/kannada/photo-gallery/shukra-gochar-laxmi-narayana-yoga-bless-this-zodiac-signs-with-huge-wealth-and-success-221344 Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು 221344

ನವದೆಹಲಿ: ಎಲ್ಲಾ ಎಲ್‌ಪಿಜಿ ಗ್ರಾಹಕರು ಮಾರುಕಟ್ಟೆ ಬೆಲೆಗೆ ಇಂಧನವನ್ನು ಖರೀದಿಸಬೇಕಾಗಿದೆ. ಆದಾಗ್ಯೂ ಸಬ್ಸಿಡಿ ಮೊತ್ತವನ್ನು ಬಳಕೆದಾರರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾಯಿಸುವ ಮೂಲಕ ಸರ್ಕಾರವು ಒಂದು ವರ್ಷದಲ್ಲಿ ತಲಾ 14.2 ಕಿಲೋಗ್ರಾಂಗಳಷ್ಟು ತೂಕದ 12 ಸಿಲಿಂಡರ್‌ಗಳಿಗೆ ಸಬ್ಸಿಡಿ ನೀಡುತ್ತದೆ.

ಸಾಮಾನ್ಯವಾಗಿ, ಎಲ್‌ಪಿಜಿ (LPG) ದರವನ್ನು ಪ್ರತಿ ತಿಂಗಳ ಮೊದಲ ದಿನದಂದು ಅಂದರೆ 1ನೇ ತಾರೀಖಿನಂದು ಪರಿಷ್ಕರಿಸಲಾಗುತ್ತದೆ. ಪ್ರಸ್ತುತ ಸರ್ಕಾರವು ಎಲ್‌ಪಿಜಿ ಬಳಕೆದಾರರಿಗೆ ಸಬ್ಸಿಡಿ ಸೇವೆಯನ್ನು ವಿಸ್ತರಿಸಿದೆ. 

ಆದರೆ ನೀವು ನಿಮ್ಮ ಖಾತೆಯಲ್ಲಿ ಸಬ್ಸಿಡಿ ಹಣವನ್ನು ಪಡೆದಿದ್ದೀರಾ...? ನಿಮ್ಮ ಖಾತೆಗೆ  ಎಲ್‌ಪಿಜಿ ಸಬ್ಸಿಡಿ (LPG  Subsidy) ಹಣ ವರ್ಗಾವಣೆಯಾಗಿದೆಯೇ ಎಂದು ನೀವು ಪರಿಶೀಲಿಸಲು ಬಯಸುವುದಾದರೆ ಐಒಸಿಎಲ್ (IOCL), ಎಚ್‌ಪಿ ಮತ್ತು ಬಿಪಿಸಿಎಲ್ ಸರ್ಕಾರಿ ಸ್ವಾಮ್ಯದ ಕಂಪನಿಗಳಲ್ಲಿ ನಿಮ್ಮ ಅನಿಲ ಸಬ್ಸಿಡಿಯ ಸ್ಥಿತಿಯನ್ನು ನೀವು ಹೇಗೆ ಪರಿಶೀಲಿಸಬಹುದು ಎಂದು ನಾವು ತಿಳಿಸುತ್ತಿದ್ದೇವೆ. ಏಕೀಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಎಲ್‌ಪಿಜಿ ಸಬ್ಸಿಡಿ ಸ್ಥಿತಿಯನ್ನು ಹೇಗೆ ಪರಿಶೀಲಿಸುವುದು ಎಂಬುದರ ಕುರಿತು ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ.

ಎಲ್‌ಪಿಜಿ ಗ್ರಾಹಕರೇ ನವೆಂಬರ್ 1ರಿಂದ ಕಡ್ಡಾಯವಾಗಲಿದೆ ಈ ನಿಯಮ, ಪಾಲಿಸದಿದ್ದರೆ ಸಿಗಲ್ಲ ಸಿಲಿಂಡರ್

ನಿಮ್ಮ ಎಲ್‌ಪಿಜಿ ಐಡಿ ನಿಮಗೆ ತಿಳಿದಿಲ್ಲದಿದ್ದರೆ ಏನು ಮಾಡಬೇಕು?

  • ನಿಮ್ಮ ಎಲ್‌ಪಿಜಿ ಐಡಿ ನಿಮಗೆ ತಿಳಿದಿಲ್ಲದಿದ್ದರೆ, ನಿಮ್ಮ 17 ಅಂಕಿಯ ಎಲ್‌ಪಿಜಿ ಸಂಖ್ಯೆಯ ಕೆಳಗಿನ ಬಟನ್ ಕ್ಲಿಕ್ ಮಾಡಿ.
  • ಕಂಪನಿಯ ಹೆಸರನ್ನು ಆಯ್ಕೆ ಮಾಡಲು ನಿಮ್ಮನ್ನು ಕೇಳಲಾಗುತ್ತದೆ
  • ಮೂರು ಆಯ್ಕೆಗಳಿಂದ ನೀವು (ಗ್ಯಾಸ್, ಎಚ್‌ಪಿ ಗ್ಯಾಸ್ ಅಥವಾ ಇಂಡೇನ್) ನಿಮ್ಮ ಸಿಲಿಂಡರ್ ಕಂಪನಿಯನ್ನು ಆಯ್ಕೆ ಮಾಡಬಹುದು
  • ಬಳಿಕ ಇನ್ನೊಂದು ಪುಟ ತೆರೆಯುತ್ತದೆ
  • ಹೊಸ ಪುಟದಲ್ಲಿ, ನೀವು ಯಾವ ಆಯ್ಕೆಯನ್ನು ಆರಿಸಿದ್ದೀರಿ ಎಂಬುದರ ಆಧಾರದ ಮೇಲೆ, ಕೆಲವು ವಿವರಗಳನ್ನು ನೀಡಲು ನಿಮ್ಮನ್ನು ಕೇಳಲಾಗುತ್ತದೆ
  • ಈ ವಿವರಗಳು ನಿಮ್ಮ ಫೋನ್ ಸಂಖ್ಯೆ, ನಿಮ್ಮ ವಿತರಕರ ಹೆಸರು, ನಿಮ್ಮ ಗ್ರಾಹಕರ ಸಂಖ್ಯೆ
  • ನೀವು ಕ್ಯಾಪ್ಚಾ ಕೋಡ್ ಅನ್ನು ಭರ್ತಿ ಮಾಡಿ ಸಲ್ಲಿಸಬೇಕು

ನಿಮ್ಮ ಎಲ್‌ಪಿಜಿ ಐಡಿ ನಿಮಗೆ ಈಗಾಗಲೇ ತಿಳಿದಿದ್ದರೆ, ನೀವು ಈ ಕೆಳಗಿನವುಗಳನ್ನು ಮಾಡಬಹುದು (ಎಚ್‌ಪಿ ವೆಬ್‌ಸೈಟ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೋಡೋಣ)

ಸಮಯಕ್ಕೆ ಮೊದಲೇ ಗ್ಯಾಸ್ ಸಿಲಿಂಡರ್ ಖಾಲಿಯಾದರೆ ಇಲ್ಲಿ ದೂರು ನೀಡಿ

- Http://mylpg.in/ ಗೆ ಹೋಗಿ
- ಈಗ ಒದಗಿಸಿದ ಜಾಗದ ಬಲಭಾಗದಲ್ಲಿ ನಿಮ್ಮ ಎಲ್‌ಪಿಜಿ ಐಡಿಯನ್ನು ನಮೂದಿಸಿ
- ಈಗ ನೀವು ಯಾವ ಒಎಂಸಿ ಎಲ್‌ಪಿಜಿ ಬಳಸುತ್ತಿದ್ದರೂ, ನಿಮ್ಮ ಬಳಕೆದಾರರ ವಿವರಗಳನ್ನು ನೀವು ಭರ್ತಿ ಮಾಡಬೇಕಾಗುತ್ತದೆ

ಈ ಸ್ಕ್ರೀನ್‌ಶಾಟ್ ಅನ್ನು ಕೆಳಗೆ ಪರಿಶೀಲಿಸಿ

  • 17 ಅಂಕಿಯ ಎಲ್‌ಪಿಜಿ ಐಡಿ ನಮೂದಿಸಿ.
  • ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯ ವಿವರಗಳನ್ನು ಭರ್ತಿ ಮಾಡಿ
  • ಕ್ಯಾಪ್ಚಾ ಕೋಡ್‌ನಲ್ಲಿ ಪಂಚ್ ಮಾಡಿ ಮತ್ತು ಮುಂದುವರಿಸಿ
  • ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ನೀವು ಒಟಿಪಿ ಪಡೆಯುತ್ತೀರಿ
  • ಮುಂದಿನ ಪುಟದಲ್ಲಿ ನಿಮ್ಮ ಇಮೇಲ್ ಐಡಿಯನ್ನು ನಮೂದಿಸಿ ಮತ್ತು ಪಾಸ್ವರ್ಡ್ ರಚಿಸಿ
  • ನಿಮ್ಮ ಇಮೇಲ್ ಐಡಿಯಲ್ಲಿ ನೀವು ಸಕ್ರಿಯಗೊಳಿಸುವ ಲಿಂಕ್ ಅನ್ನು ಪಡೆಯುತ್ತೀರಿ
  • ಲಿಂಕ್ ಕ್ಲಿಕ್ ಮಾಡಿ
  • ಒಮ್ಮೆ ನೀವು ಹಾಗೆ ಮಾಡಿದರೆ, ನಿಮ್ಮ ಖಾತೆಯನ್ನು ಸಕ್ರಿಯಗೊಳಿಸಲಾಗುತ್ತದೆ
  • ಈಗ, mylpg.in ಖಾತೆಗೆ ಲಾಗಿನ್ ಮಾಡಿ
  • ನಿಮ್ಮ ಎಲ್‌ಪಿಜಿ ಖಾತೆಗೆ ನಿಮ್ಮ ಬ್ಯಾಂಕ್ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿದೆಯೇ ಎಂದು ಪಾಪ್ ಅಪ್ ವಿಂಡೋದಲ್ಲಿ ನಮೂದಿಸಿ  
  • ಈಗ ಕ್ಲಿಕ್ ಮಾಡಿ, ಸಿಲಿಂಡರ್ ಬುಕಿಂಗ್ ಇತಿಹಾಸವನ್ನು ವೀಕ್ಷಿಸಿ / ಸಬ್ಸಿಡಿ ವರ್ಗಾಯಿಸಲಾಗಿದೆಯೇ ಎಂಬುದನ್ನು ತಿಳಿಯಿರಿ.

ಸರ್ಕಾರದ  PAHAL (DBTL) ಯೋಜನೆಯು ಎಲ್‌ಪಿಜಿ ಸಿಲಿಂಡರ್‌ಗಳ ಸಬ್ಸಿಡಿಯನ್ನು ನೇರವಾಗಿ ಗ್ರಾಹಕರ ಆಧಾರ್ ಲಿಂಕ್ಡ್ ಬ್ಯಾಂಕ್ ಖಾತೆಗಳಿಗೆ ಒದಗಿಸುವುದನ್ನು ಖಾತ್ರಿಗೊಳಿಸುತ್ತದೆ. ಏತನ್ಮಧ್ಯೆ, ಅಡಿಗೆಮನೆಗಳಲ್ಲಿ ಪರಿಸರ ಸ್ನೇಹಿ ಇಂಧನದ ವ್ಯಾಪ್ತಿಯನ್ನು ಹೆಚ್ಚಿಸಲು ಸರ್ಕಾರವು ಈಗಾಗಲೇ ಪಿಎಂಯುವೈ ಅಡಿಯಲ್ಲಿ ಬಡ ಮಹಿಳೆಯರಿಗೆ 8 ಕೋಟಿ ಉಚಿತ ಎಲ್‌ಪಿಜಿ ಸಂಪರ್ಕವನ್ನು ನೀಡಿದೆ.
 

Section: 
English Title: 
Know how to check LPG subsidy status
News Source: 
Home Title: 

ನೀವು ನಿಮ್ಮ LPG ಸಬ್ಸಿಡಿ ಸ್ವೀಕರಿಸಿದ್ದೀರಾ? ಅದನ್ನು ಈ ರೀತಿ ಪರಿಶೀಲಿಸಿ

ನೀವು ನಿಮ್ಮ LPG ಸಬ್ಸಿಡಿ ಸ್ವೀಕರಿಸಿದ್ದೀರಾ? ಅದನ್ನು ಈ ರೀತಿ ಪರಿಶೀಲಿಸಿ
Yes
Is Blog?: 
No
Tags: 
Facebook Instant Article: 
Yes
Highlights: 

ಎಲ್‌ಪಿಜಿ ದರಗಳನ್ನು ಪ್ರತಿ ತಿಂಗಳು 1ನೇ ತಾರೀಖಿನಂದು ಪರಿಷ್ಕರಿಸಲಾಗುತ್ತದೆ.

ಎಲ್‌ಪಿಜಿ ಗ್ರಾಹಕರು ಇಂಧನವನ್ನು ಮಾರುಕಟ್ಟೆ ಬೆಲೆಗೆ ಖರೀದಿಸಬೇಕಾಗುತ್ತದೆ.

ಸರ್ಕಾರವು ಒಂದು ವರ್ಷದಲ್ಲಿ ಪ್ರತಿ ಮನೆಗೆ 12 ಸಿಲಿಂಡರ್‌ಗಳಿಗೆ ಸಬ್ಸಿಡಿ ನೀಡುತ್ತದೆ.

Mobile Title: 
ನೀವು ನಿಮ್ಮ LPG ಸಬ್ಸಿಡಿ ಸ್ವೀಕರಿಸಿದ್ದೀರಾ? ಅದನ್ನು ಈ ರೀತಿ ಪರಿಶೀಲಿಸಿ
Publish Later: 
No
Publish At: 
Wednesday, October 28, 2020 - 23:29
Created By: 
Yashaswini V
Updated By: 
Yashaswini V
Published By: 
Yashaswini V