ಮೊದಲ ಬಾರಿಗೆ ಮನುಷ್ಯನನ್ನೂ ತಲುಪಿದ Bird Flu H5N8 ವೈರಸ್

ರಷ್ಯಾದ ಆರೋಗ್ಯ ಇಲಾಖೆ ಮೊದಲು ಪಕ್ಷಿಗಳಿಗೆ ಫ್ಲೂ ವೈರಸ್ ಹರಡುವುದನ್ನು ದೃಢಪಡಿಸಿತು ಮತ್ತು ಕೋಳಿ ಸಾಕಾಣಿಕೆ ಕೇಂದ್ರದ ಏಳು ಉದ್ಯೋಗಿಗಳಲ್ಲಿ ಎಚ್ 5 ಎನ್ 8 (H5N8) ಏವಿಯನ್ ಜ್ವರ ಕಂಡುಬಂದಿದೆ ಎಂದು ವರದಿ ಮಾಡಿದೆ. ರೋಸ್ಪೊಟ್ರೆಬ್ನಾಜೋರ್‌ನ ವೆಕ್ಟರ್ ಸಂಶೋಧನಾ ಕೇಂದ್ರವು ಮಾನವರಲ್ಲಿ ಈ ವೈರಸ್‌ನ್ನು ಕಂಡುಹಿಡಿದಿದೆ.

Written by - Yashaswini V | Last Updated : Feb 21, 2021, 12:55 PM IST
  • ಕೋಳಿ ಫಾರ್ಮ್ ಕೇಂದ್ರದ ಏಳು ಉದ್ಯೋಗಿಗಳಲ್ಲಿ ಎಚ್ 5 ಎನ್ 8 ಕಂಡುಬಂದಿದೆ
  • ಎಲ್ಲಾ ಸೋಂಕಿತ 7 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ
  • ಮನುಷ್ಯನಿಂದ ಮನುಷ್ಯನಿಗೆ ಸೋಂಕಿನ ಲಕ್ಷಣಗಳಿಲ್ಲ
ಮೊದಲ ಬಾರಿಗೆ ಮನುಷ್ಯನನ್ನೂ ತಲುಪಿದ Bird Flu H5N8 ವೈರಸ್ title=
Representational Image

ಮಾಸ್ಕೋ: ಕೊರೊನಾವೈರಸ್ ಸಾಂಕ್ರಾಮಿಕ ರೋಗಗಳಲ್ಲಿ ಮೊದಲ ಬಾರಿಗೆ ಮಾನವರಲ್ಲಿ ಬರ್ಡ್ ಫ್ಲೂ ವೈರಸ್ ಹೊರಹೊಮ್ಮಿದೆ. ಹಕ್ಕಿಗಳ ಜ್ವರ ವೈರಸ್ ಮಾನವರಿಗೆ ಹರಡುವುದನ್ನು ರಷ್ಯಾದ ಆರೋಗ್ಯ ಇಲಾಖೆ ಮೊದಲು ದೃಢಪಡಿಸಿತು ಮತ್ತು ಕೋಳಿ ಸಾಕಾಣಿಕೆ ಕೇಂದ್ರದ ಏಳು ಉದ್ಯೋಗಿಗಳಲ್ಲಿ ಎಚ್ 5 ಎನ್ 8  (H5N8) ಏವಿಯನ್ ಜ್ವರ ಕಂಡುಬಂದಿದೆ ಎಂದು ವರದಿ ಮಾಡಿದೆ. 

ರೋಸ್ಪೊಟ್ರೆಬ್ನಾಜೋರ್‌ನ ವೆಕ್ಟರ್ ಸಂಶೋಧನಾ ಕೇಂದ್ರವು ಮಾನವರಲ್ಲಿ ಈ ವೈರಸ್‌ನ್ನು ಕಂಡುಹಿಡಿದಿದೆ ಎಂಬ ಮಾಹಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆಗೆ (ಡಬ್ಲ್ಯುಎಚ್‌ಒ) ನೀಡಲಾಗಿದೆ.

ಎಲ್ಲಾ ಸೋಂಕಿತ 7 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ :
ಕೋಳಿ ಫಾರ್ಮ್ ನಲ್ಲಿ ಕೆಲಸ ಮಾಡುವ ಏಳು ಜನರಿಗೆ ಏವಿಯನ್ ಇನ್ಫ್ಲುಯೆನ್ಸ ಎ ವೈರಸ್ ಸೋಂಕು ತಗುಲಿರುವುದು ಕಂಡುಬಂದಿದೆ ಎಂದು ಸಾರ್ವಜನಿಕ ಆರೋಗ್ಯ ವಾಚ್‌ಡಾಗ್ ರೋಸ್ಪೊಟ್ರೆಬ್ನಾಡ್ಜೋರ್‌ನ ಮುಖ್ಯಸ್ಥ ಅನ್ನಾ ಪೊಪೊವಾ (Anna Popova)  ಹೇಳಿದ್ದಾರೆ. ಕೋಳಿ ಸಾಕಾಣಿಕೆ ಕೇಂದ್ರದ ಏಳು ಉದ್ಯೋಗಿಗಳು ಸೋಂಕಿಗೆ ಒಳಗಾದ ನಂತರ ಪ್ರತ್ಯೇಕಿಸಲ್ಪಟ್ಟಿದ್ದಾರೆ. ಇದರೊಂದಿಗೆ, ಸೋಂಕಿತರೊಂದಿಗೆ ಸಂಪರ್ಕಕ್ಕೆ ಬರುವ ಜನರನ್ನು ಗುರುತಿಸಲಾಗುತ್ತಿದೆ.

ಇದನ್ನೂ ಓದಿ - Bird Flu : ಕೆಂಪು ಕೋಟೆಯಲ್ಲಿ ಪಕ್ಷಿ ಜ್ವರದಿಂದಾಗಿ ಕಾಗೆಗಳ ಮಾರಣಹೋಮ

ಮನುಷ್ಯನಿಂದ ಮನುಷ್ಯನಿಗೆ ಸೋಂಕಿನ ಲಕ್ಷಣಗಳಿಲ್ಲ:
ಸೋಂಕಿತರೆಲ್ಲರೂ ಆರೋಗ್ಯವಾಗಿದ್ದಾರೆ ಮತ್ತು ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅನ್ನಾ ಪೊಪೊವಾ ಹೇಳಿದ್ದಾರೆ. ಇಲ್ಲಿಯವರೆಗೆ, ಪಕ್ಷಿ ಜ್ವರ ವೈರಸ್ (Bird Flu) ರೋಗಲಕ್ಷಣಗಳು ಮಾನವನಿಂದ ಮನುಷ್ಯನಿಗೆ ಹರಡುವ ಬಗ್ಗೆ ಯಾವುದೇ ಪ್ರಕರಣ ಬಹಿರಂಗಗೊಂಡಿಲ್ಲ. ಸೋಂಕಿಗೆ ಒಳಗಾದವರು ಕೋಳಿ ಫಾರ್ಮ್ ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ.

ಭಾರತದಲ್ಲಿ ಪಕ್ಷಿ ಜ್ವರ ಪ್ರಕರಣಗಳ ದೃಢೀಕರಣ :
ಭಾರತದ ಅನೇಕ ರಾಜ್ಯಗಳಲ್ಲಿ ಇತ್ತೀಚೆಗೆ ಕಾಗೆ ಮತ್ತು ಇತರ ಪಕ್ಷಿಗಳು ಶವವಾಗಿ ಪತ್ತೆಯಾಗಿವೆ. ನಂತರ ಪಕ್ಷಿ ಜ್ವರವನ್ನು ದೃಢಪಡಿಸಲಾಯಿತು. ಇದರ ನಂತರ ಕೆಲವು ರಾಜ್ಯಗಳ ಕೋಳಿ ಸಾಕಾಣಿಕೆ ಕೇಂದ್ರದಲ್ಲಿ ಕೋಳಿಗಳನ್ನು ಕೊಲ್ಲಲು ಮತ್ತು ಕೋಳಿ ಮಾರುಕಟ್ಟೆಗಳನ್ನು ಮುಚ್ಚಲು ಆದೇಶ ನೀಡಲಾಯಿತು. ಕೇರಳ, ಹರಿಯಾಣ, ಮಧ್ಯಪ್ರದೇಶ, ಮಹಾರಾಷ್ಟ್ರ, ಛತ್ತೀಸ್‌ಗಢ, ಗುಜರಾತ್, ಉತ್ತರ ಪ್ರದೇಶ, ಉತ್ತರಾಖಂಡ್, ಪಂಜಾಬ್, ಹಿಮಾಚಲ ಪ್ರದೇಶ, ಬಿಹಾರ, ರಾಜಸ್ಥಾನ, ದೆಹಲಿ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಪಕ್ಷಿ ಜ್ವರವನ್ನು ದೃಢಪಡಿಸಲಾಗಿದೆ. 

ಇದನ್ನೂ ಓದಿ - Bird Flu Guidelines: ಪಕ್ಷಿ ಜ್ವರ ಕುರಿತು ಕೇಂದ್ರ ಸರ್ಕಾರದ ಎಚ್ಚರಿಕೆ

ಎಷ್ಟು ದೊಡ್ಡ ಅಪಾಯವಾಗಬಹುದು?
ಡಬ್ಲ್ಯುಎಚ್‌ಒ (WHO) ಪ್ರಕಾರ,  A(H5) ವೈರಸ್‌ನೊಂದಿಗೆ ಮಾನವನ ಸೋಂಕು ವಿರಳ ಮತ್ತು ಅನಾರೋಗ್ಯ ಅಥವಾ ಸತ್ತ ಸೋಂಕಿತ ಪಕ್ಷಿಗಳ ಸಂಪರ್ಕದಲ್ಲಿರುವ ಜನರಲ್ಲಿ ಕಂಡುಬರುತ್ತದೆ. ಇದು ಮಾನವರಲ್ಲಿ ಗಂಭೀರ ಕಾಯಿಲೆ ಅಥವಾ ಸಾವಿಗೆ ಕಾರಣವಾಗಬಹುದು. 2014 ಮತ್ತು ನವೆಂಬರ್ 2016 ರ ನಡುವೆ, ಏವಿಯನ್ ಫ್ಲೂ ಎಚ್ 5 ಎನ್ 6 ನ 16 ಪ್ರಕರಣಗಳು ವರದಿಯಾಗಿವೆ, ಅದರಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ. ಅಣ್ಣಾ ಪೊಪೊವಾ, "ಈ ರೂಪಾಂತರದ ಆವಿಷ್ಕಾರವು ವೈರಸ್ ಇನ್ನೂ ಮಾನವನಿಂದ ಮನುಷ್ಯನಿಗೆ ಸೋಂಕಿಗೆ ಸಮರ್ಥವಾಗಿಲ್ಲದಿರುವ ಸಮಯದಲ್ಲಿ ಮಹತ್ವದ್ದಾಗಿದೆ, ಇದು ನಮಗೆ ಮತ್ತು ಇಡೀ ವಿಶ್ವಕ್ಕೆ ಸಂಭಾವ್ಯ ರೂಪಾಂತರಗಳ ವಿರುದ್ಧ ತಯಾರಿ ನಡೆಸಲು ಸಮಯವನ್ನು ನೀಡಿದೆ" ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News