ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಐಶ್ವರ್ಯಾ ರೈ ಧನ್ಯವಾದ ಅರ್ಪಿಸಿದ್ದು ಹೀಗೆ!

ಐಶ್ವರ್ಯಾ ರೈ ಬಚ್ಚನ್ ಮತ್ತು ಮಗಳು ಆರಾಧ್ಯ ಅವರನ್ನು 2020 ರ ಜುಲೈ 27 ರಂದು ನಾನಾವತಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.  

Last Updated : Jul 29, 2020, 02:32 PM IST
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಐಶ್ವರ್ಯಾ ರೈ ಧನ್ಯವಾದ ಅರ್ಪಿಸಿದ್ದು ಹೀಗೆ! title=

ನವದೆಹಲಿ: ಕರೋನಾವೈರಸ್ ಪಾಸಿಟಿವ್ ಆದ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ (Aishwarya Rai Bachchan) ಮತ್ತು ಮಗಳು ಆರಾಧ್ಯ ಅವರನ್ನು ಜುಲೈ 27, 2020 ರಂದು ನಾನಾವತಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

ಐಶ್ವರ್ಯಾ ರೈರ ಈ ಚಿತ್ರದ ಶೂಟಿಂಗ್ ಇಂದಿಗೂ ಪೂರ್ಣಗೊಂಡಿಲ್ಲ, ಇಲ್ಲಿದೆ ವಿಡಿಯೋ

ಇಂತಹ ಕಠಿಣ ಸಂದರ್ಭದಲ್ಲಿ ಬಚ್ಚನ್ ಕುಟುಂಬದ ಜೊತೆಗಿದ್ದ ಅಭಿಮಾನಿಗಳಿಗೆ ಐಶ್ವರ್ಯಾ ರೈ ಬಚ್ಚನ್ ಸಾಮಾಜಿಕ ಜಾಲತಾಣದಲ್ಲಿ ಕೃತಜ್ಞತೆ ಸಲ್ಲಿಸಿದ್ದು, ನಿಮ್ಮ ಪ್ರೀತಿಯ ಪ್ರಾರ್ಥನೆ, ಕಾಳಜಿ, ಹಾರೈಕೆ ಮತ್ತು ನನ್ನ ಪ್ರೀತಿಯ ಏಂಜಲ್ ಆರಾಧ್ಯ ಮತ್ತು ಪಾ, ಅಬ್ ... ಮತ್ತು ನಮ್ಮೆಲ್ಲರ ಪರವಾಗಿ ಧನ್ಯವಾದಗಳು. ನಾವೆಲ್ಲರೂ ನಿಮಗೆ ಎಂದೆಂದಿಗೂ ಚಿರಋಣಿಗಳಾಗಿರುತ್ತೇವೆ. ದೇವರು ನಮ್ಮ ಪ್ರೀತಿ ಪಾತ್ರರನ್ನು ಸದಾ ಹಾರೈಸಲಿ. ನಿಮ್ಮೆಲ್ಲರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುವೆ... ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ಚೆನ್ನಾಗಿರಿ ಮತ್ತು ಸುರಕ್ಷಿತವಾಗಿರಿ... ಎಂದು 
ಬರೆದಿದ್ದಾರೆ.

 
 
 
 

 
 
 
 
 
 
 
 
 

✨❤️THANK YOU SO SO MUCH for ALL your Prayers , Concern, Wishes and Love for my darling Angel Aaradhya 🥰🙏❤️and for Pa, Ab ...and me✨TRULY OVERWHELMED and forever indebted...GOD BLESS YOU ALL ❤️✨ALL MY LOVE ALWAYS and Prayers for the well-being of you ALL and all yours... Truly, Deeply and Heartfelt... ❤️Be Well and Be Safe GOD BLESS ✨LOVE YOU All too🙏❤️✨

A post shared by AishwaryaRaiBachchan (@aishwaryaraibachchan_arb) on

ಐಶ್ ಮತ್ತು ಆರಾಧ್ಯ ಸಂಪೂರ್ಣವಾಗಿ ಚೇತರಿಸಿಕೊಂಡು ಮನೆಗೆ ಮರಳಿದ್ದರೆ, ಅಮಿತಾಭ್ ಮತ್ತು ಅಭಿಷೇಕ್ ಬಚ್ಚನ್ ಆಸ್ಪತ್ರೆಯಲ್ಲಿಯೇ ಇದ್ದಾರೆ. ಅವರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಮತ್ತು ಶೀಘ್ರದಲ್ಲೇ ಮನೆಗೆ ಹಿಂದಿರುಗುತ್ತಾರೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.

ಅಭಿಷೇಕ್ ಬಚ್ಚನ್ ಜನ್ಮದಿನಕ್ಕೆ ಐಶ್ವರ್ಯಾ ಕೊಟ್ರು ಡಿಫರೆಂಟ್ ಗಿಫ್ಟ್

ಜುಲೈ 11 ರಂದು ಬಿಗ್ ಬಿ ಮತ್ತು ಅಭಿಷೇಕ್ ಆಸ್ಪತ್ರೆಗೆ ದಾಖಲಾಗಿದ್ದರು.

ಅವರ ಕರೋನವೈರಸ್ ಪರೀಕ್ಷೆಗಳ ನಂತರ ಬಚ್ಚನ್ ನಿವಾಸ 'ಜಲ್ಸಾ' ಅನ್ನು ಸಹ ಧಾರಕ ವಲಯವೆಂದು ಘೋಷಿಸಲಾಯಿತು. ಆದಾಗ್ಯೂ ವಾರಾಂತ್ಯದಲ್ಲಿ, ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಜಲ್ಸಾವನ್ನು COVID-19 ಧಾರಕ ವಲಯವೆಂದು ಘೋಷಿಸಿದ ಪೋಸ್ಟರ್ ಅನ್ನು ತೆಗೆದುಹಾಕಿತು.

Trending News