ಬೆಂಗಳೂರು: ಇತ್ತೀಚಿಗೆ ವಿಶ್ವದಾದ್ಯಂತ ಬಿಡುಗಡೆಯಾಗಿರುವ ಉಪೇಂದ್ರ ನಿರ್ದೇಶನದ ಯು-ಐ ಚಿತ್ರ ಈಗ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆಯುತ್ತಿದೆ.ಈ ಚಿತ್ರದ ಕುರಿತಾಗಿ ಸಿನಿಮಾ ವಿಮರ್ಶಕರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸುಮಾರು 9 ವರ್ಷಗಳ ನಂತರ ನಿರ್ದೇಶನಕ್ಕೆ ಇಳಿದಿರುವ ನಟ-ನಿರ್ದೇಶಕ ಉಪೇಂದ್ರ ಯಾವಾಗಲೂ ಭಿನ್ನ ಚಿಂತನೆಗಳಿಗೆ ಹೆಸರಾದವರು, ಅದರಂತೆಯ ಅವರ ಸಿನಿಮಾಗಳೂ ಸಹ ಇವೆ.ಈಗ ಯು ಐ ಸಿನಿಮಾ ಕೂಡ ಒಂದು ರೀತಿ ವಿಭಿನ್ನ ಪ್ರಯೋಗದ ಭಾಗ ಎಂದೇ ಹೇಳಬಹುದು.ಇಂದಿನ ಆಧುನಿಕ ತಂತ್ರಜ್ಞಾನ ವನ್ನು ಬಳಸಿಕೊಂಡು ನಿರ್ಮಿಸಿರುವ ಸಿನಿಮಾ ನಮಗೆ ಒಂದು ರೀತಿ ಹಾಲಿವುಡ್ ಸಿನಿಮಾ ನೋಡಿದಂತೆ ಭಾಸವಾಗುತ್ತದೆ. ಅಷ್ಟೇ ಅಲ್ಲದೆ ಈ ರೀತಿಯ ವಿಷಯವನ್ನು ಇಟ್ಟುಕೊಂಡು ಬಹುಶಃ ಯಾವ ನಿರ್ದೇಶಕನು ಭಾರತೀಯ ಚಿತ್ರರಂಗದಲ್ಲಿ ಚಿತ್ರವನ್ನು ನಿರ್ಮಿಸಿಲ್ಲ. ಈಗ ಅಂತಹ ಸಾಹಸವನ್ನು ನಮ್ಮ ಕನ್ನಡದ ಹೆಮ್ಮೆಯ ನಿರ್ದೇಶಕ ಉಪೇಂದ್ರ ಮಾಡಿದ್ದಾರೆ.
ಇದನ್ನೂ ಓದಿ: ಪ್ರಕರಣ ಕೋರ್ಟ್ನಲ್ಲಿರುವುದರಿಂದ ಚರ್ಚೆ ಮಾಡುವುದು ಸರಿಯಲ್ಲ: ಗೃಹ ಸಚಿವ ಪರಮೇಶ್ವರ
Absolutely amazing!! #UiTheMovie is a massive blockbuster movie set in a post apocalyptic world. Very unique treatment, thoroughly entertaining and thought provoking. A must watch!!! It is in theatres now https://t.co/pask3EglM4
— Ricky Kej (@rickykej) December 23, 2024
ಪ್ಯಾನ್ ಇಂಡಿಯಾ ಲೆವಲ್ ನಲ್ಲಿ ಬಿಡುಗಡೆಯಾಗಿರುವ ಈ ಸಿನಿಮಾ ಕುರಿತಾಗಿ ಆಮೀರ್ ಖಾನ್, ರಾಣಾ ದಗ್ಗುಬಟಿ, ರಾಮ್ ಗೋಪಾಲ್ ವರ್ಮಾ ಸೇರಿದಂತೆ ಹಲವಾರು ಚಿತ್ರ ಜಗತ್ತಿನ ದಿಗ್ಗಜರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬಂಡೀಪುರದಲ್ಲಿ ಕಿಮೀಗಟ್ಟಲೇ ಟ್ರಾಫಿಕ್ ಜಾಂ!; ವಾರಾಂತ್ಯದ ಖುಷಿಯಲ್ಲಿದ್ದವರಿಗೆ ಟ್ರಾಫಿಕ್ ಬಿಸಿ!!
ಇನ್ನೊಂದೆಡೆಗೆ ಈ ಚಿತ್ರವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿರುವ ಅಂತರಾಷ್ಟ್ರೀಯ ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಟ್ವೀಟ್ ಮಾಡಿ "ಸಂಪೂರ್ಣವಾಗಿ ಅದ್ಭುತ ಸಿನಿಮಾ ಆಗಿದ್ದು!! #UiTheMovie ಅಪೋಕ್ಯಾಲಿಪ್ಸ್ ನಂತರದ ಜಗತ್ತಿನಲ್ಲಿ ನಿರ್ಮಿಸಲಾದ ಬ್ಲಾಕ್ಬಸ್ಟರ್ ಚಲನಚಿತ್ರವಾಗಿದೆ. ಅತ್ಯಂತ ವಿಶಿಷ್ಟ ಮನರಂಜನೆ ಮತ್ತು ಚಿಂತನೆಯನ್ನು ಪ್ರಚೋದಿಸುವ ಈ ಚಿತ್ರವನ್ನು ನೀವು ನೋಡಲೇಬೇಕು' ಎಂದು ಅವರು ಟ್ವೀಟ್ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.