ನವದೆಹಲಿ: ಅಡಿಲೇಡ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ಮೊದಲ ಇನಿಂಗ್ಸ್ ನಲ್ಲಿ ಕೇವಲ 244 ರನ್ ಗಳಿಗೆ ಸರ್ವಪತನವನ್ನು ಕಂಡಿತು.
Australia vs India, 3rd T20I: ಕೊಹ್ಲಿ ಆಟ ವ್ಯರ್ಥ,ಆಸಿಸ್ ಗೆ 12 ರನ್ ಗಳ ರೋಚಕ ಗೆಲುವು
ಇದಾದ ನಂತರ ಬ್ಯಾಟಿಂಗ್ ಆರಂಭಿಸಿದ ಆಸಿಸ್ ಪಡೆಗೆ ಉಮೇಶ್ ಯಾದವ್ ಮತ್ತು ಆರ್ ಅಶ್ವಿನ್ ಹಾಗೂ ಬುಮ್ರಾ ಕ್ರಮವಾಗಿ 3,4,2 ವಿಕೆಟ್ ಗಳನ್ನು ಗಳಿಸುವ ಮೂಲಕ ಆಸಿಸ್ ತಂಡಕ್ಕೆ ಮಾರಕವಾಗಿ ಪರಿಣಮಿಸಿದರು. ಆ ಮೂಲಕ ಎದುರಾಳಿ ತಂಡವನ್ನು ಕೇವಲ191 ರನ್ ಗಳಿಗೆ ಕಟ್ಟಿ ಹಾಕಿದರು,ಆಸಿಸ್ ಪರವಾಗಿ ಪೈನೆ ಮಾತ್ರ 73 ರನ್ ಗಳಿಸುವ ಮೂಲಕ ಅಜೇಯರಾಗಿ ಉಳಿದರು.
Australia are all out for 191 🏏
Yadav dismisses Hazlewood for 8⃣ and Paine remains unbeaten on 73.
India lead by 53 runs at the halfway point 🙌#AUSvIND SCORECARD 👉 https://t.co/Q10dx0IFfv pic.twitter.com/3RHitnLflZ
— ICC (@ICC) December 18, 2020
ಈಗ ಎರಡನೇ ಇನಿಂಗ್ಸ್ ನಲ್ಲಿ ಬ್ಯಾಟಿಂಗ್ ಆರಂಭಿಸಿರುವ ಭಾರತ ತಂಡವು 9 ರನ್ ಗಳಿಗೆ ಒಂದು ವಿಕೆಟ್ ನ್ನು ಕಳೆದುಕೊಂಡಿದೆ, ಮೊದಲ ಇನಿಂಗ್ಸ್ ನಲ್ಲಿ ಶೂನ್ಯಕ್ಕೆ ನಿರ್ಗಮಿಸಿದ್ದ ಪೃಥ್ವಿ ಶಾ ಎರಡನೇ ಇನಿಂಗ್ಸ್ ನಲ್ಲಿಯೂ ಕೂಡ ಕೇವಲ 4 ರನ್ ಗಳಿಗೆ ಔಟಾದರು.ಭಾರತ ತಂಡವು ಈಗ 62 ರನ್ ಗಳ ಮುನ್ನಡೆಯನ್ನು ಸಾಧಿಸಿದೆ.