ನವದೆಹಲಿ: ರಾಹುಲ್ ಗಾಂಧಿಯ ನಾಲ್ಕನೇ ಹಂತದ ಜನಾಶೀರ್ವಾದ ಯಾತ್ರೆಯ ವೇಳಾ ಪಟ್ಟಿ ಪ್ರಕಟಗೊಂಡಿದ್ದು, ಮಾರ್ಚ್ 24, 25ರಂದು ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ರಾಹುಲ್ ಪ್ರವಾಸ ಕೈಗೊಳ್ಳಲಿದ್ದಾರೆ.
ಇಂದು(ಮಾರ್ಚ್ 23) ರಂದು ದೆಹಲಿಯಿಂದ ಮೈಸೂರಿಗೆ ಆಗಮಿಸಲಿರುವ ರಾಹುಲ್ ಗಾಂಧಿ ಮೈಸೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ.
ಮಾರ್ಚ್ 24ರಂದು ರಾಹುಲ್ ಪ್ರವಾಸದ ವಿವರ-
- ಬೆಳಿಗ್ಗೆ ಚಾಮುಂಡೇಶ್ವರಿ ದೇವಾಲಯಕ್ಕೆ ರಾಹುಲ್ ಭೇಟಿ.
- ನಂತರ ಮಹಾರಾಣಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಜೊತೆ ರಾಹುಲ್ ಸಂವಾದ.
- ಬೆಳಿಗ್ಗೆ 11:30ಕ್ಕೆ ಹೆಲಿಕ್ಯಾಪ್ಟರ್ ಮೂಲಕ ಚಾಮರಾಜನಗರಕ್ಕೆ ರಾಹುಲ್ ಭೇಟಿ.
- ಚಾಮರಾಜನಗರದ ಕ್ರೀಡಾಂಗಣದಲ್ಲಿ ಕಾರ್ನರ್ ಮೀಟಿಂಗ್ ನಲ್ಲಿ ರಾಹುಲ್ ಭಾಗಿ.
- ಚಾಮರಾಜನಗರ ಜಿಲ್ಲೆಯ ಸಂತೆ ಮಾರನಹಳ್ಳಿ, ಯಳಂದೂರು, ಕೊಳ್ಳೆಗಾಲದಲ್ಲಿ ರಾಹುಲ್ ರೋಡ್ ಶೋ.
- ಸಂತೆ ಮಾರನಹಳ್ಳಿ, ಯಳಂದೂರು, ಕೊಳ್ಳೆಗಾಲದಲ್ಲಿ ರಾಹುಲ್ ರೋಡ್ ಶೋ.
- ಅಂದು ರಾತ್ರಿ ಮೈಸೂರಿಗೆ ತೆರಳಿ ಅಲ್ಲೇ ತಂಗಲಿರುವ ರಾಹುಲ್ ಗಾಂಧಿ.
ರಾಹುಲ್ ಗಾಂಧಿಯ ಕರಾವಳಿ ಪ್ರವಾಸದ ಕೆಲವು ಫೋಟೋ ಮತ್ತು ವಿಡಿಯೋಗಳು
ಮಾರ್ಚ್ 25ರಂದು ರಾಹುಲ್ ಪ್ರವಾಸದ ವಿವರ-
- ಬೆಳಿಗ್ಗೆ ಹಾಸನ ಚಿಕ್ಕಮಗಳೂರು ಜಿಲ್ಲೆಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳ ಜೊತೆಗೆ ಸಭೆ.
- ನಂತರ ಹಿರಿಯ ನಾಯಕರುಗಳ ಜೊತೆಗೆ ಸಭೆ ನಡೆಸಲಿರುವ ರಾಹುಲ್.
- ನಂತರ ಹೆಲಿಕ್ಯಾಪ್ಟರ್ ಮೂಲಕ ಮಂಡ್ಯದ ಕೆ.ಆರ್.ಪೇಟೆಗೆ ಭೇಟಿ.
- ಕೆ.ಆರ್.ಪೇಟೆ, ಪಾಂಡವಪುರದಲ್ಲಿ ರಾಹುಲ್ ಗಾಂಧಿ ರೋಡ್ ಶೋ.
- ನಂತರ ಶ್ರೀರಂಗಪಟ್ಟಣದ ಹಳೆಸಂತೆಯ ಮೈದಾನದ ಕಾರ್ನರ್ ಮೀಟಿಂಗ್ ನಲ್ಲಿ ರಾಹುಲ್ ಭಾಗಿ.
- ನಂತರ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆ.
- ಸಭೆ ಬಳಿಕ ಮೈಸೂರಿನಿಂದ ದೆಹಲಿಗೆ ತೆರಳಿರುವ ರಾಹುಲ್ ಗಾಂಧಿ.
ಮಾರ್ಚ್ 24, 25 ರಂದು ನಡೆಯಲಿರುವ ರಾಹುಲ್ ಗಾಂಧಿಯ ಜನಾಶೀರ್ವಾದ ಯಾತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಸಚಿವ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಸಚಿವರು ಸಾಥ್ ನೀಡಲಿದ್ದಾರೆ. ಮಾರ್ಚ್ 25ರಂದು ನಡೆಯುವ ಬೃಹತ್ ಸಮಾವೇಶದಲ್ಲಿ ಜೆಡಿಎಸ್ ನ ಏಳು ಬಂಡಾಯ ಶಾಸಕರು ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ.