ನವದೆಹಲಿ: Dead Bodies In River Ganga - ಉತ್ತರ ಪ್ರದೇಶದ (Uttar Pradesh) ಬಳಿಕ ಇದೀಗ ಬಿಹಾರದ ಬಕ್ಸರ್ನಲ್ಲಿ (Buxar) ಗಂಗಾ ನದಿಯಲ್ಲಿ (Ganga River)ಡಜನ್ಗಟ್ಟಲೆ ಮೃತ ದೇಹಗಳನ್ನು ತೇಲಾಡುತ್ತಿರುವುದು ಪತ್ತೆಯಾಗಿದೆ. ಕರೋನಾ ಮರಣದ ನಂತರ, ಮೃತದೇಹಗಳನ್ನು ಗಂಗೆಯಲ್ಲಿ ಹರಿದು ಬಿಡಲಾಗುತ್ತಿದೆ ಎಂಬ ಶಂಕೆಯ ಹಿನ್ನೆಲೆ ಜನರು ಭಯಭೀತರಾಗಿದ್ದಾರೆ. ಆದರೆ, ಅಧಿಕಾರಿಗಳು ಈ ಮೃತ ದೇಹಗಳ ಉತ್ತರ ಪ್ರದೆಶದಿಂದಲೇ ಹರಿದು ಬಂದಿರುವ ಸಾಧ್ಯತೆಯನ್ನು ವರ್ತಿಸುತ್ತಿದ್ದಾರೆ. ಈ ಹಿಂದೆ ಹಮೀರ್ಪುರ ಮತ್ತು ಕಾನ್ಪುರದ ಯಮುನಾದಲ್ಲಿ ಹಲವಾರು ಶವಗಳು ಕಂಡು ಬಂದ ಹಿನ್ನೆಲೆ ಭಾರಿ ಆತಂಕ ಸೃಷ್ಟಿಯಾಗಿತ್ತು.
ಸೋಮವಾರ, ಬಕ್ಸರ್ ಜಿಲ್ಲೆಯ ಚೌಸಾ ಬ್ಲಾಕ್ನ ಮಹಾದೇವ ಘಾಟ್ (Chausa Block Mahadev Ghat) ಬಳಿ, ಜನರು ಸುಮಾರು ಒಂದು ಡಜನ್ ಗೂ ಅಧಿಕ ಶವಗಳನ್ನು ಘಾಟ್ನ ಉದ್ದಕ್ಕೂ ಹರಿದುಹೋಗುತ್ತಿರುವುದನ್ನು ಗಮನಿಸಿದ್ದಾರೆ. ಬಳಿಕ ಈ ಬಗ್ಗೆ ಜನರು ಪೊಲೀಸ್ ಮತ್ತು ಆಡಳಿತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕರೋನಾದಿಂದ (Coronavirus Pandemic) ಸಾವಿನ ಸಂಖ್ಯೆ ಹೆಚ್ಚಾದ ಕಾರಣ, ಕೊನೆಯ ವಿಧಿಗಳನ್ನು ಮಾಡುವ ಬದಲು, ಜನರು ಗಂಗೆಯಲ್ಲಿ ಶವಗಳನ್ನು ಹರಿಬಿಡುತ್ತಿದ್ದಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಕೆಲವು ಶವಗಳು ದಡವನ್ನು ಸೇರಿದ್ದರೆ ಉಳಿದ ಕೆಲ ಶವಗಳು ಕೊಚ್ಚಿ ಹೋಗಿವೆ. ಶವಗಳ ಸ್ಥಿತಿಯನ್ನು ಗಮನಿಸಿದರೆ, ಅವು ಕೊಳೆತುಹೋಗಿವೆ ಎಂಬಂತೆ ಕಂಡುಬರುತ್ತಿದೆ. ಯುಪಿ ಯಿಂದ ಮೃತ ದೇಹಗಳು ಬರುತ್ತಿವೆ ಎಂದು ಗ್ರಾಮಸ್ಥರು ಹೇಳುತ್ತಾರೆ. 30 ರಿಂದ 35 ಶವಗಳು ಈಗಾಗಲೇ ದಡ ಸೇರಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಕರೋನಾ ಸಾಂಕ್ರಾಮಿಕ ಸಮಯದಲ್ಲಿ, ಶವಸಂಸ್ಕಾರದ ದುಬಾರಿ ವೆಚ್ಚವನ್ನು ತಪ್ಪಿಸಲು ಜನರು ಶವಗಳನ್ನು ನೀರಿನಲ್ಲಿ ವಿಸರ್ಜಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮೃತರ ಸಂಬಂಧಿಕರು ಮೃತ ದೇಹಗಳನ್ನು ನೀರಿನಲ್ಲಿ ವಿಸರ್ಜಿಸುತ್ತಿದ್ದಾರೆ. ಆದರೆ, ಇದು ಅನೇಕ ರೀತಿಯ ಸಾಂಕ್ರಾಮಿಕ ರೋಗಗಳನ್ನು ಹರಡುವ ಅಪಾಯ ಕೂಡ ಹೆಚ್ಚಿಸಿದೆ.
ಕಳೆದ ಒಂದು ವಾರದ ಒಳಗೆ ಬಕ್ಸರ್ ನ ಚೌಸಾ ಸ್ಮಶಾನ ಘಾಟ ಮೇಲೆ ಗಂಗಾ ನದಿಯ ತಟದಲ್ಲಿ ಡಜನ್ಗಟ್ಟಲೆ ಶವಗಳು ದೊರೆತಿವೆ. ನೀರಿನಲ್ಲಿ ವಿಸರ್ಜನೆಯ ಬಳಿಕ ಶವಗಳು ಗಂಗಾನದಿಯ ದಡ ಸೇರಿವೆ. ಇನ್ನೊಂದೆಡೆ ನಾಯಿಗಳು, ಗಿಡುಗಗಳು ಶವಗಳನ್ನು ಕೊಚ್ಚಿ ತಿನ್ನಲಾರಂಭಿಸಿವೆ. ಇದರಿಂದ ಗಂಗಾ ಘಾಟ್ ಪರಿಸರ ಇನ್ನಷ್ಟು ಬೀಭತ್ಸ ರೂಪ ಪಡೆದುಕೊಂಡಿದೆ.
ಇದನ್ನೂ ಓದಿ-ಖಾಸಗಿ ಆಸ್ಪತ್ರೆಗಳಲ್ಲಿ Corona vaccine ಬೆಲೆ ಎಷ್ಟು? ನಿಮ್ಮ ನಗರಗಳಲ್ಲಿ ನೀವೆಷ್ಟು ಪಾವತಿಸಬೇಕು ತಿಳಿಯಿರಿ
ಇಲ್ಲಿನ ಗ್ರಾಮಸ್ಥರು ಹೇಳುವ ಪ್ರಕಾರ ಸ್ಮಶಾನ ಘಾಟ್ ಮೇಲೆ ಸಿಗುವ ಕಟ್ಟಿಗೆ ಹಾಗೂ ಅಂತ್ಯಸಂಸ್ಕಾರಕ್ಕಾಗಿ ಬೇಕಾಗುವ ಇತರೆ ಸಾಮಗ್ರಿಗಳ ಬೆಲೆಯಲ್ಲಿ ವಿಪರೀತ ಏರಿಕೆಯಾಗಿದೆ ಎನ್ನಲಾಗಿದೆ. ಇದೇ ಕಾರಣದಿಂದ ಜನರು ಅಂತ್ಯ ಸಂಸ್ಕಾರದ ವೆಚ್ಚ ಭರಿಸಲು ವಿಫಲರಾಗುತ್ತಿದ್ದಾರೆ. ಇನ್ನೊಂದೆಡೆ ಕಳೆದ ಕೆಲ ತಿಂಗಳಿನಿಂದ ಶವಗಳನ್ನು ನದಿಗೆ ವಿಸರ್ಜಿಸುವ ಜನರ ಪ್ರವೃತ್ತಿಯಲ್ಲಿಯೂ ಕೂಡ ಏರಿಕೆಯಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ- Corona: ದೇಶದ ದೊಡ್ಡ ಯೂನಿವರ್ಸಿಟಿಯಲ್ಲಿ ಕರೋನಾ ಹಾವಳಿ, 20 ದಿನದಲ್ಲಿ 26 ಪ್ರಾಧ್ಯಾಪಕರ ಮೃತ್ಯು
ಬಳಿಕ ಸ್ಮಶಾನ ಘಾಟ್ ಪರಿಸರವನ್ನು ಅವಲೋಕಿಸಿರುವ COO ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ. ಸಂಪೂರ್ಣ ಪರಿಸ್ಥಿತಿಯನ್ನು ಅರ್ಥೈಸಿಕೊಂಡಿರುವ ಬಕ್ಸರ್ SDM, ಈ ಶವಗಳು ಎಲ್ಲಿಂದಲೋ ಬಂದು ಬಕ್ಸರ್ ನಲ್ಲಿ ದಡ ಸೇರಿವೆ ಎಂಬಂತೆ ಭಾಸವಾಗುತ್ತಿದೆ ಎಂದು ಹೇಳಿದ್ದಾರೆ. ಶವಗಳ ದಿಸ್ಪೋಸಲ್ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ-AYUSH 64- ಇಂದಿನಿಂದ ಇಲ್ಲಿ ಕೊರೋನಾದಿಂದ ಚೇತರಿಸಿಕೊಳ್ಳಲು ಪರಿಣಾಮಕಾರಿ ಆಯುರ್ವೇದ ಔಷಧ ಉಚಿತವಾಗಿ ಲಭ್ಯ
ಇನ್ನೊಂದೆಡೆ ಘಟನಾ ಸ್ಥಳದಿಂದಲೇ ಅವರು ಉತ್ತರ ಪ್ರದೇಶದ ಅಧಿಕಾರಿಯೋರ್ವರ ಜೊತೆಗೆ ದೂರವಾಣಿ ಸಂಭಾಷಣೆ ನಡೆಸುವ ಮೂಲಕ ಯುಪಿ ವತಿಯಿಂದ ಗಂಗಾನದಿಯುದ್ದಕ್ಕೂ ಶವಗಳು ಬಕ್ಸರ್ ಕಡೆಗೆ ಹರಿದು ಬರುವಿಕೆಯ ತಡೆಯನ್ನು ಸುನಿಶ್ಚಿತಗೊಳಿಸಲು ಸೂಚನೆ ಕೂಡ ನೀಡಿದ್ದಾರೆ. ಜೊತೆಗೆ ಗಂಗಾನದಿಯಲ್ಲಿ ಶವಗಳನ್ನು ವಿಸರ್ಜಿಸದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಲು ಅವರು ಮನವಿ ಮಾಡಿದ್ದಾರೆ.