ನವದೆಹಲಿ: ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಮುಂಬೈ ಪೊಲೀಸರು ನಿರಂತರವಾಗಿ ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಮುಂಬೈ ಪೊಲೀಸರು ಇದುವರೆಗೆ 35 ಜನರನ್ನು ಪ್ರಶ್ನಿಸಿದ್ದಾರೆ. ಇದೇ ವೇಳೆ ಚಲನಚಿತ್ರ ಖ್ಯಾತ ಚಿತ್ರ ನಿರ್ದೇಶಕ ಆದಿತ್ಯ ಚೋಪ್ರಾ ಅವರ ಹೇಳಿಕೆಯನ್ನು ಶನಿವಾರ ದಾಖಲಿಸಲಾಗಿದೆ. ಸುಶಾಂತ್ ಅವರ ಮರಣದ ನಂತರ, ಬಾಲಿವುಡ್ನಲ್ಲಿ ಸ್ವಜನಪಕ್ಷಪಾತ (ಸಹೋದರ-ಸೋದರಳಿಯ) ಕುರಿತು ಚರ್ಚೆಯನ್ನು ಹುಟ್ಟುಹಾಕಿದ ಕಂಗನಾ ರನೌತ್ ಇದೀಗ ಮತ್ತೊಮ್ಮೆ ಹೆಡ್ಲೈನ್ ಸೃಷ್ಟಿಸಿದ್ದಾಳೆ.
ಈ ಬಾರಿ ಕಂಗನಾ ಅವರು ತಮ್ಮ ಆರೋಪಗಳನ್ನು ಸಾಬೀತಾಗದಿದ್ದಲ್ಲಿ ಸರ್ಕಾರವು ತಮಗೆ ನೀಡುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾದ ಪದ್ಮಶ್ರೀ ಅನ್ನು ಹಿಂದಿರುಗಿಸುವುದಾಗಿ ಹೇಳಿದ್ದಾರೆ. ಹೇಳಿಕೆ ನೀಡಲು ಮುಂಬೈ ಪೊಲೀಸರು ಕರೆ ಮಾಡಿದ್ದು, ಸದ್ಯ ತಾವು ಮನಾಲಿಯಲ್ಲಿದ್ದು, ಹೇಳಿಕೆ ದಾಖಲಿಸಲು ಸಿದ್ಧರಿರುವುದಾಗಿ ಕಂಗನಾ ಹೇಳಿದ್ದಾರೆ. "ನನ್ನ ಹೇಳಿಕೆಯನ್ನು ತೆಗೆದುಕೊಳ್ಳಲು ನೀವು ಯಾರನ್ನಾದರೂ ಇಲ್ಲಿಗೆ ಕಳುಹಿಸಬಹುದೇ" ಎಂದು ತಾವು ಮಾಡಿರುವ ಮನವಿಗೆ ಮುಂಬೈ ಪೊಲೀಸರಿಂದ ಇದುವರೆಗೆ ಯಾವುದೇ ಉತ್ತರ ಬಂದಿಲ್ಲ ಎಂದು ಕಂಗನಾ ತಿಳಿಸಿದ್ದಾರೆ.
ಮುಂದುವರೆದು ಮಾತನಾಡಿರುವ ಕಂಗನಾ, "ನಾನು ನೀಡಿರುವ ಹೇಳಿಕೆಗೆ ನಾನು ಸಾಕ್ಷಿಯಾಗಿ ನಿಲ್ಲದೆ ಹೋದರೆ, ನನ್ನ ಹೇಳಿಕೆಯನ್ನು ಸಾಬೀತುಪಡಿಸದೇ ಹೋದಲ್ಲಿ ಹಾಗೂ ನನ್ನ ಹೇಳಿಕೆ ಜನರ ಹಿತದೃಷ್ಟಿಯಲ್ಲಿ ಸರಿ ಇಲ್ಲ ಎಂದಾದರೆ ನಾನು ಪದ್ಮಶ್ರೀ ಹಿಂದಿರುಗಿಸುವೆ ಹಾಗೂ ನಾನು ಸರ್ಕಾರ ನೀಡಿರುವ ಗೌರವಕ್ಕೆ ಅರ್ಹಳಲ್ಲ ಎಂದು ಭಾವಿಸುವೆ" ಎಂದು ಕಂಗನಾ ಹೇಳಿದ್ದಾರೆ.
ಕಳೆದ ತಿಂಗಳು ಜೂನ್ 14ರಂದು ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ಶುಶಾಂತ್ ಸಿಂಗ್ ರಾಜ್ಪುತ್ ಆತ್ಮಹತ್ಯೆಗೆ ಶರಣಾಗಿದ್ದರು. ಕಳೆದ ಸುಮಾರು ಆರು ತಿಂಗಳಿನಿಂದ ಅವರು ಡಿಪ್ರೆಶನ್ ನಲ್ಲಿದ್ದರು ಎನ್ನಲಾಗುತ್ತಿದೆ. ಸುಶಾಂತ್ ಸಾವಿನ ಬಳಿಕ ವಿಡಿಯೋ ಸಂದೇಶ ನೀಡಿದ್ದ ಕಂಗನಾ ರಣಾವತ್ ಬಾಲಿವುಡ್ ನ ಖ್ಯಾತ ದಿಗ್ಗಜರನ್ನು ಗುರಿಯಾಗಿಸಿದ್ದಳು. ಬಳಿಕ ಸಾಮಾಜಿಕ್ ಮಾಧ್ಯಮಗಳಲ್ಲಿ ಬಾಲಿವುಡ್ ನ ನಡೆಯುತ್ತಿರುವ ಸ್ವಜನ ಪಕ್ಷಪಾತದ ಕುರಿತು ವ್ಯಾಪಕ ಚರ್ಚೆಗಳು ಆರಂಭಗೊಂಡಿವೆ. ಈ ಪ್ರಕರಣದಲ್ಲಿ ಜನರು ಸಲ್ಮಾನ್ ಖಾನ್ ನಿಂದ ಹಿಡಿದು ಕರಣ್ ಜೋಹರ್, ಅಲಿಯಾ ಭಟ್ ಹಾಗೂ ಮಹೇಶ್ ಭಟ್ ಸೇರಿದಂತೆ ಹಲವು ದಿಗ್ಗಜರ ಮೇಲೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.