ಕರೋನಾ ವೈರಸ್ ಒಂದು ರೀತಿ ವರ್ಲ್ಡ್ ವಾರ್-2 : ಪ್ರಧಾನಿ ಮೋದಿ

ಕೋವಿಡ್-19 ಇತಿಹಾಸದಲ್ಲಿ ವರ್ಲ್ಡ್ ವಾರ್-2ರ ಥರ ನೆನಪಾಗಿ ಉಳಿಯಲಿದೆ- ಪ್ರಧಾನಿ ನರೇಂದ್ರ ಮೋದಿ

Last Updated : Nov 7, 2020, 08:32 AM IST
  • ಭಾರತ-ಇಟಲಿ ವರ್ಚುವಲ್ ಸಮ್ಮೇಳನದಲ್ಲಿ ಮೋದಿ ಮಾತು
  • ಕೋವಿಡ್-19 ಇತಿಹಾಸದಲ್ಲಿ ವರ್ಲ್ಡ್ ವಾರ್-2ರ ಥರ ನೆನಪಾಗಿ ಉಳಿಯಲಿದೆ
  • ಕರೋನಾ ತೊಲಗಿಸಲು ಭಾರತವೂ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಲಸಿಕೆ ಕಂಡುಹಿಡಿಯಲು ಸಂಶೋಧನೆ
ಕರೋನಾ ವೈರಸ್ ಒಂದು ರೀತಿ ವರ್ಲ್ಡ್ ವಾರ್-2 : ಪ್ರಧಾನಿ ಮೋದಿ  title=
Image courtesy: ANI

ನವದೆಹಲಿ: ಜಗತ್ತಿನಾದ್ಯಂತ ಕಾಡುತ್ತಿರುವ ಕೋವಿಡ್-19 (Covid-19) ಪಿಡುಗನ್ನು ಎದುರಿಸಲು ಜಗತ್ತೇ ಒಂದಾಗಿ ಶ್ರಮಿಸುತ್ತಿದ್ದು, ಬಹುತೇಕ ಯುದ್ಧೋಪಾದಿಯಲ್ಲಿ ಕೆಲಸಗಳು ನಡೆಯುತ್ತಿವೆ. ಇನ್ನೂ ತೊಲಗಿಸಲಾಗದ ಕರೋನಾಗೆ ಭಾರತವೂ ಸೇರಿ ಜಗತ್ತಿನ ಹಲವು ದೇಶಗಳಲ್ಲಿ ಲಸಿಕೆ ಕಂಡುಹಿಡಿಯಲು ಸಂಶೋಧನೆಗಳು ನಡೆಯುತ್ತಿವೆ.

ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ (Narendra Modi)ಯವರು ಕರೋನಾ ಹಿನ್ನೆಲೆಯಲ್ಲಿ ಎರಡನೇ ವಿಶ್ವ ಮಹಾಯುದ್ಧವನ್ನು ನೆನಪಿಸಿಕೊಂಡಿದ್ದಾರೆ. ಇಂದು ನಡೆದ ಭಾರತ-ಇಟಲಿ ವರ್ಚುವಲ್ ಸಮ್ಮೇಳ (India-Italy Virtual Summit)ನದಲ್ಲಿ ಇಟಲಿಯ ಪ್ರಧಾನಿ ಗಿಸೆಪ್ಪೆ ಕಾಂಟೆ ಜತೆ ಮಾತನಾಡಿದ ಅವರು ಕೋವಿಡ್-19 ಇತಿಹಾಸದಲ್ಲಿ ವರ್ಲ್ಡ್ ವಾರ್-2ರ (world war-2)  ಥರ ನೆನಪಾಗಿ ಉಳಿಯಲಿದೆ ಎಂದರು.

Brucellosis Outbreak: ಮತ್ತೊಂದು ವೈರಸ್‌ನ ಹಿಡಿತದಲ್ಲಿ ಚೀನಾ

ಕರೊನೋತ್ತರ ಜಗತ್ತಿಗೆ ನಾವು ಹೊಂದಿಕೊಳ್ಳಬೇಕಾಗಿದೆ. ಕರೊನಾ ಬಳಿಕದ ಅವಕಾಶ ಹಾಗೂ ಸವಾಲುಗಳಿಗೆ ನಾವು ಸಿದ್ಧರಾಗಿ ತೆರೆದುಕೊಳ್ಳಬೇಕಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯ ಪಟ್ಟರು. ಹಾಗೆಯೇ ಕೋವಿಡ್ನಿಂದಾಗಿ ಇಟಲಿಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಭಾರತದ ಪರವಾಗಿ ಮೋದಿ ಸಾಂತ್ವನ ಸಲ್ಲಿಸಿದರು.

ಮುಂದಿನ ಮಹಾಮಾರಿಗೆ ಸಿದ್ಧರಾಗಿ, ವಿಶ್ವದ ನಾಯಕರುಗಳಿಗೆ WHO ಎಚ್ಚರಿಕೆ

Trending News