ನವದೆಹಲಿ: Covid-19 Vaccination Program: ಕೊವಿಡ್-19 ಲಸಿಕಾಕರಣ ಕಾರ್ಯಕ್ರಮ ಸ್ವಯಂಪ್ರೇರಿತವಾಗಿರಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಅಷ್ಟೇ ಅಲ್ಲ ಭಾರತದಲ್ಲಿ ಬಿಡುಗಡೆಗೊಳಿಸಲಾಗುವ ವ್ಯಾಕ್ಸಿನ್ ಇತರೆ ದೇಶಗಳಲ್ಲಿ ಬಿಡುಗಡೆಗೊಳಿಸಲಾಗಿರುವ ಲಸಿಕೆಗಳ ಮಾದರಿಯಲ್ಲೇ ಪ್ರಭಾವಶಾಲಿಯಾಗಿರಲಿವೆ ಎಂದು ಸಚಿವಾಲಯ ಹೇಳಿದೆ.
ಕೊವಿಡ್ ವಿರೋಧಿ ವ್ಯಾಕ್ಸಿನ್ ನ ಸಂಪೂರ್ಣ ಶೆಡ್ಯೂಲ್ ಅನುಸರಿಸಬೇಕು
ಕೊವಿಡ್ ವಿರೋಧಿ ಲಸಿಕೆಯ ಸಂಪೂರ್ಣ ಶೆಡ್ಯೂಲ್ ತೆಗೆದುಕೊಳ್ಳಲು ಜನರಿಗೆ ಸೂಚಿಸಲಾಗುವುದು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಯಾವುದೇ ಓರ್ವ ವ್ಯಕ್ತಿಯು ಮೊದಲು ಕರೋನಾ ಸೋಂಕಿಗೆ ಒಳಗಾಗಿದ್ದಾನೆಯೇ ಅಥವಾ ಇಲ್ಲವೇ ಎಂಬುದರ ಮೇಲೆ ಇದು ಅವಲಂಭಿಸಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ಇದರ ಹಿಂದೆ ಆರೋಗ್ಯ ಸಚಿವಾಲಯದ ತಾರ್ಕಿಕತೆಯೆಂದರೆ, ಇದು ರೋಗದ ವಿರುದ್ಧ ಬಲವಾದ ರೋಗನಿರೋಧಕ ಪ್ರತಿಕ್ರಿಯೆಯನ್ನು ಬೆಳೆಸಲು ಸಹಾಯ ಮಾಡುತ್ತದೆ. ಆರೋಗ್ಯ ಸಚಿವಾಲಯ ಹೊರಡಿಸಿರುವ ಸಲಹೆಗಳ ಪ್ರಕಾರ, ಪ್ರತಿಕಾಯಗಳ ರಕ್ಷಣಾತ್ಮಕ ಮಟ್ಟವು ಸಾಮಾನ್ಯವಾಗಿ ಎರಡನೇ ಡೋಸ್ ಪಡೆದ ಎರಡು ವಾರಗಳ ನಂತರ ಹೆಚ್ಚಾಗುತ್ತದೆ ಎನ್ನಲಾಗಿದೆ.
ಇದನ್ನು ಓದಿ- Covid-19: ಐಸಿಎಂಆರ್ ಮಹಾನಿರ್ದೇಶಕ ಬಲರಾಮ್ ಭಾರ್ಗವ ಏಮ್ಸ್ ಟ್ರೂಮಾ ಸೆಂಟರ್ ಗೆ ದಾಖಲು
ವಿಶೇಷವೆಂದರೆ, ಈ ಕುರಿತು ಸಚಿವಾಲಯಕ್ಕೆ ಪ್ರಶ್ನಿಸಲಾಗಿ, ಸಚಿವಾಲಯ ಇದಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳ ಒಂದು ಪಟ್ಟಿಯನ್ನೇ ಜಾರಿಗೊಳಿಸಿದೆ. ಈ ಪಟ್ಟಿ ಜನ ಸಾಮಾನ್ಯರ ಮನಸ್ಸಿನಲ್ಲಿ ಮೂಡುತ್ತಿರುವ ಸಾಮಾನ್ಯ ಪ್ರಶ್ನೆಗಳನ್ನು ಆಧಾರವಾಗಿಟ್ಟುಕೊಂಡು ತಯಾರಿಸಲಾಗಿದೆ. ಇದರಲ್ಲಿ ಕೊರೊನಾ ವ್ಯಾಕ್ಸಿನ್ ಲಸಿಕೆ ಹಾಕಿಸಿಕೊಳ್ಳುವುದು ಅನಿವಾರ್ಯವೇ? ಎಂಬ ಪ್ರಶ್ನೆಗೂ ಕೂಡ ಉತ್ತರಿಸಲಾಗಿದೆ. ಜೊತೆಗೆ ಶರೀರದಲ್ಲಿ ಪ್ರತಿಕಾಯಗಳ ಅಭಿವೃದ್ಧಿಗೆ ಎಷ್ಟು ಸಮಯಾವಕಾಶ ಬೇಕಾಗುತ್ತದೆ ಮತ್ತು ಕೊವಿಡ್-19 ನಿಂದ ಚೇತರಿಸಿಕೊಂಡ ವ್ಯಕ್ತಿಯೂ ಕೂಡ ಲಸಿಕೆ ಹಾಕಿಸಿಕೊಳ್ಳಬೇಕೆ? ಎಂಬ ಇತ್ಯಾದಿ ಪ್ರಶ್ನೆಗಳು ಶಾಮೀಲಾಗಿವೆ
ಇದನ್ನು ಓದಿ-. ಮೂರನೇ ಹಂತದ ಕೋವಾಕ್ಸಿನ್ ಕ್ಲಿನಿಕಲ್ ಪ್ರಯೋಗಗಳಿಗೆ ಡಿಸಿಜಿಐ ಅನುಮೋದನೆ
ಭಾರತದಲ್ಲಿ ಒಟ್ಟು 6 ಲಸಿಕೆಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ
ಭಾರತದಲ್ಲಿ ವಿವಿಧ ವ್ಯಾಕ್ಸಿನ್ ಗಳು ಲಸಿಕೆ ಅಭಿವೃದ್ಧಿ ಪ್ರಕ್ರಿಯೆಯ ವಿವಿಧ ಪರೀಕ್ಷಾ ಹಂತದಲ್ಲಿವೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಇದಲ್ಲದ ಸರ್ಕಾರ ಕೂಡ ಶೀಘ್ರದಲ್ಲಿಯೇ ಲಸಿಕೆ ಬಿಡುಗಡೆಗೆ ಸನ್ನದ್ಧವಾಗಿದೆ. ಪ್ರಸ್ತುತ ಭಾರತದಲ್ಲಿ ಆರು ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇವುಗಳಲ್ಲಿ ICMR ಸಹಯೋಗದೊಂದಿಗೆ ಭಾರತ್ ಬಯೋಟೆಕ್ ನ ಲಸಿಕೆ, ಜಾಯ್ಡಸ್ ಕ್ಯಾಡಿಲಾ ಲಸಿಕೆ, ಸಿರಮ್ ಇನ್ಸ್ಟಿಟ್ಯೂಟ್ ನ ಆಕ್ಸ್ಫರ್ಡ್ ಲಸಿಕೆ, ಸ್ಪುಟ್ನಿಕ್ V ಲಸಿಕೆಗಳು ಪ್ರಮುಖವಾಗಿ ಶಾಮೀಲಾಗಿವೆ.
ಇದನ್ನು ಓದಿ- ದೇಶದ ಪ್ರಥಮ ಮತ್ತು ಏಕೈಕ ICMR ಅನುಮೋದಿತ ಮೊಬೈಲ್ COVID-19 ಟೆಸ್ಟ್ ಲ್ಯಾಬಿಗೆ ಚಾಲನೆ
ವ್ಯಾಕ್ಸಿನ್ ನಿಂದ ಸಾಮಾನ್ಯ ಅಡ್ಡಪರಿಣಾಮಗಳು ಎದುರಾಗಲಿವೆ
ಯಾವುದೇ ಒಂದು ಲಸಿಕೆ ಬಳಕೆಗೆ ಸುರಕ್ಷಿತವಾಗಿದೆಯೇ? ಎಂಬುದು ಸಾಮಾನ್ಯ ಜನರ ಮನದಲ್ಲಿರುವ ದೊಡ್ಡ ಪ್ರಶ್ನೆ? ಏಕೆಂದರೆ ಅವುಗಳನ್ನು ಬಹಳ ಕಡಿಮೆ ಸಮಯದಲ್ಲಿ ಪರೀಕ್ಷಿಸಿ ಪರಿಚಯಿಸಲಾಗುತ್ತಿದೆ. ಇದಲ್ಲದೆ ಲಸಿಕೆಯ ಸಂಭವನೀಯ ಅಡ್ಡಪರಿಣಾಮಗಳು ಯಾವುವು? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಿಸಿರುವ ಆರೋಗ್ಯ ಸಚಿವಾಲಯ, ದೇಶದ ಔಷಧಿ ನಿಯಂತ್ರಣ ಪ್ರಾಧಿಕಾರ ಲಸಿಕೆ ಬಳಕೆಗೆ ಸುರಕ್ಷಿತವಾಗಿದೆ ಮತ್ತು ಪ್ರಭಾವಶಾಲಿಯಾಗಿದೆ ಎಂಬುದನ್ನು ಸ್ಪಷ್ಟಪಡಿಸಿದಾಗ ಮಾತ್ರ ಈ ಲಸಿಕೆಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಸಚಿವಾಲಯ ಹೇಳಿದೆ. ಆದರೆ, ಇದೆ ವೇಳೆ ಲಸಿಕೆ ಹಾಕಿಸಿಕೊಂಡ ಜಾಗದಲ್ಲಿ ತುರಿಕೆ, ನೋವು, ಲಘು ಜ್ವರ ಇತ್ಯಾದಿ ಅಡ್ಡಪರಿಣಾಮಗಳು ಕಾಣಿಸಿಕೊಳ್ಳಬಹುದು. ಆದರೆ, ಅವು ಅಷ್ಟೊಂದು ಗಂಭೀರವಾಗಿರುವುದಿಲ್ಲ ಎಂದೂ ಕೂಡ ಆರೋಗ್ಯ ಸಚಿವಾಲಯ ಹೇಳಿದೆ. ವ್ಯಾಕ್ಸಿನ ನ ಒಟ್ಟು 2 ಡೋಸ್ ಗಳು 28 ದಿನಗಳ ಅಂತರದಲ್ಲಿ ನೀಡಲಾಗುವುದು ಹಾಗೂ ಇದಾದ ಎರಡು ವಾರಗಳ ಬಳಿಕ ಲಸಿಕೆ ತನ್ನ ಪ್ರಭಾವ ತೋರಿಸಲು ಆರಂಭಿಸಲಿದ್ದು, ದೇಹದಲ್ಲಿ ಪ್ರತಿಕಾಯಗಳ ಅಭಿವೃದ್ಧಿಯಾಗಲಿದೆ ಎಂದು ಸಚಿವಾಲಯ ಹೇಳಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.