ನಟ ಸಲ್ಮಾನ್ ಖಾನ್ ಮನೆಗೆ ನುಗ್ಗಿ 'ಖಾನ್ ನನ್ನ ಗಂಡ' ಎಂದು ಗಲಾಟೆ ಮಾಡಿದ ಹುಡುಗಿ

ಕೆಲವು ದಿನಗಳ ಹಿಂದೆ ಮಧ್ಯಾಹ್ನ 12.30 ರ ವೇಳೆಗೆ, ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಮನೆಗೆ ಕಬ್ಬಿಣ ತುಂಡುಗಳೊಂದಿಗೆ ಒಂದು ಹುಡುಗಿ ಪ್ರವೇಶಿಸಿದಳು.  

Last Updated : Mar 15, 2018, 04:36 PM IST
ನಟ ಸಲ್ಮಾನ್ ಖಾನ್ ಮನೆಗೆ ನುಗ್ಗಿ 'ಖಾನ್ ನನ್ನ ಗಂಡ' ಎಂದು ಗಲಾಟೆ ಮಾಡಿದ ಹುಡುಗಿ title=
Pic: @@ppritam009/Twitter

ನವದೆಹಲಿ: ಭಾರತದಲ್ಲಿ, ಸಿನಿಮಾ ತಾರೆಯರ ಹಿಂದೆ ಊಹಿಸಲಾಗದಂತಹ ಹುಚ್ಚು ಅಭಿಮಾನಿಗಳ ಅನೇಕ ಕಥೆಗಳು ಪ್ರತಿದಿನ ನಡೆಯುತ್ತಲೇ ಇರುತ್ತವೆ. ಅದರಲ್ಲೂ ಸಲ್ಮಾನ್ ಖಾನ್ ಗೆ ಇರುವ ಅಭಿಮಾನಿಗಳ ವಿಶೇಷವಾಗಿ ಯುವತಿಯರ ಸಂಖ್ಯೆಗೇನೂ ಕಡಿಮೆ ಇಲ್ಲ. ಅಂತಹ ಅಭಿಮಾನಿಗಳಲ್ಲಿ ಒಬ್ಬರು ಮಾಡಿರುವ ಕೆಲಸ ಕೇಳಿದರೆ ನಿಮಗೆ ಶಾಕ್ ಆಗದೆ ಇರದು. ಸಲ್ಮಾನ್ ಅವರ ಹುಟ್ಟುಹಬ್ಬ ಅಥವಾ ಘಟನೆಯೇ, ಅವರ ಮನೆಯ ಹೊರಗೆ ಹೆಚ್ಚಾಗಿ ಅಭಿಮಾನಿಗಳ ಗುಂಪೊಂದು ಇರುತ್ತದೆ. ಆದರೆ ಕೆಲವು ದಿನಗಳ ಹಿಂದೆ ಎಲ್ಲರಿಗೂ ಶಾಕ್ ನೀಡುವ ಒಂದು ಘಟನೆ ಸಂಭವಿಸಿದೆ.

ಮಾಹಿತಿಯ ಪ್ರಕಾರ,  ಕೆಲವು ದಿನಗಳ ಹಿಂದೆ ಮಧ್ಯಾಹ್ನ 12.30 ರ ವೇಳೆಗೆ, ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಮನೆಗೆ ಕಬ್ಬಿಣ ತುಂಡುಗಳೊಂದಿಗೆ ಒಂದು ಹುಡುಗಿ ಪ್ರವೇಶಿಸಿದಳು. ಭದ್ರತಾ ಕಾವಲುಗಾರರಲ್ಲಿ ಒಬ್ಬರು ಸ್ವಲ್ಪಕಾಲ ವಿರಾಮಕ್ಕಾಗಿ ತೆರಳುತ್ತಾರೆ. ಇನ್ನೊಬ್ಬ ಸಿಬ್ಬಂದಿ ಗೇಟ್ ಬಳಿ ಬಳಿ ಬರುವ ಮೊದಲೇ ಬಂದ ಹುಡುಗಿ ಸಲ್ಮಾನ್ ಖಾನ್  ಮನೆ ಒಳಗೆ ಓಡಿ ಹೋಗುತ್ತಾಳೆ. ಅವರು ಬಾಗಿಲನ್ನು ತಟ್ಟಿದಾಗ ಮನೆ ಅಡಿಗೆಯವರು ಬಂದು ಬಾಗಿಲು ತೆಗೆಯುತ್ತಾರೆ. 

ಅದರ ನಂತರ ಆ ಹುಡುಗಿ "ಸಲ್ಮಾನ್ ಖಾನ್ ನನ್ನ ಪತಿ" ಎಂದು ಕೂಗಿದರು. ನಂತರ ಹುಡುಗಿ ಆತ್ಮಹತ್ಯೆಗೆ ಬೆದರಿಕೆ ಹಾಕಲಾರಂಭಿಸಿದಳು. ಸ್ಪಾಟ್ಬಾಯ್ನ ಸುದ್ದಿ ಪ್ರಕಾರ, ಅಗ್ನಿಶಾಮಕ ದಳದವರನ್ನು ಕರೆಯಲಾಯಿತು, ಅವರು ತಕ್ಷಣ ಕ್ರಮ ಕೈಗೊಂಡರು ಮತ್ತು ಅಲ್ಲಿಂದ ಆ ಹುಡುಗಿಯನ್ನು ಕರೆದೊಯ್ದರು ಎನ್ನಲಾಗಿದೆ. 

ಸಲ್ಮಾನ್ ಖಾನ್ ಅವರು 'ರೇಸ್ 3' ಚಿತ್ರಕ್ಕಾಗಿ ನಿರತರಾಗಿದ್ದಾರೆ ಮತ್ತು ಶೀಘ್ರದಲ್ಲೇ ಅವರ ಹೊಸ ಟೀಸರ್ ಪ್ರೊಮೊ ಬಿಡುಗಡೆ ಮಾಡಿದ್ದಾರೆ. 

Trending News