ದೆಹಲಿ : ಜೀವನವನ್ನು ಆರ್ಥಿಕವಾಗಿ ಸುಭದ್ರವಾಗಿಸುವ ಉದ್ದೇಶದಿಂದ ಎಲ್ಐಸಿ (LIC) ಅನೇಕ ಹೊಸ ಹೊಸ ಯೋಜನೆಯನ್ನು ತರುತ್ತಿದೆ. ಕುಟುಂಬಕ್ಕೆ ಆಧಾರವಾಗಿರುವ ವ್ಯಕ್ತಿ ಸಾವನ್ನಪ್ಪಿದಾಗ ಕುಟುಂಬ ಸದಸ್ಯರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವ ಯೋಜನೆಯನ್ನು ಇದೀಗ ಎಲ್ಐಸಿ ಪರಿಚಯಿಸಿದೆ. ನೀವು ಕೂಡಾ ನಿಮ್ಮ ಪ್ರೀತಿಪಾತ್ರರಿಗೆ ಪಾಲಿಸಿಯನ್ನು (Policy) ಖರೀದಿಸುವ ಯೋಚನೆಯಲ್ಲಿದ್ದರೆ ಇದಕ್ಕಿಂತ ಉತ್ತಮವಾದ ಯೋಜನೆ ಬೇರೆ ಸಿಗುವುದಿಲ್ಲ.
LIC saving plus ಯೋಜನೆಯಲ್ಲಿ ಏನಿದೆ ?
ಎಲ್‌ಐಸಿಯ (LIC) ಹೊಸ ಯೋಜನೆ saving plus ನಲ್ಲಿ ಉಳಿತಾಯ ಮಾಡುವುದರ ಜೊತೆಗೆ, ಸಂಪೂರ್ಣ ಸುರಕ್ಷತೆಗು ಆದ್ಯತೆ ನೀಡಲಾಗಿದೆ. ಪಾಲಿಸಿಯ ಮುಕ್ತಾಯಕ್ಕೆ ಮುನ್ನ ಪಾಲಿಸಿದಾರ ಸಾವನ್ನಪ್ಪಿದರೆ, ಆತನ ಕುಟುಂಬಕ್ಕೆ ಆರ್ಥಿಕ ಸಹಾಯ ಸಿಗುತ್ತದೆ. ಈ ಪಾಲಿಸಿಯ ಏಕ ಪ್ರೀಮಿಯಂ ಮತ್ತು ಸೀಮಿತ ಪ್ರೀಮಿಯಂ ಪಾವತಿ ಮೋಡ್‌ಗಾಗಿ 'Sum assured on death ' ಅನ್ನು ಆಯ್ಕೆ ಮಾಡುವ ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ : 'LIC IPO ನಿಂದ ಯಾರ ನೌಕರಿಯೂ ಹೋಗಲ್ಲ, ಹೂಡಿಕೆದಾರರಿಗೆ ಭಾರಿ ಲಾಭ'
1 ಲಕ್ಷ ರೂ ಮಿನಿಮಮ್ ಸಮ್ ಅಶೂರ್ಡ್ :
ಪಾಲಿಸಿದಾರರ ಆಕಸ್ಮಿಕ ಸಾವು ಸಂಭವಿಸಿದರೆ ಸಂತ್ರಸ್ತ ಕುಟುಂಬಕ್ಕೆ ಕಂಪನಿ ಕನಿಷ್ಠ 1 ಲಕ್ಷ ರೂ.ಯ ಕವರ್ ನೀಡುತ್ತದೆ. ಒಂದು ವೇಳೆ ಪಾಲಿಸಿದಾರ (policy holder) ಇದಕ್ಕಿಂತ ಜಾಸ್ತಿ ಮೊತ್ತವನ್ನು 'ಸಮ್ ಅಶೂರ್ಡ್ ಆನ್ ಡೆತ್ ನಲ್ಲಿ ಆಯ್ಕೆ ಮಾಡಿಕೊಂಡಿದ್ದರೆ ಅದೇ ಮೊತ್ತವನ್ನು ಕುಟುಂಬಕ್ಕೆ ನೀಡಲಾಗುವುದು. ಇದಲ್ಲದೆ, ಪಾಲಿಸಿಯು ಮೆಚ್ಯುರ್ ಆದಾಗ ನಿಯಮದ ಪ್ರಕಾರ, ಒಟ್ಟು ಮೊತ್ತವನ್ನು ಸಹ ನೀಡಲಾಗುತ್ತದೆ. ಹಾಗಾಗಿ ಈ ಪಾಲಿಸಿಯನ್ನು (Policy) ಖರೀದಿಸಿದರೆ ಅನುಕೂಲ ಹೆಚ್ಚಿರುತ್ತದೆ.
ಪಾಲಿಸಿಯನ್ನು ಪಡೆಯುವುದು ಹೇಗೆ ?
ಎಲ್‌ಐಸಿಯ ಹೊಸ ಪಾಲಿಸಿಯನ್ನು ಎಲ್‌ಐಸಿ ಏಜೆಂಟ್ ಮೂಲಕ ಅಥವಾ ಎಲ್‌ಐಸಿ ವೆಬ್‌ಸೈಟ್ www.licindia.in ಮೂಲಕವೂ ಖರೀದಿಸಬಹುದು. ಇದು Non linked individual saving plan ಪ್ಲಾನ್ ಆಗಿದೆ. ಎಲ್ಐಸಿ ಪ್ರಕಾರ, ಈ ಪಾಲಿಸಿಯನ್ನು 5 ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು. ಗ್ರಾಹಕರಿಂದಲೂ (Customers) ಈ ಪಾಲಿಸಿಗೆ ಬಹಳಷ್ಟು ಮೆಚ್ಚುಗೆ ವ್ಯಕ್ತವಾಗಿದೆ ಎನ್ನಲಾಗಿದೆ. ಈ ಹೊಸ ಯೋಜನೆಯನ್ನು ಮಾರ್ಚ್ 15 ರಿಂದ ಪ್ರಾರಂಭಿಸಲಾಗಿದೆ. ಈ ಪಾಲಿಸಿ ಆರಂಭವಾದ ಕೆಲವೇ ದಿನಗಳಲ್ಲಿ ಸಾಕಷ್ಟು ಗ್ರಾಹಕರು ಇದನ್ನು ಪಡೆದುಕೊಂಡಿದ್ದಾರೆ.
ಇದನ್ನೂ ಓದಿ : High Tech LIC : ಇನ್ನು ಯಾವುದೇ ಶಾಖೆಯಲ್ಲೂ ಮಾಡಬಹುದು Claim Settlement
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.