Joe Biden : ನಾಳೆ ಬೈಡನ್ ಪಟ್ಟಾಭಿಷೇಕ..ಮೊದಲ ಹತ್ತು ನಿರ್ಧಾರಗಳು ಏನಿರಬಹುದು ಗೊತ್ತಾ..?

ಜೊ ಬೈಡೆನ್ (Joe Biden)  ನಾಳೆ ಅಂದರೆ ಜ. 20 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬೈಡೆನ್ ಪಟ್ಟಾಭಿಷೇಕಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇಡೀ ವಿಶ್ವವೇ ಅಮೆರಿಕದತ್ತ ನೋಡುತ್ತಿದೆ.

Written by - Ranjitha R K | Last Updated : Jan 19, 2021, 10:57 AM IST
  • ಜ. 20 ರಂದು ಅಧಿಕಾರ ಸ್ವೀಕರಿಸಲಿದ್ದಾರೆ ಜೋ ಬೈಡನ್
  • ಮೊದಲ ದಿನವೇ ಮಹತ್ವದ ನಿರ್ಧಾರ ಪ್ರಕಟಿಸಲಿದ್ದಾರೆ ಬೈಡೆನ್
  • ಬೈಡೆನ್ ಕಾರ್ಯ ಸೂಚಿಯ ಆದ್ಯತೆ ವಿಷಯಗಳ ಮಾಹಿತಿ ಇಲ್ಲಿದೆ.
Joe Biden : ನಾಳೆ ಬೈಡನ್ ಪಟ್ಟಾಭಿಷೇಕ..ಮೊದಲ ಹತ್ತು ನಿರ್ಧಾರಗಳು ಏನಿರಬಹುದು ಗೊತ್ತಾ..?  title=
ಜ. 20 ರಂದು ಅಧಿಕಾರ ಸ್ವೀಕರಿಸಲಿದ್ದಾರೆ ಜೋ ಬೈಡನ್(file photo)

ವಾಷಿಂಗ್ಟನ್: ವಿಶ್ವದ ದೊಡ್ಡಣ್ಣ ಎನಿಸಿರುವ ಅಮೆರಿಕದಲ್ಲಿ ಈಗ ಸಂಭ್ರಮ ಕಳೆಕಟ್ಟಿದೆ.  ಜೊ ಬೈಡೆನ್ (Joe Biden)  ನಾಳೆ ಅಂದರೆ ಜ. 20 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬೈಡೆನ್ ಪಟ್ಟಾಭಿಷೇಕಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇಡೀ ವಿಶ್ವವೇ ಅಮೆರಿಕದತ್ತ ನೋಡುತ್ತಿದೆ. ಅಮೆರಿಕದ ಹೊಸ ಅಧ್ಯಕ್ಷರ ಮೊದಲ ನಿರ್ಣಯಗಳು ಏನಿರಬಹುದು ಎಂದು ಕುತೂಹಲದಿಂದ ಇಡೀ ವಿಶ್ವ ಕಾಯುತ್ತಿದೆ. 

ಬೈಡೆನ್ ಮೊದಲ ಹತ್ತು ದಿನದ ಕಾರ್ಯಸೂಚಿ (Agenda )ಸಿದ್ದ:
ಶ್ವೇತಭವನದಲ್ಲಿ ಕುಳಿತು ಮೊದಲ ಹತ್ತು ದಿನ ಏನೇನು ಮಾಡಬೇಕು ಎಂಬ ಯೋಜನೆ ಈಗಾಗಲೇ ಬೈಡೆನ್  (Joe Biden) ಹಾಕಿ ಕೊಂಡಿದ್ದಾರೆ. ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump)  ಕೈಗೊಂಡಿರುವ ಹಲವು ನಿರ್ಧಾರಗಳನ್ನು ಬೈಡೆನ್ ರದ್ದು ಮಾಡುವ ಸಾಧ್ಯತೆಗಳೂ  ಇವೆ. ಬೈಡೆನ್  ಶ್ವೇತ ಭವನ (White House) ಪ್ರವೇಶಿಸಿದ ಮೊದಲ ದಿನ, ಏನೇನು ಮಾಡಬಹುದು ಎಂಬುದು ಇಲ್ಲಿದೆ, ಮುಂದೆ ಓದಿ. 

ಇದನ್ನೂಓದಿ:  COVID-19 Vaccine : ಪ್ರಪಂಚವು ನೈತಿಕ ವೈಫಲ್ಯದಿಂದ ದುರಂತದ ಅಂಚಿನಲ್ಲಿದೆ - WHO

ಮೊದಲ ಹತ್ತು ದಿನ ಬೈಡೆನ್ ಏನು ಮಾಡಬಹುದು.:
ಶ್ವೇತ ಭವನದ ಚೀಫ್ ಆಫ್ ಸ್ಟಾಫ್ ರೋನ್ ಕ್ಲೀನ್ ಅವರು ಬೈಡೆನ್ ಮೊದಲ ದಿನದ ಅಜೆಂಡಾದ ಬಗ್ಗೆ ಒಂದಷ್ಟು ಹೇಳಿದ್ದಾರೆ. ಶ್ವೇತ ಭವನಕ್ಕೆ ಆಗಮಿಸಿದ ಕೂಡಲೇ ಒಂದಷ್ಟು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಿದ್ದಾರೆ. ಅವರಲ್ಲಿ ಈಗಾಗಲೇ ಒಂದು ಅಜೆಂಡಾ ಸಿದ್ದವಾಗಿದೆ.  ಅವರ ಅಜೆಂಡಾ ಪಟ್ಟಿ ಹೀಗಿದೆ. 
1. ಕರೋನಾ (COVID 19) ನಿಯಂತ್ರಣ ಕಾರ್ಯಕ್ರಮದಲ್ಲಿ ಪರಿಣಾಮಕಾರಿ ಹೆಜ್ಜೆಗಳನ್ನು ಕೈಗೊಳ್ಳುವುದು. ಜೊತೆಗೆ ಕರೋನಾ ಪರಿಹಾರ ಮತ್ತು ಲಸಿಕೆ (Vaccine) ವಿಚಾರದಲ್ಲಿ ಬೈಡೆನ್ ತೀರ್ಮಾನ ಕೈಗೊಳ್ಳಲಿದ್ದಾರೆ.
2. ಅಮೆರಿಕ (America)  ಆರ್ಥಿಕವಾಗಿ ಕುಸಿಯುತ್ತಿದೆ. ಚೀನಾದ ಎದುರು ಅಮೇರಿಕದ ಆರ್ಥಿಕತೆ ದುರ್ಬಲಗೊಳ್ಳದಂತೆ ಬೈಡೆನ್ ಹಲವು ನಿರ್ಧಾರಗಳನ್ನು ಕೈಗೊಳ್ಳಬಹುದು.
3. ಡೋನಾಲ್ಡ್ ಟ್ರಂಪ್ ಈ ಹಿಂದೆ 7 ಮುಸ್ಲಿಂ ದೇಶಗಳ ಪ್ರವಾಸ, ಮತ್ತು ಅಮೇರಿಕ ವಲಸೆಗೆ  ನಿಷೇಧ ಹೇರಿದ್ದರು. ಈ ನಿಷೇಧವನ್ನು ಬೈಡೆನ್ ಹಿಂತೆಗೆದುಕೊಳ್ಳುವ ಸಾಧ್ಯತೆಗಳಿವೆ.
4. ಇಂಗಾಲ ಮಾಲಿನ್ಯ ಕುರಿತಂತೆ ಪ್ಯಾರಿಸ್ ಪರಿಸರ ಒಪ್ಪಂದಕ್ಕೆ (Parris Agreement) ಅಮೆರಿಕವನ್ನು ತರುವ ಕುರಿತಂತೆಯೂ ಬೈಡೆನ್ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. 
5. ಅಮೆರಿಕದಲ್ಲಿ ಹೆಚ್ಚುತ್ತಿರುವ ಜನಾಂಗೀಯ ತಾರತಮ್ಯವನ್ನು ಕೊನೆಗಾಣಿಸಲು ಬೈಡನ್ ನಿರ್ಧಾರ ಪ್ರಕಟಿಸಬಹುದು. 
ಈ ಎಲ್ಲಾ ವಿಷಯಗಳು ಟ್ರಂಪ್ ಸರ್ಕಾರದ ಮಹತ್ವದ ವಿಚಾರಗಳಾಗಿದ್ದು, ಟ್ರಂಪ್ ಕಾರ್ಡ್ ಎಂದೇ ಜನಜನಿತವಾಗಿದೆ. ಬೈಡೆನ್ ಶ್ವೇತ ಭವನ (White House) ಕ್ಕೆ ಆಗಮಿಸಿದ ಬೆನ್ನಲ್ಲೇ ಟ್ರಂಪ್ ಕಾರ್ಡ್ (Trump card) ನಲ್ಲೇ ಬದಲಾವಣೆ ಮಾಡಲಿದ್ದು ಕುತೂಹಲ ಕೆರಳಿಸಿದೆ.

ಇದನ್ನೂಓದಿ: COVID 19 : ಕರೋನಾಕ್ಕೆ ಹೆದರಿದ ವ್ಯಕ್ತಿ ಮೂರು ತಿಂಗಳು ಅಡಗಿ ಕುಳಿತದ್ದಾದರೂ ಎಲ್ಲಿ ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News