ಮುಂಬೈ: IPL 2021 - ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಈ ಬಾರಿಯ IPL ಆಯೋಜನೆಗಾಗಿ ನಾಲ್ಕರಿಂದ ಐದು ಸ್ಥಾನಗಳ ಕುರಿತು ಯೋಚನೆ ನಡೆಸುತ್ತಿದೆ. ಏಕೆಂದರೆ, ಮುಂಬೈ ಹಾಗೂ ಅಕ್ಕಪಕ್ಕದ ಪ್ರದೇಶಗಳಲ್ಲಿ ಕೊವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ, ಅದನ್ನು ಏಕಮಾತ್ರ ಆಯೋಜನೆಯ ನಗರವನ್ನಾಗಿ ಆಯ್ಕೆಮಾಡುವುದು ಸಾಧ್ಯವಿಲ್ಲ ಎಂಬ ಮಾತುಗಳು ಇದೀಗ ಕೇಳಿಬರಲಾರಂಭಿಸಿವೆ.
ಮುಂಬೈನ ವಾಂಖೇಡ್, ಬ್ರೆಬೊರ್ನ್, ಡಿ.ವೈ. ಪಾಟೀಲ್ ಮತ್ತು ರಿಲಯನ್ಸ್ ಕ್ರೀಡಾಂಗಣದಲ್ಲಿ ಜೈವಿಕ ಸುರಕ್ಷತೆಯ ವಾತಾವರಣ ಸೃಷ್ಟಿಸುವ ಮೂಲಕ ಎಂದು ವಾರಗಳ ಕಾಲ ಪಂದ್ಯಾವಳಿಯನ್ನು ಆಯೋಜಿಸುವುದು ಸರಿ ಎಂದು ಈ ಹಿಂದೆ ಚರ್ಚೆ ನಡೆಸಲಾಗಿತ್ತು. ಆದರೆ, ಪ್ರಸ್ತುತ ಮಹಾರಾಷ್ಟ್ರದಲ್ಲಿ ಕೊವಿಡ್-19 ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚಾಗುತ್ತಿರುವ ಹಿನ್ನೆಲೆ ಪರಿಸ್ಥಿತಿ ಗಂಭೀರವಾಗಿದೆ.
ತಮ್ಮ ಮಾಹಿತಿಯನ್ನು ಗೌಪ್ಯವಾಗಿ ಇಡುವ ಶರತ್ತಿನ ಮೇರೆಗೆ PTI ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿರುವ BCCI ಅಧಿಕಾರಿಯೊಬ್ಬರು, "IPL ಆರಂಭವಾಗಲು ಇನ್ನೂ ಒಂದು ತಿಂಗಳ ಕಾಲಾವಕಾಶ ಉಲ್ಲಿದಿದೆ. ಆದರೆ, ನಿಶ್ಚಿತವಾಗಿ ಕೆಲ ನಿರ್ಣಯಗಳನ್ನು ಇನ್ನೂ ಕೈಗೊಳ್ಳಬೇಕಿದೆ. IPL ಆಯೋಜನೆಗೆ ಮುಂಬೈ ನಗರವನ್ನು ಏಕಮಾತ್ರ ನಗರವನ್ನಾಗಿ ಆಯ್ಕೆ ಮಾಡುವುದು ರಿಸ್ಕಿ ಆಗಿದೆ. ಏಕೆಂದರೆ ಅಲ್ಲಿ ಇದೀಗ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ" ಎಂದಿದ್ದಾರೆ.
ಇದನ್ನೂ ಓದಿ- Robin Uthappa: 'ನಿವೃತ್ತಿಯಾಗುವ ಮುನ್ನ ಧೋನಿ ನಾಯಕತ್ವದಲ್ಲಿ IPL ಗೆಲ್ಲಬೇಕು'
ಹೀಗಾಗಿ, "ಹೈದರಾಬಾದ್, ಬೆಂಗಳೂರು ಹಾಗೂ ಕೊಲ್ಕತಾಗಳಂತಹ ನಗರಗಳೂ ಕೂಡ ಪಂದ್ಯಗಳ ಆಯೋಜನೆಗಾಗಿ ಸಿದ್ಧವಿರಲಿವೆ. ಈ ಬಾರಿಯ ಪ್ಲೇ ಆಫ್ ಹಾಗೂ ಫೈನಲ್ ಪಂದ್ಯಗಳ ಆಯೋಜನೆಗೆ ಅಹ್ಮದಾಬಾದ್ ಆಯ್ಕೆಯಾಗುವ ಸಾಧ್ಯತೆ ಇದೆ" ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ- IPL Auction 2021: ಕೊನೆ ಕ್ಷಣದಲ್ಲಿ Harbhajan Singh ಕೈಹಿಡಿದು ಉಳಿಸಿದೆ ಈ ತಂಡ
ಮೂಲಗಳಿಂದ ದೊರೆತ ಮಾಹಿತಿ ಪ್ರಕಾರ, IPL 14ನೇ ಆವೃತ್ತಿ ಏಪ್ರಿಲ್ ನ ಎರಡನೇ ವಾರದಿಂದ ಆರಂಭವಾಗಲಿದೆ. ಮಹಾಮಾರಿಯ ಪ್ರಕೋಪದ ಹಿನ್ನೆಲೆ ಪಂದ್ಯಾವಳಿಯನ್ನು UAE ಆಯೋಜಿಸಲಾಗಿತ್ತು.
ಇದನ್ನೂ ಓದಿ-IPL 2021: ಮತ್ತೆ ಐಪಿಎಲ್ ಟೈಟಲ್ ಸ್ಪಾನ್ಸರ್ ಆಗಿ ಮರಳಿದ VIVO
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.