Swiggy ಡೆಲಿವೆರಿ ಬಾಯ್ ಗಳಿಗೆ ವಾರದಲ್ಲಿ ನಾಲ್ಕೇ ದಿನ ಕೆಲಸ, ಕೋವಿಡ್ ಚಿಕಿತ್ಸೆಯ ಖರ್ಚು ಕೂಡಾ ಭರಿಸಲಿದೆ ಕಂಪನಿ

ಈ ತಿಂಗಳಲ್ಲಿ ಅಂದರೆ ಮೇ ತಿಂಗಳಲ್ಲಿ ಸ್ವಿಗ್ಗಿ  ನೌಕರರಿಗೆ,  ವಾರದಲ್ಲಿ ನಾಲ್ಕು ದಿನಗಳು ಮಾತ್ರ ಕೆಲಸ ಮಾಡಬೇಕಾಗುತ್ತದೆ. ಉಳಿದ ಮೂರು ದಿನ ರಜೆ ಇರುತ್ತದೆ.   Swiggyಯ  ಮಾನವ ಸಂಪನ್ಮೂಲ ಮುಖ್ಯಸ್ಥ ಗಿರೀಶ್ ಮೆನನ್ ಈ ಮಾಹಿತಿಯನ್ನು ನೌಕರರಿಗೆ ಕಳುಹಿಸಿದ ಇಮೇಲ್‌ನಲ್ಲಿ ನೀಡಿದ್ದಾರೆ.

Written by - Ranjitha R K | Last Updated : May 4, 2021, 03:59 PM IST
  • ಮೇ ತಿಂಗಳಲ್ಲಿ ಸ್ವಿಗಿ ನೌಕರರಿಗೆ ವಾರದಲ್ಲಿ ಮೂರು ದಿನ ರಜೆ
  • ನೌಕರರ ಆಯ್ಕೆಯ ನಾಲ್ಕು ದಿನ ಕೆಲಸ
  • ಕರೋನ ಸೋಂಕು ಕಂಡು ಬಂದರೆ ಕಂಪನಿಯೇ ಚಿಕಿತ್ಸೆ ವೆಚ್ಚ ಭರಿಸಲಿದೆ
Swiggy ಡೆಲಿವೆರಿ ಬಾಯ್ ಗಳಿಗೆ ವಾರದಲ್ಲಿ ನಾಲ್ಕೇ ದಿನ ಕೆಲಸ, ಕೋವಿಡ್ ಚಿಕಿತ್ಸೆಯ ಖರ್ಚು ಕೂಡಾ  ಭರಿಸಲಿದೆ ಕಂಪನಿ title=
ಮೇ ತಿಂಗಳಲ್ಲಿ ಸ್ವಿಗಿ ನೌಕರರಿಗೆ ವಾರದಲ್ಲಿ ಮೂರು ದಿನ ರಜೆ (file photo)

ನವದೆಹಲಿ : ಸ್ವಿಗ್ಗಿ (swiggy) ನೌಕರರಿಗೆ ಇನ್ನು ಮುಂದೆ ವಾರದಲ್ಲಿ ನಾಲ್ಕು ದಿನ ಮಾತ್ರ ಕೆಲಸ ಇರಲಿದೆ. ಈ ಬಗ್ಗೆ ಕಂಪನಿಯು ನೌಕರರಿಗೆ ಆಂತರಿಕ ಮೇಲ್ ಕಳುಹಿಸಿದೆ.  ಕರೋನಾದ (Coronavirus) ಹೆಚ್ಚುತ್ತಿರುವ ಪ್ರಕರಣಗಳ ಕಾರಣ ತನ್ನ ನೌಕರರ ಆರೋಗ್ಯ ದೃಷ್ಟಿಯಿಂದ,  ಕಂಪನಿ ಈ ನಿರ್ಧಾರ ತೆಗೆದುಕೊಂಡಿದೆ. 

Swiggy ನೌಕರರಿಗೆ ವಾರದಲ್ಲಿ 4 ದಿನ ಮಾತ್ರ ಕೆಲಸ : 
ಈ ತಿಂಗಳಲ್ಲಿ ಅಂದರೆ ಮೇ ತಿಂಗಳಲ್ಲಿ ಸ್ವಿಗ್ಗಿ (Swiggy) ನೌಕರರಿಗೆ,  ವಾರದಲ್ಲಿ ನಾಲ್ಕು ದಿನಗಳು ಮಾತ್ರ ಕೆಲಸ ಮಾಡಬೇಕಾಗುತ್ತದೆ. ಉಳಿದ ಮೂರು ದಿನ ರಜೆ ಇರುತ್ತದೆ.   Swiggyಯ  ಮಾನವ ಸಂಪನ್ಮೂಲ ಮುಖ್ಯಸ್ಥ ಗಿರೀಶ್ ಮೆನನ್ ಈ ಮಾಹಿತಿಯನ್ನು ನೌಕರರಿಗೆ ಕಳುಹಿಸಿದ ಇಮೇಲ್‌ನಲ್ಲಿ ನೀಡಿದ್ದಾರೆ. ದೇಶದಲ್ಲಿ ಹೆಚ್ಚುತ್ತಿರುವ ಕರೋನ (COVID-19) ಪ್ರಕರಣವನ್ನು ಗಮನದಲ್ಲಿಟ್ಟುಕೊಂಡು, ಮೇ ತಿಂಗಳಲ್ಲಿ ಸಿಬ್ಬಂದಿಗೆ ವಾರದಲ್ಲಿ 3 ದಿನ ರಜೆ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಲಾಗಿದೆ. 

ಇದನ್ನೂ ಓದಿ : Online Banking Tips: ನೀವು ಆನ್‌ಲೈನ್ ಬ್ಯಾಂಕಿಂಗ್ ಬಳಸುತ್ತಿದ್ದರೆ ಈ ಕೆಲಸಗಳನ್ನು ಎಂದಿಗೂ ಮಾಡಬೇಡಿ

ನೌಕರರ ಆಯ್ಕೆಯ ನಾಲ್ಕು ದಿನ ಕೆಲಸ : 
ವಾರದ ಯಾವ ನಾಲ್ಕು ದಿನ ಕೆಲಸ ಮಾಡಲು ಬಯಸುವುದಾಗಿ ನೌಕರರೇ ಆಯ್ಕೆ ಮಾಡಬಹುದಾಗಿದೆ. ಉಳಿದ ಮೂರು ದಿನ ವಿಶ್ರಾಂತಿ ಪಡೆಯಬಹುದು. ದೇಶದಲ್ಲಿ ಹೆಚ್ಚುತ್ತಿರುವ ಕರೋನಾ (Coronavirus) ಪ್ರಕರಣಗಳ ಹಿನ್ನೆಲೆಯಲ್ಲಿ ತನ್ನ ಸಿಬ್ಬಂದಿಯ ಮಾನಸಿಕ ಮತ್ತು ಶಾರೀರಿಕ ಸ್ವಾಸ್ಥ್ಯದ ಬಗ್ಗೆ ಗಮನ ಹರಿಸಬೇಕಾಗಿರುವುದು ಕಂಪನಿಯ ಜವಾಬ್ದಾರಿ ಎಂದು ಸ್ವಿಗಿ ಹೇಳಿದೆ. 

ಕೋವಿಡ್ ಟಾಸ್ಕ್ ಫೋರ್ಸ್ ರಚನೆ : 
ಇನ್ನು ಕಂಪನಿ ಕೋವಿಡ್ ಟಾಸ್ಕ್ ಫೋರ್ಸ್ (COVID taskforce) ಅನ್ನು ಕೂಡಾ ರಚಿಸಿದೆ. ಇದರಲ್ಲಿ ಹೆಚ್ಚಿನ ಜನರನ್ನು ಸೇರಿಸಲು ಬಯಸುವುದಾಗಿಯೂ ಕಂಪನಿ ಹೇಳಿದೆ. ಅಲ್ಲದೆ, ಇದರಲ್ಲಿ ಪಾಲ್ಗೊಳ್ಳಲು ಇಷ್ಟಪಡುವ ಸಿಬ್ಬಂದಿ ತನ್ನ ರಜಾ ದಿನಗಳಂದು ಟಾಸ್ಕ್ ಫೋರ್ಸ್ ನಲ್ಲಿ ಸೇವೆ ಸಲ್ಲಿಸಬಹುದಾಗಿದೆ  ಎಂದು ಕಂಪನಿ ಹೇಳಿದೆ. 

ಇದನ್ನೂ ಓದಿ : 7th Pay Commission : ಕೇಂದ್ರ ಉದ್ಯೋಗಿಗಳಿಗೆ ಸಿಹಿ ಸುದ್ದಿ! 'Pay Fixation' ಗಡುವನ್ನು 3 ತಿಂಗಳವರೆಗೆ ವಿಸ್ತರಣೆ!

ಚಿಕಿತ್ಸೆಯ ವೆಚ್ಚವನ್ನು ಸ್ವಿಗ್ಗಿ ಭರಿಸಲಿದೆ :
ಹೋಂ ಕ್ವಾರಂಟೈನ್ ನಲ್ಲಿರುವ  (Home quarantine) ಸಿಬ್ಬಂದಿಗಾಗಿ ಆನ್‌ಲೈನ್ ಮೆಡಿಕಲ್ ಕನ್ಸಲ್ಟೇಶನ್ ಮೆಡಿಕಲ್ ಸಪೋರ್ಟ್ ವ್ಯವಸ್ಥೆಯನ್ನು ಕೂಡಾ ಮಾಡಿದೆ. ಅಲ್ಲದೆ ಹೋಮ್ ಐಸೋಲೆಶನ್ (Isolation) ಮತ್ತು ಕ್ವಾರಂಟೈನ್ ಕೇರ್ ನಂಥಹ ಸೌಲಭ್ಯಗಳನ್ನು ಕೂಡಾ ಒದಗಿಸಲಾಗಿದೆ. ಕರೋನಾ ಚಿಕಿತ್ಸೆಗೆ ತಗಲುವ ಖರ್ಚನ್ನು ಕೂಡಾ ಕಂಪನಿ ರಿಎಂಬಸ್ ಮಾಡುವುದಾಗಿಯೂ ಕಂಪನಿ ಪ್ರಕಟಿಸಿದೆ.   

ಕುಟುಂಬ ಸದಸ್ಯರು ಆಸ್ಪತ್ರೆಗೆ ದಾಖಲಾದರೂ ಕಂಪನಿ ವೆಚ್ಚ ಭರಿಸಲಿದೆ : 
ಕಂಪನಿಯ ಯಾವುದೇ ಸಿಬ್ಬಂದಿ ಅಥವಾ ಸಿಬ್ಬಂದಿಯ ಕುಟುಂಬ ಸದಸ್ಯರನ್ನು ಆಸ್ಪತ್ರೆಗೆ (Hosipital)  ದಾಖಲಾದರೆ ಕಂಪನಿಯು ಆಸ್ಪತ್ರೆಯ ವೆಚ್ಚ ಭರಿಸಲಿದೆ. ಕಂಪನಿಯ ಇಬ್ಬರು ಸಿಬ್ಬಂದಿಗಳು ಒಟ್ಟಿಗೆ ವಾಸಿಸುತ್ತಿದ್ದು, ಒಬ್ಬನಿಗೆ ಕರೋನಾ ಸೋಂಕು ಕಂಡು ಬಂದಲ್ಲಿ ಮತ್ತೊಬ್ಬನಿಗೆ ಕ್ವಾರಂಟೈನ್ ವ್ಯವಸ್ಥೆಯನ್ನು ಕಂಪನಿಯೇ ಮಾಡಲಿದೆ. 
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News