ನವದೆಹಲಿ: Fraud In The Name Of Vaccine-ಕರೋನಾ ಪ್ರಕೋಪದ ನಡುವೆಯೇ ಇದೀಗ ಖದೀಮರು ಕೋವಿಡ್ ಲಸಿಕೆಯನ್ನು ವಂಚನೆಯ ಹೊಸ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ. ಭೋಪಾಲ್‌ನಲ್ಲಿ, ಲಸಿಕೆಗಾಗಿ ನೋಂದಣಿ ಮಾಡಿಸಲು ಹೇಳಿ ವಿದ್ಯಾರ್ಥಿಯೋರ್ವನನ್ನು ಸುಲಿಗೆ ಮಾಡಲು ವಂಚಕರು ಯತ್ನಿಸಿದ್ದಾರೆ. ಹೆಸರು ನೊಂದಾಯಿಸದೆ ಹೋದಲ್ಲಿ ವ್ಯಾಕ್ಸಿನ್ ಸ್ಟಾಕ್ ಮುಗಿದು ಹೋಗಲಿದೆ ಎಂಬ ಆಮೀಷವೊಡ್ಡಿ ವಂಚಕರು ವಿದ್ಯಾರ್ಥಿಗೆ ಓಟಿಪಿ ಹಂಚಿಕೊಳ್ಳಲು ಕೇಳಿದ್ದಾರೆ. ಆದರೆ, ವಿದ್ಯಾರ್ಥಿ ತನ್ನ ಚಾಕಚಕ್ಯತೆಯ ಕಾರಣ ವಂಚನೆಯಿಂದ ಪಾರಾಗಿ, ಸೈಬರ್ ಸೆಲ್ ನಲ್ಲಿ ಈ ಕುರಿತು ದೂರನ್ನು ನೀಡಿದ್ದಾನೆ.
ನಗರದಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗೆ ಬುಧವಾರ ಕರೆ ಬಂದಿದೆ ಎಂದು ಎಎಸ್ಪಿ ರಜತ್ ಸಕ್ಲೆಚಾ ತಿಳಿಸಿದ್ದಾರೆ. ಕರೆ ಮಾಡಿದ ವ್ಯಕ್ತಿ ತನ್ನನ್ನು ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಯ ಅಧಿಕಾರಿ ಎಂದು ಬಣ್ಣಿಸಿಕೊಂಡಿದ್ದಾನೆ ಹಾಗೂ ಭಾರತದಲ್ಲಿ ಕೊರೊನಾ ವ್ಯಾಕ್ಸಿನ್ ಗಾಗಿ ನೋಂದಣಿ ಕಾರ್ಯ ಆರಂಭಗೊಂಡಿದ್ದು, ಈ ಹಿನ್ನೆಲೆಯಲ್ಲಿ ನಿಮಗೆ ಕರೆ ಮಾಡಲಾಗಿದೆ ಎಂದು ಹೇಳಿದ್ದಾನೆ.
ಇದನ್ನು ಓದಿ-Good News: ಆಕ್ಸ್‌ಫರ್ಡ್ COVID-19 ಲಸಿಕೆಯ ತುರ್ತು ಬಳಕೆಗೆ ಮುಂದಿನ ವಾರವೇ ಅನುಮತಿ ಸಾಧ್ಯತೆ
ಹೆಸರು ನೋಂದಾಯಿಸಲು ರೂ.500 ಶುಲ್ಕ ಪಾವತಿಸಬೇಕು ಹಾಗೂ ಉಳಿದ ಹಣವನ್ನು ಲಸಿಕೆ ಹಾಕಿದ ಬಳಿಕ ನಿಮ್ಮಿಂದ ಪಡೆಯಲಾಗುವುದು ಎಂದಿದ್ದಾನೆ. ಅಷ್ಟೇ ಅಲ್ಲ ಹೆಸರು ನೋಂದಾಯಿಸಲು ನಿಮ್ಮ ಅಧಿಕೃತ ಮೊಬೈಲ್ ಸಂಖ್ಯೆಗೆ OTP ಬರಲಿದ್ದು, ಆ ಸಂಖ್ಯೆಯನ್ನು ನೀವು ಹಂಚಿಕೊಂಡ ಬಳಿಕ ನಿಮ್ಮ ನೋಂದಣಿ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದಾನೆ. ಈ ವೇಳೆ ವಿದ್ಯಾರ್ಥಿ ಕಾಲ್ ಮಾಡಿದ ವ್ಯಕ್ತಿಗೆ ಇದುವರೆಗೆ ಲಸಿಕೆಯೇ ಮಾರುಕಟ್ಟೆಗೆ ಬಂದಿಲ್ಲ... ನೋಂದಣಿ ಕೆಲಸ ಹೇಗೆ ಶುರು ಮಾಡಿದಿರಿ ಎಂದು ಪ್ರಶ್ನಿಸಿದ್ದಾನೆ. ಬಳಿಕ ಜಾಣತನ ಮೆರೆದ ವಿದ್ಯಾರ್ಥಿ ಕರೆ ಮೊಟಕುಗೊಳಿಸಿದ್ದಾನೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಆದರೆ ಇದುವರೆಗೆ ಆರೋಪಿ ಯಾರು ಎಂಬುದು ಮಾತ್ರ ಪತ್ತೆಯಾಗಿಲ್ಲ.
ಇದನ್ನು ಓದಿ- BIG NEWS: ಸ್ಥಳೀಯ ಲಸಿಕೆ 'Covaxin' ಸುರಕ್ಷಿತ ಮತ್ತು ಪರಿಣಾಮಕಾರಿ ಎಂದ ICMR
ಇಂತಹ ಕರೆಗಳನ್ನು ಸ್ವೀಕರಿಸಬೇಡಿ
ಕೊರೊನಾ ವ್ಯಾಕ್ಸಿನ್ ಕುರಿತು ಬರುವ ಇಂತಹ ಕರೆಗಳನ್ನು ಸ್ವೀಕರಿಸಬೇಡಿ ಎಂದು ಎಸ್.ಪಿ ಸಕ್ಲೆಚಾ ನಾಗರಿಕರಲ್ಲಿ ಮನವಿ ಮಾಡಿದ್ದಾರೆ.ಕೊರೊನಾ (Coronavirus) ವ್ಯಾಕ್ಸಿನ್ ಗೆ ಹೆಸರು ನೋಂದಣಿ ಮಾಡುವುದಾಗಿ ಹೇಳಿ ನಿಮ್ಮ ಆಧಾರ್ ಸಂಖ್ಯೆ, OTP ಪಡೆದು ಬಳಿಕ ವಂಚಕರು ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಾರೆ ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ- ಲಸಿಕೆ ಬಂದರೂ ಮುಂದಿನ ಹತ್ತು ವರ್ಷ ಜಗತ್ತನ್ನು ಕಾಡಲಿದೆ ಕರೋನಾ
ಈ ರೀತಿ ಜಾಲ ಬೀಸುತ್ತಾರೆ
ಸೈಬರ್ ಕಳ್ಳರು ಹೇಗಾದರೂ ಮಾಡಿ ನಿಮ್ಮ ಬಳಿಯಿಂದ OTP ಸಂಖ್ಯೆಯನ್ನು ಪಡೆದುಕೊಳ್ಳಲು ಬಯಸುತ್ತಾರೆ. ಇದಕ್ಕಾಗಿ ATM ಕಾರ್ಡ್ ನಿಂದ ಹಿಡಿದು ಕ್ರೆಡಿಟ್ ಕಾರ್ಡ್ ವರೆಗೆ ಎಕ್ಸ್ಪೈರಿ ಸಂದೇಶ, ಖಾತೆ ಬಂದ್ ಆದ ಕುರಿತು ಮಾಹಿತಿ ನೀಡುವ ಸಂದೇಶ, ಖಾತೆ ಸೀಜ್ ಆಗಿರುವ ಕುರಿತು ಬರುವ ಸಂದೇಶ, ಆನ್ಲೈನ್ ಪೇಮೆಂಟ್ ಆಪ್ ಬಂದ್ ಆಗಿರುವ ಕುರಿತು ಬರುವ ಸಂದೇಶ ಇತ್ಯಾದಿಗಳ ಮೂಲಕ ಲಿಂಕ್ ಕಳುಹಿಸಿ ಆಮೀಷ ನೀಡಲಾಗುತ್ತದೆ ಹೀಗಾಗಿ ಯಾವುದೇ ಅಪರಿಚಿತ ವ್ಯಕ್ತಿಗಳಿಗೆ ATM ಕಾರ್ಡ್ ಸಂಖ್ಯೆ, ಖಾತೆ ಸಂಖ್ಯೆ, ಪಿನ್ ಸಂಖ್ಯೆ ಹಾಗೂ OTP ಸಂಖ್ಯೆಯನ್ನು ಹಂಚಿಕೊಳ್ಳಬಾರದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.