ನವದೆಹಲಿ : ಹೋಳಿ ಹಬ್ಬಕ್ಕೆ (Holi) ಹಿಂದೂ ಧರ್ಮದಲ್ಲಿ ವಿಶೇಷ ಪ್ರಾಮುಖ್ಯತೆ ಇದೆ. ಹೋಳಿ ಅಂದರೆ ಎರಡು ದಿನಗಳ ಹಬ್ಬ. ಮೊದಲನೆಯ ದಿನ ಹೋಲಿಕಾ ದಹನ (Holika dahana) ಮಾಡಲಾಗುತ್ತದೆ. ಎರಡನೆಯ ದಿನ ಬಣ್ಣದ ಓಕುಳಿಯಾಟ . ಈ ವರ್ಷಮಾರ್ಚ್ 28ಕ್ಕೆ ಹೋಲಿಕಾ ಮತ್ತು ಮಾರ್ಚ್ 29 ರಂದು ಹೋಳಿ ಆಚರಿಸಲಾಗುವುದು.
ಧಾರ್ಮಿಕ ಕಥೆಗಳ ಪ್ರಕಾರ, ಹಿರಣ್ಯಕಶ್ಯಪ್ ಸಹೋದರಿ ಹೋಲಿಕಾ (Holika) ಬೆಂಕಿಯಲ್ಲಿ ಸುಟ್ಟು ಹೋಗದಿರುವ ವರವನ್ನು ಪಡೆದಿರುತ್ತಾರೆ. ಪ್ರಹ್ಲಾದನನ್ನು ಕೊಲ್ಲುವ ಸಲುವಾಗಿ ತನ್ನ ಸಹೋದರನ ಆಜ್ಞೆಯಂತೆ ಹೋಲಿಕಾ ಪ್ರಹ್ಲಾದನ (Prahalad) ಜೊತೆ ಬೆಂಕಿಯಲ್ಲಿ ಕುಳಿತುಕೊಳ್ಳುತ್ತಾಳೆ. , ಆದರೆ ಭಗವಾನ್ ವಿಷ್ಣು (Lord Vishnu) ಕೃಪೆಯಿಂದ ಪ್ರಹ್ಲಾದನ ಜೀವ ಉಳಿಯುತ್ತದೆ. ಬೆಂಕಿ ಹೊಲಿಕಾನನ್ನು ಸುಟ್ಟು ಹಾಕುತ್ತದೆ. ಈ ಕಾರಣಕ್ಕಾಗಿ, ಹೋಳಿ ಹಬ್ಬ ಎಂದರೆ ಕೆಟ್ಟದ್ದರ ಮೇಲೆ ಒಳ್ಳೆತನದ ಗೆಲುವು ಎಂಬುದರ ಸಂಕೇತ ಎನ್ನಲಾಗಿದೆ.
ಇದನ್ನೂ ಓದಿ : Holi 2021: ರಾಶಿಗನುಗುಣವಾಗಿ ಯಾವ ರಾಶಿಯವರಿಗೆ ಯಾವ ಬಣ್ಣ ಶುಭ ತಿಳಿಯಿರಿ
ಜ್ಯೋತಿಷ್ಯದ (Astrology) ಪ್ರಕಾರ, ಹೋಲಿಕಾ ದಹನ ಯಾವ ರೀತಿ ಮಾಡ್ಬೇಕು ಎನ್ನುವುದಕ್ಕೂ ನಿಯಮಗಳಿವೆ. ಹೋಲಿಕಾ ದಹನದ ವೇಳೆ ಕೆಲ ತಪ್ಪುಗಳನ್ನು ಯಾವತ್ತು ಮಾಡಬಾರದು. ಆ ಕೆಲಸಗಳನ್ನು ಮಾಡಿದರೆ ಜೀ ವನಪೂರ್ತಿ ಹಣದ ಸಮಸ್ಯೆ ಎದುರಾಗುತ್ತದೆಯಂತೆ. ಆ ಕೆಲಸಗಳು ಯಾವುವು ನೋಡೋಣ ..
- ಹೋಲಿಕಾ ದಹನದ ದಿನದಂದು ಯಾರೂ ಯಾರಿಂದಲೂ ಹಣವನ್ನು ಸಾಲ ಪಡೆಯಬಾರದು. ಒಂದು ವೇಳೆ ಈ ದಿನ ಸಾಲ ಪಡೆದರೆ ವರ್ಷ ಪೂರ್ತಿ ಆರ್ಥಿಕ ಬಿಕ್ಕಟ್ಟನ್ನು (Financial crisis) ಎದುರಿಸಬೇಕಾಗಬಹುದು.
ಇದನ್ನೂ ಓದಿ : Holi Special: ನಿಮ್ಮ ಪ್ರೀತಿಪಾತ್ರರಿಗೆ ಬಣ್ಣ ಹಚ್ಚುವ ಮೊದಲು ಅದರ ಮಹತ್ವ ತಿಳಿಯಿರಿ
- ಈ ದಿನ ತಾಯಿಯನ್ನು (Mother) ಅವಮಾನಿಸಬಾರದು. ಹೀಗೆ ಮಾಡುವುದು ಕೂಡಾ ಜೀವನದಲ್ಲಿ ಬಡತನಕ್ಕೆ ಕಾರಣವಾಗಬಹುದು, ಈ ದಿನ ತಾಯಿಗೆ ಏನನ್ನಾದರೂ ಉಡುಗೊರೆಯಾಗಿ (Gift) ನೀಡಬೇಕು. ಹಾಗೆ ಮಾಡುವುದರಿಂದ ಭಗವಾನ್ ಶ್ರೀ ಕೃಷ್ಣನಿಗೆ ವಿಶೇಷ ಆಶೀರ್ವಾದ ಸಿಗುತ್ತದೆ.
ಹೋಲಿಕಾ ದಹನ ದಿನದಂದು ಒಬ್ಬ ವ್ಯಕ್ತಿಯು ತನ್ನ ಕುಟುಂಬದೊಂದಿಗೆ ಗೋಧಿ ಮತ್ತು ಬೆಲ್ಲದಿಂದ (jaggery) ಮಾಡಿದ ರೊಟ್ಟಿ ತಿನ್ನಬೇಕು. ಹೀಗೆ ಮಾಡುವುದರಿಂದ, ಪ್ರಗತಿ ಸಿಗುತ್ತದೆಯಂತೆ .
ಇದನ್ನೂ ಓದಿ : Tips To Remove Holi Colour: ಬಟ್ಟೆಯಿಂದ ಹೋಳಿ ಬಣ್ಣ ತೆಗೆಯಲು ಇಲ್ಲಿದೆ ಟಿಪ್ಸ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.