ಏಸು ಕ್ರಿಸ್ತ ಮತ್ತು ಬುದ್ಧ ಯಾಕೆ ಇನ್ನೂ ಪ್ರಸ್ತುತವೆನಿಸುತ್ತಾರೆಂದರೆ ನಿಜವಾಗಲೂ ಅವರ ಸಂದೇಶಗಳಿಂದ ಮಾತ್ರ. ಈ ಇಬ್ಬರು ಮಹಾಪುರುಷರ ಬಗ್ಗೆ ಇಂದು ನೆನಪಿಸಿಕೊಳ್ಳಲು ಒಂದು ಕಾರಣವಿದೆ. ಅದೇನೆಂದರೆ ತುಮಕೂರಿನ ಜಿಲ್ಲಾ ನ್ಯಾಯಾಲಯ ಇಂದು ಮಹತ್ತರವಾದ ತೀರ್ಪು.
ಹೌದು.. 2010 ರಲ್ಲಿ ನಡೆದ ದಲಿತ ಮಹಿಳೆಯೊಬ್ಬಳ ಕೊಲೆಗೆ ಸಂಬಂಧಿಸಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಪಾಲಪುರ ಗ್ರಾಮದ 21 ಜನರಿಗೆ ಅದರಲ್ಲಿ ಇಬ್ಬರು ಮಹಿಳೆಯರು ಸೇರಿ ತುಮಕೂರಿನ ನ್ಯಾಯಾಲಯ ಜೀವಾವಧಿಶಿಕ್ಷೆ ವಿಧಿಸಿದೆ. ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳಲ್ಲಿ ಮೃತ ಮಹಿಳೆ ಹೊನ್ನಮ್ಮಳನ್ನು ಕಲ್ಲು ಚಪ್ಪಡಿ ಎತ್ತಿಹಾಕಿ, ಕಲ್ಲಿನಲ್ಲಿ ಹೊಡೆದು ಕೊಲೆ ಮಾಡಲಾಗಿತ್ತು. ಅದಕ್ಕೆ ಆರೋಪಿಗಳಿಗೆ ಇಂದು ಶಿಕ್ಷೆ ಪ್ರಕಟವಾಗಿದೆ.
ಇದು ಒಂದು ಘಟನೆಯಾದರೆ.. ಇನ್ನೊಂದು ಇದೇ ರೀತಿಯ ಪ್ರಕರಣದಲ್ಲಿ.. ಈಗಾಗಲೇ ಆರೋಪಿಗಳಿಗೆ ಶಿಕ್ಷೆಯಾಗಿ.. ಅದೃಷ್ಟವಶಾತ್ ಅವರಿಗೆ ಬೇಲ್ ಕೂಡಾ ಸಿಕ್ಕಿತ್ತು. ಅದು ಕೊಪ್ಪಳದ ಮರಕುಂಬಿ ಗ್ರಾಮದಲ್ಲಿ 2008 ರಲ್ಲಿ ನಡೆದಿದ್ದ ಘಟನೆ.. ಸಿನಿಮಾ ಥಿಯೇಟರ್‌ನಿಂದ ಆರಂಭವಾದ ಈ ಗಲಾಟೆ ದಲಿತರ ಮನೆಗಳಿಗೆ ಬೆಂಕಿ ಬಿಳುವ ಹಂತಕ್ಕೆ ತಲುಪಿತ್ತು.. ಈ ಪ್ರಕಣದಲ್ಲಿ.. 97 ಜನರಿಗೆ... ಹೆಚ್ಚು ಕಡಿಮೆ ಇಡೀ ಊರಿಗೆ ಊರೇ ಎನ್ನಿ ಅವರಿಗೂ ಕೂಡಾ ಜೀವಾವಧಿ ಶಿಕ್ಷೆಯಾಗಿತ್ತು.
ಇನ್ನೊಂದಿದೆ ಅದು ಬೆಂಗಳೂರಿನಲ್ಲಿ ನಡೆದ ಘಟನೆ, ಮಗ ಮೊಬೈಲ್ ನೋಡುತ್ತಾನೆ ಶಾಲೆಗೆ ಹೋಗಲ್ಲವೆಂದು ತಂದೆಯೇ ಕ್ರಿಕೇಟ್‌ಬ್ಯಾಟ್‌ನಿಂದ ಮಗನ ತಲೆಗೆ ಹೊಡೆದು ಕೊಲೆ ಮಾಡಿದ್ದ. ನಿನ್ನೆಯೂ ಒಂದು ಇದೇ ರೀತಿಯ ಘಟನೆ ನಡೆದಿತ್ತು.. ಅದು ತಮಿಳುನಾಡು ಮತ್ತು ಕರ್ನಾಟಕದ ಗಡಿ ಭಾಗದಲ್ಲಿ.. ವಕೀಲರೊಬ್ಬನ್ನು ಒಬ್ಬ ವ್ಯಕ್ತಿ ಮಚ್ಚಿನಿಂದ ಮನಬಂದಂತೆ ಕೊಚ್ಚಿ ಕೊಂದಿದ್ದ.. ಇನ್ನೊಂದು ಬೆಂಗಳೂರಿನಲ್ಲಿ ಒಬ್ಬ ಯುವಕನನ್ನು ಅವನ ಸ್ನೇಹಿತರೇ ಹೆಲ್ಮೆಟ್ ಹಾಗೂ ದೊಣ್ಣೆ ಮತ್ತು ಕಲ್ಲುಗಳಿಂದ ಹೊಡೆದ ಘಟನೆ.
ಹೀಗೆ ಹೇಳುತ್ತಾ ಹೋದರೆ ಮನುಷ್ಯನ ಕ್ರೌರ್ಯ ಮತ್ತು ವಿಕೃತಿ ಅನಾವರಣವಾಗುತ್ತಾ ಹೋಗುತ್ತದೆ. ಅದರಲ್ಲಿಯೂ ಬೆಂಗಳೂರಿನಲ್ಲಿ ಅಂತೂ ಇಂಥಹ ಘಟನೆಗಳು ಪ್ರತಿದಿನ ನಡೆಯುತ್ತಲೇ ಇರುತ್ತವೆ ಬಿಡಿ.
ಇಂಥಹ ಉದಾಹರಣೆಗಳ ಮೂಲಕ ನಾನು ಹೇಳಲು ಹೊರಟಿರುವ ಅಂಶವೇನೆಂದರೆ ಎಲ್ಲಿ ಹೋಯ್ತು ಮಾನವೀಯತೆ, ಮನುಷ್ಯತ್ವ...
ಸಾವು ಒಂದಾದರೆ ಅದರಿಂದ ಆಗುವ ನೋವು ನೂರೊಂದು. ಮೊದಲು ಹೇಳಿದ ಘಟನೆ ಅದೇ ಚಿಕ್ಕನಾಯಕನಹಳ್ಳಿಯ ಗೋಪಾಲಪುರದ ಘಟನೆಯ ದೃಶ್ಯವನ್ನು ನೋಡುತ್ತಿದ್ದೆ, ಶಿಕ್ಷೆ ಪ್ರಕಟವಾದ ಬಳಿಕ ಅವರೆಲ್ಲರ ಜೀವನ ಮುಗಿದೆಹೋಯಿತು ಎಂಬಂತೆ ಪೊಲೀಸರ ಜೀಪಿನತ್ತ ಮೆಲ್ಲನೆ ಹೆಜ್ಜೆ ಹಾಕುತ್ತಿದ್ದರು. ಅದೇ 21 ರಲ್ಲಿ ಇಬ್ಬರು ಮಹಿಳೆಯರಲ್ಲಿ ಒಬ್ಬ ಮಹಿಳೆಯ ತೀರಾ 50-60 ವಯಸ್ಸಾಗಿರಬಹುದು ನಡೆಯಲೂ ಆಗದೆ ಕುಂಟುತ್ತಾ ಪೋಲೀಸರ ಜೀಪು ಅತ್ತುತ್ತಿದ್ದರು.
ಮರಕುಂಬಿಯ ತೀರ್ಪು ಬಂದ ಬಳಿಕ ಪೊಲೀಸರ ಜೀಪಿನಲ್ಲಿ ಹೆಂಡತಿ ಮಕ್ಕಳನ್ನು ನೆನೆದು ಬಿಳಿ ಗಡ್ಡ ಬಿಟ್ಟ ಅಪರಾಧಿಗಳು ಟವಲನ್ನು ಮುಖಕ್ಕೆ ಮುಚ್ಚಿಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಇದೆಲ್ಲ ದೃಶ್ಯವನ್ನು ನೋಡುತ್ತಿದ್ದಾಗ ಅಂತಃಕರಣದಲ್ಲಿ ಏನೋ ಕೆಳೆದುಕೊಂಂತೆ ಭಾಸವಾಗುತ್ತಿತ್ತು.
ಎರಡು ಘಟನೆಗಳ ಇಸವಿ ನೋಡಿ ಒಂದು 2008 ಮತ್ತೊಂದು 2010 ಅಂದರೆ ಹೆಚ್ಚು ಕಡಿಮೆ 12-15 ವರ್ಷಗಳ ಹಿಂದಿನ ಘಟನೆಗಳು. ಘಟನೆ ನಡೆದ ದಿನದಿಂದಲೂ ಭಯ, ನೋವಿನಿಂದಲೇ ಜೀವನ ಕಳೆದ ಅಷ್ಟು ಜನ ಅಪರಾಧಿಗಳು ಮತ್ತು ಅವರ ಹೆಂಡತಿ ಮಕ್ಕಳು ಹುಟ್ಟಿದ್ದೇ ಇದಕ್ಕಾಗಿನಾ ಎಂಬ ಪ್ರಶ್ನೆ ಮೂಡುತ್ತದೆ.
ಹೌದು ಇನ್ನುಳಿದ ದಿನ ಜೀವಾವಧಿ ಶಿಕ್ಷೆ ಅವರ ಆಯುಷ್ಯವೆಲ್ಲ ಕಳೆದೋಯ್ತು ಅವರ ಪ್ರೀತಿ ಪಾತ್ರ ಕುಟುಂಬ ಇದರಲ್ಲೇ ದಿನಗಳೆಯಬೇಕಾದ ಸ್ಥಿತಿ ನೋಡಿ ಒಂದು ಕ್ಷಣದ ಕ್ರೌರ್ಯಕ್ಕೆ ಎಂಥಹ ಅನಾಹುತವಾಗುತ್ತದೆ.
ಇಷ್ಟೆಲ್ಲಾ ಮಾಡುತ್ತಾರಲ್ಲಾ ಮನುಷ್ಯನೇನು 1000 ವರ್ಷ ಬದುಕುತ್ತಾನಾ, ನಾವು ಇರೋದೆ 60-70 ಹೆಚ್ಚೆಂದರೆ 80 ಅಂದುಕೊಳ್ಳಿ. ಇಷ್ಟು ಕಡಿಮೆ ಅವಧಿಯ ಈ ಪವಿತ್ರ ಮಾನವ ಜನ್ಮವನ್ನು ಒಂದು ಸಣ್ಣ ಘಟನೆ ಹಾಗೂ ಕೋಪಕ್ಕೆ ಬಲಿಕೊಡುವ ಮುನ್ನಾ ಸ್ವಲ್ಪ ಯೋಚಿಸಬೇಕು ಅಲ್ವಾ..? ಅದಕ್ಕೆ ಏಸು, ಬುದ್ಧ, ಬಸವಣ್ಣ ಇಂದು ಜಗತ್ತಿಗೆ ಪ್ರಸ್ತುವೆನಿಸುತ್ತಾರೆ. ದ್ವೇಷ, ಕೋಪ ಬಿಟ್ಟು ಸ್ನೇಹ, ಪ್ರೀತಿ, ಮಾನವೀಯತೆ, ಕರುಣೆ ಇವುಗಳು ಮೈಗೂಡಿಸಿಕೊಳ್ಳೋಣ....
ಅಂಕಣಕಾರರು ಅನಂತರಾಮ್
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ