ನವದೆಹಲಿ: ಬ್ಯಾಂಕಿಂಗ್ ವ್ಯವಸ್ಥೆ ಡಿಜಿಟಲ್ (Digital) ಆಗುತ್ತಿದ್ದಂತೆ, ಮೊದಲಿಗಿಂತ ಸುಲಭವಾಗಿ ಮತ್ತು ವೇಗವಾಗಿ ಬ್ಯಾಂಕಿಂಗ್ (Banking) ಸೇವೆಗಳು ಗ್ರಾಹಕರನ್ನು ತಲುಪುತ್ತಿವೆ. ಈಗ ಎಲ್ಲಿಂದ ಬೇಕಾದರೂ ಮೊಬೈಲ್ ಮೂಲಕವೇ ಬ್ಯಾಂಕ್ ಕೆಲಸಗಳನ್ನು ಪೂರೈಸಿಕೊಳ್ಳಬಹುದು. ಆದರೆ, ಇದರೊಂದಿಗೆ ಡಿಜಿಟಲ್ ವಂಚನೆಯ ಅಪಾಯವೂ ಇರುತ್ತದೆ. ಗ್ರಾಹಕರು ಮಾಡುವ ಸಣ್ಣ ತಪ್ಪು ಪೂರ್ತಿ ಖಾತೆ ಖಾಲಿಯಾಗುವಂತೆ ಮಾಡಿಬಿಡಬಹುದು. ಈ ಅಪಾಯವನ್ನು ಗಮನದಲ್ಲಿಟ್ಟುಕೊಂಡು ಎಸ್‌ಬಿಐ (SBI) ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ.
ಆನ್‌ಲೈನ್ ವಂಚನೆಯಿಂದ ತಪ್ಪಿಸಿಕೊಳ್ಳುವುದು ಹೇಗೆ ?
ಆನ್‌ಲೈನ್ ವಂಚನೆಯಿಂದ ತನ್ನ ಗ್ರಾಹಕರನ್ನು ರಕ್ಷಿಸುವ ಸಲುವಾಗಿ ಕೆಲವು ಮಾರ್ಗಗಳನ್ನು ಎಸ್ ಬಿಐ (SBI) ಸೂಚಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಎಸ್ ಬಿಐ , ಆನ್ ಲೈನ್ ಮೋಸದ ಬಗ್ಗೆ ಗ್ರಾಹಕರಿಗೆ ಎಚ್ಚರಿಕೆ (SBI Alert) ನೀಡಿದೆ. ಎಸ್ ಬಿಐ ಗ್ರಾಹಕರಿಗೆ ನೀಡಿದ ಮುನ್ನೆಚ್ಚರಿಕಾ ಕ್ರಮಗಳು ಹೀಗಿವೆ.
ಇದನ್ನೂ ಓದಿ : Retirement Saving : ಎಸ್‌ಬಿಐನ ಈ ಹೊಸ ಯೋಜನೆಯಲ್ಲಿ ಹೂಡಿಕೆ ಮಾಡಿ ಅಧಿಕ ಲಾಭ ಗಳಿಸಿ
1. ನಿಮ್ಮ ಮೊಬೈಲ್ ಫೋನ್ (Mobile) ಅನ್ನು ಅನ್ಲಾಕ್ ಮಾಡಿ ಬಿಟ್ಟು ಬಿಡಬೇಡಿ
2. ಆ್ಯಪ್ ನಲ್ಲಿ ಕೆಲಸ ಮುಗಿದಿದ್ದರೆ ಕೂಡಲೇ ಆ್ಯಪ್ ಲಾಕ್ ಮಾಡಿ
3. ನಿಮ್ಮ ಮೊಬೈಲ್ ಅನ್ನು ಅಸುರಕ್ಷಿತ ನೆಟ್‌ವರ್ಕ್‌ಗೆ (Network) ಸಂಪರ್ಕಿಸಬೇಡಿ, ಇದರಿಂದ ಡೇಟಾ (Data) ಸೋರಿಕೆಯಾಗುವ ಅಪಾಯವಿರುತ್ತದೆ.
4. ಪಾಸ್‌ವರ್ಡ್‌ಗಳು, ಬಳಕೆದಾರ ಹೆಸರು ಮುಂತಾದ ಸೂಕ್ಷ್ಮ ವಿಷಯಗಳನ್ನು ಎಂದಿಗೂ ಮೊಬೈಲ್‌ನಲ್ಲಿ ಸೇವ್ ಮಾಡಿಟ್ಟುಕೊಳ್ಳಬೇಡಿ
5. ವೈರಸ್‌ಗಳನ್ನು ಹೊಂದಿರಬಹುದು ಎಂಬ ಸಂದೇಹವಿದ್ದ ಡೇಟಾವನ್ನು ಎಂದಿಗೂ ವರ್ಗಾಯಿಸಬೇಡಿ
ಇನ್ನು ಎಟಿಎಂ (ATM) ವಂಚನೆಯಿಂದ ತಪ್ಪಿಸಿಕೊಳ್ಳುವ ಉಪಾಯವನ್ನು ಕೂಡಾ ಎಸ್ ಬಿಐ ತನ್ನ ಗ್ರಾಹಕರಿಗೆ ಸೂಚಿಸಿದೆ.
1. ಎಟಿಎಂ ಅಥವಾ ಪಿಓಎಸ್ ಯಂತ್ರದಲ್ಲಿ ಎಟಿಎಂ ಕಾರ್ಡ್ (ATM Card) ಬಳಸುವಾಗ, ಕೀಪ್ಯಾಡ್ ಅನ್ನು ನಿಮ್ಮ ಕೈಗಳಿಂದ ಮುಚ್ಚಿಕೊಳ್ಳಿ. ಇದರಿಂದ ನಿಮ್ಮ ಪಿನ್ ಅನ್ನು ಯಾರೂ ನೋಡಲು ಸಾಧ್ಯವಾಗುವುದಿಲ್ಲ
2. ನಂಬಿಕೆಯ ಮೇಲೆ ಯಾರಿಗೂ ನಿಮ್ಮ ಕಾರ್ಡ್ ವಿವರ ಮತ್ತು ಪಿನ್ ನಂಬರ್ ನೀಡಬೇಡಿ.
3. ನಿಮ್ಮ ಕಾರ್ಡ್ ಮೇಲೆ ಪಿನ್ ನಂಬರ್ ಬರೆಯುವ ತಪ್ಪನ್ನು ಯಾವತ್ತೂ ಮಾಡಬೇಡಿ. ಒಂದು ವೇಳೆ ನಿಮ್ಮ ಕಾರ್ಡ್ ಕಳ್ಳತನವಾದರೆ ಅಥವಾ ಕಳೆದುಹೋದರೆ, , ನಿಮ್ಮ ಖಾತೆಯಿಂದ ಹಣ ಕಳೆದುಕೊಳ್ಳುವ ಅಪಾಯವಿರುತ್ತದೆ.
4. ಯಾವುದೇ ಇಮೇಲ್, ಸಂದೇಶ (Message) ಅಥವಾ ಫೋನ್ ಕರೆಯಲ್ಲಿ ನಿಮ್ಮ ಕಾರ್ಡ್ ಮಾಹಿತಿ ಮತ್ತು ಪಿನ್ ನೀಡಬೇಡಿ.
5. ನಿಮ್ಮ ಜನ್ಮದಿನ, ಫೋನ್ ಸಂಖ್ಯೆ ಅಥವಾ ಖಾತೆ ಸಂಖ್ಯೆಯನ್ನು ಯಾವತ್ತಿಗೂ ನಿಮ್ಮ ಪಿನ್ ನಂಬರ್ ಆಗಿ ಇಡಬೇಡಿ. ಯಾಕೆಂದರೆ ಇದನ್ನು ಸುಲಭವಾಗಿ ಕಂಡುಹಿಡಿಯಬಹುದು. ನಿಮ್ಮ ಪಿನ್ ನಂಬರ್ ನಿಮಗೆ ಸುಲಭವಾಗಿ ನೆನಪಿಟ್ಟುಕೊಳ್ಳುವ ರೀತಿಯಲ್ಲಿರಬೇಕು. ಆದರೆ ಅದು ಬೇರೆಯವರಿಗೆ ಸುಲಭವಾಗಿ ಗೊತ್ತಾಗುವಂತಿರಬಾರದು.
6. ಎಟಿಎಂ ಅಥವಾ ಪಿಒಎಸ್ ಯಂತ್ರದ ವಹಿವಾಟಿನ ನಂತರ ಪಡೆದ ರಶೀದಿಯನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ ಅಥವಾ ಅದನ್ನು ಅಲ್ಲಿಯೇ ಸಂಪೂರ್ಣವಾಗಿ ಹರಿದು ಬಿಸಾಡಿ.
7. ನೀವು ಎಟಿಎಂ ಅಥವಾ ಪಿಒಎಸ್‌ನಿಂದ ವಹಿವಾಟು ನಡೆಸುವಾಗ ಸ್ಪೈ ಕ್ಯಾಮೆರಾ ಇದೆಯೇ ಎನ್ನುವುದನ್ನು ಪರಿಶೀಲಿಸಿ.
8. ಎಟಿಎಂ ಮತ್ತು ಪಿಒಎಸ್ ಬಳಸುವ ಮೊದಲು, ಅದರ ಕೀಪ್ಯಾಡ್ ಮತ್ತು ಕಾರ್ಡ್ ಸ್ಲಾಟ್ ಅನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ವಂಚಕರು ಅದರ ಮೇಲೆ ನಿಮ್ಮ ಮಾಹಿತಿ ಸಂಗ್ರವಾಗುವಂಥಹ ಸಾಧನವನ್ನು ಅಂಟಿಸಿರುವ ಸಾಧ್ಯತೆ ಇರುತ್ತದೆ.
9. ಯಾವತ್ತೂ ಎಸ್ಎಂಎಸ್ ಅಲರ್ಟ್ (Message Alert) ಅನ್ನು ಇಟ್ಟುಕೊಳ್ಳಿ. ಇದರಿಂದಾಗಿ ನಿಮ್ಮ ಖಾತೆಯಿಂದ ಹಣ ಕಡಿತಗೊಂಡಾಗಲೆಲ್ಲಾ ನಿಮಗೆ ಬ್ಯಾಂಕಿನಿಂದ ಸಂದೇಶ ಬರುತ್ತದೆ.
ಇದನ್ನೂ ಓದಿ : SBI Alert : ನಿಮಿಷದಲ್ಲಿ ಸಾಲ ಪಡೆಯುವ ಆಸೆಗೆ ಖಾತೆ ಖಾಲಿ ಮಾಡಿಕೊಳ್ಳದಿರಿ.. ಎಚ್ಚರ..!
ಎಸ್‌ಬಿಐ ಸಂಪರ್ಕ ಸಂಖ್ಯೆಯನ್ನು ಗೂಗಲ್ ನಲ್ಲಿ ಹುಡುಕಬೇಡಿ :
ನಮ್ಮ ಬ್ಯಾಂಕ್ (Bank) ಅಥವಾ ನಮ್ಮ ಯಾವುದೇ ಪ್ರತಿನಿಧಿಗಳು ಇಮೇಲ್ / ಎಸ್‌ಎಂಎಸ್ ಅಥವಾ ಕರೆ ಮಾಡಿ ವೈಯಕ್ತಿಕ ಮಾಹಿತಿ, ಪಾಸ್‌ವರ್ಡ್ ಅಥವಾ ಗ್ರಾಹಕರ ಒಟಿಪಿಯನ್ನು (OTP) ಕೇಳುವುದಿಲ್ಲ ಎಂದು, ಎಸ್‌ಬಿಐ ತನ್ನ ಗ್ರಾಹಕರಿಗೆ ಪದೇ ಪದೇ ಹೇಳುತ್ತಿದೆ. ಅಲ್ಲದೆ, ಶಾಖೆಯ ಸಂಪರ್ಕ ಮಾಹಿತಿಗಾಗಿ ಗೂಗಲ್ ಸರ್ಚ್ ನಲ್ಲಿ (Google Search) ಹುಡುಕುವ ಬದಲು, ಎಸ್‌ಬಿಐನ ಅಧಿಕೃತ ವೆಬ್‌ಸೈಟ್ ಅನ್ನು ಮಾತ್ರ ಬಳಸಿ ಎಂದು ಹೇಳಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.