದ ಈ ರಾಶಿಯವರಿಗೆ ಆಸ್ತಿ ಖರೀದಿ ಯೋಗ  title=

Somavara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಅಶ್ವಯುಜ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿಯ ಈ ದಿನ ಸೋಮವಾರ ಮೃಗಶಿರಾ ನಕ್ಷತ್ರ, ವರೀಯಾನ ಯೋಗ ಇರಲಿದೆ. ಇಂದು ಯಾವ ರಾಶಿಯವರಿಗೆ ಏನು ಫಲ ತಿಳಿಯಿರಿ. 

ಮೇಷ ರಾಶಿಯವರ ಭವಿಷ್ಯ (Aries Horoscope):  
ಲಾಭವನ್ನು ಕ್ರೋಢೀಕರಿಸಲು ಇದು ಉತ್ತಮ ಸಮಯ. ಮನೆಯಲ್ಲಿ ಸಾಮರಸ್ಯ ಕಂಡು ಬರಲಿದ್ದು ನಿಮ್ಮ ಸಮಸ್ಯೆಗಳು ಸಾಕಷ್ಟು ಮಟ್ಟಿಗೆ ಪರಿಹಾರ ಹೊಂದಲಿವೆ. ಪ್ರೀತಿಯ ಜೀವನದಲ್ಲಿರುವವರು ಸಂಬಂಧಗಳಲ್ಲಿ ಸಾಮರಸ್ಯ ಕಾಯ್ದುಕೊಳ್ಳಿ. 

ವೃಷಭ ರಾಶಿಯವರ ಭವಿಷ್ಯ (Taurus Horoscope):  
ಕುಟುಂಬದೊಂದಿಗೆ ಒಂದು ಸಣ್ಣ ಪ್ರವಾಸವು ಆರೋಗ್ಯದಲ್ಲಿ ಉತ್ತಮ ಸ್ಥಿರತೆಯನ್ನು ಕಾಣಲು ಸಹಕಾರಿ ಆಗಲಿದೆ. ಕೆಲಸದಲ್ಲಿ ಒಳ್ಳೆಯ ತಿರುವುಗಳು ನಿಮ್ಮ ಹಣಕಾಸಿನ ಸ್ಥಿತಿಯನ್ನು ಸುಧಾರಿಸಲಿದೆ. ಮನೆಯಲ್ಲಿ ಅತಿಥಿಗಳಿಂದ ಸಂತೋಷ. 

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ನಿಮ್ಮ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರಗಳು ಫಲಪ್ರಧವಾಗಿರಲಿವೆ. ಉದ್ಯೋಗದಲ್ಲಿನ ಅಡೆತಡೆಗಳು ನಿಮ್ಮ ಮನಸ್ಸಿಗೆ ಘಾಸಿ ಉಂಟು ಮಾಡಬಹುದು. ಆಸ್ತಿ ಖರೀದಿಯಿಂದ ಲಾಭ. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಆರ್ಥಿಕ ದೃಷ್ಟಿಯಿಂದ ಇಂದು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುವಿರಿ. ಅಪಾರ ಸಂಪತ್ತಿನ ಒಡೆಯರಾಗುವಿರಿ. ದೂರದ ಪ್ರಯಾಣದಿಂದ ಲಾಭವಾಗಲಿದೆ. ಅನಾವಶ್ಯಕ ವಾದ-ವಿವಾದಗಳನ್ನು ತಪ್ಪಿಸಿದರೆ ಮನಸ್ಸಿಗೆ ನೆಮ್ಮದಿ. 

ಇದನ್ನೂ ಓದಿ- ದೀಪಾವಳಿ ನಂತರ ಈ ರಾಶಿಯವರ ಬದುಕಿನಲ್ಲಿ ಶನಿ ಮಹಾದಶದಿಂದ ಬಂಪರ್ ಲಾಭ, ಹೋದಲ್ಲೆಲ್ಲಾ ಸಂತೋಷದ ಹೊನಲು

ಸಿಂಹ ರಾಶಿಯವರ ಭವಿಷ್ಯ (Leo Horoscope):  
ಬದಲಾದ ನಿಮ್ಮ ಜೀವನಶೈಲಿಯಲ್ಲಿ ಇನ್ನೂ ಕೆಲವು ಬದಲಾವಣೆಗಳನ್ನು ತರಲು ಬಯಸುವಿರಿ. ಹೂಡಿಕೆಯಿಂದ ನಿರೀಕ್ಷಿತ ಲಾಭ ಬಾರದಿರುವುದು ಮನಸ್ಸಿಗೆ ಕಸಿವಿಸಿ ಉಂಟು ಮಾಡಬಹುದು. ಕೌಟುಂಬಿಕ ವಿವಾದಗಳಲ್ಲಿ ಕೊಂಚ ನೆಮ್ಮದಿಯನ್ನು ಕಾಣಬಹುದು. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಸಾಮಾಜಿಕ ಕಾರ್ಯಗಳಿಗಾಗಿ ಹಣ ಕಲೆಹಾಕುವ ನಿಮ್ಮ ಬಹುದಿನಗಳ ಗುರಿ ಇಂದು ಸಾಕಾರಗೊಳ್ಳಲಿದೆ. ಆಪ್ತರೊಂದಿಗೆ ವಿಹಾರಕ್ಕೆ ಯೋಜಿಸುವುದು ಇಂದು ದುಬಾರಿಯಾಗಲಿದೆ. ಶೈಕ್ಷಣಿಕ ವಿಚಾರದಲ್ಲಿ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಪ್ರಯೋಜನಕಾರಿ ಆಗಿದೆ. 

ತುಲಾ ರಾಶಿಯವರ ಭವಿಷ್ಯ (Libra Horoscope): 
ಇಂದು ನಿಮ್ಮ ಮಾತೇ ನಿಮಗೆ ದೊಡ್ಡ ಶತ್ರು. ಬೇರೆಯವರೊಂದಿಗೆ ಮಾತನಾಡುವಾಗ ಬಹಳ ಎಚ್ಚರಿಕೆಯಿಂದ ವ್ಯವಹರಿಸಿ. ಮನೆಯಿಂದ ಹೊರಹೋಗುವಾಗ ಹಿರಿಯರ ಆಶೀರ್ವಾದ ಪಡೆದು ಹೋದರೆ ಒಳ್ಳೆಯದು. ಕೆಲಸಕಾರ್ಯಗಳಲ್ಲಿ ವೇಗವಾಗಿದ್ದರೆ ಮಾತ್ರ ಯಶಸ್ಸು. 

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಆರೋಗ್ಯದ ದೃಷ್ಟಿಯಿಂದ ವಾಕಿಂಗ್, ವ್ಯಾಯಾಮ ಮಾಡುವುದು ಉತ್ತಮ. ನಿಮ್ಮ ವೆಚ್ಚಕ್ಕೆ ಕಡಿವಾಣ ಹಾಕುವುದರಿಂದ ಬಜೆಟ್ ಹಾಳಾಗುವುದನ್ನು ತಪ್ಪಿಸಬಹುದು. ವೃತ್ತಿ ಬದುಕಿನಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲ ನಿಮ್ಮೊಂದಿಗಿರುತ್ತದೆ. ಕುಟುಂಬದಲ್ಲಿ ಆಹ್ಲಾದಕರ ವಾತಾವರಣ ಇರುತ್ತದೆ. 

ಇದನ್ನೂ ಓದಿ- Vastu Tips: ವಯಸ್ಸಿಗೆ ಬಂದ ಹೆಣ್ಣು ಮಕ್ಕಳು ಈ ಕೋಣೆಯಲ್ಲಿದ್ರೆ ತಪ್ಪಿದ್ದಲ್ಲ ಅನಾಹುತ..! ಮದುವೆ ಮೇಲೆಯೇ ನೇರ ಪರಿಣಾಮ... 

ಧನು ರಾಶಿಯವರ ಭವಿಷ್ಯ (Sagittarius Horoscope):  
ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ದೊರೆಯಲಿದೆ. ಸಾಲವನ್ನು ಮರುಪಾವತಿಸುವ ನಿಮ್ಮ ಗುರಿ ನೆರವೇರಲಿದೆ. ಹೊಸ ವಾಹನ ಖರೀದಿಸುವ ಬಹಳ ದಿನಗಳ ಕನಸು ನನಸಾಗಲಿದೆ. ಸ್ನೇಹಿತರೊಂದಿಗೆ ಸಣ್ಣ ಪಿಕ್ನಿಕ್ ನಿಮ್ಮ ಮನಸ್ಸಿನ ಸಂತೋಷವನ್ನು ಇಮ್ಮಡಿಗೊಳಿಸಲಿದೆ. 

ಮಕರ ರಾಶಿಯವರ ಭವಿಷ್ಯ (Capricorn Horoscope):  
ನಿಯಮಿತ ವ್ಯಾಯಾಮದಿಂದ ಆರೋಗ್ಯ ವೃದ್ಧಿಯಾಗಲಿದೆ. ಅನಾವಶ್ಯಕವಾಗಿ ಹೊರಗಿನ ಆಹಾರಕ್ಕೆ ಒಡ್ಡಿಕೊಳ್ಳುವುದನ್ನು ತಪ್ಪಿಸಿ. ಹಿಂದೆಂದೂ ನೋಡಿರದ ಸ್ಥಳಕ್ಕೆ ನಿಮಗೆ ಆಹ್ವಾನ ಬರಬಹುದು.  ನಿಮ್ಮ ಮನೆ ಕಟ್ಟುವ ಕನಸು ನನಸಾಗುವ ಸುಂದರ ಸಮಯ. 

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಹಣಕಾಸಿನ ನಿರೀಕ್ಷಿತ ಲಾಭಗಳನ್ನು ವಿಳಂಬವಾಗುವುದರಿಂದ ಮನಸ್ಸಿಗೆ ಕಿರಿಕಿರಿ ಉಂಟಾಗಬಹುದು. ಹೊಸ ಅನ್ವೇಷಣೆಗಳಲ್ಲಿ ನಿಮ್ಮ ಪ್ರಯತ್ನಗಳಿಗೆ ಲಾಭ ದೊರೆಯುವ ಸಾಧ್ಯತೆ ಇದೆ. ಸಂಪತ್ತು ವೃದ್ಧಿಯಾಗಲಿದೆ. 

ಮೀನ ರಾಶಿಯವರ ಭವಿಷ್ಯ (Pisces Horoscope): 
ನಿಮ್ಮ ಗುರಿ ತಲುಪಲು ನಿರ್ದಿಷ್ಟ ಯೋಜನೆಗಳನ್ನು ಕಾರ್ಯಗತಗೊಳಿಸುವ ಅಗತ್ಯವಿದೆ. ಕೆಲಸದಲ್ಲಿ ಸಂಪೂರ್ಣವಾಗಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವುದರಿಂದ ಯಶಸ್ಸು. ಆಸ್ತಿ ಮಾರಾಟದಿಂದ ಲಾಭವಾಗಲಿದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News