Salt Benefits : ಆರೋಗ್ಯಕ್ಕೆ ಅಷ್ಟೇ ಅಲ್ಲ ಸೌಂದರ್ಯಕ್ಕೂ ಪ್ರಯೋಜನಕಾರಿಯಾಗಿದೆ 'ಉಪ್ಪು'

ಬಿಸಿಲಿನಿಂದ ತ್ವಚೆ ಕಳೆಗುಂದಿದ್ದರೆ ಕೊಬ್ಬರಿ ಎಣ್ಣೆಗೆ ಉಪ್ಪು ಬೆರೆಸಿ ಸ್ಕ್ರಬ್ ನಂತೆ ಮುಖಕ್ಕೆ ಹಚ್ಚಿ

Last Updated : Jun 17, 2021, 01:44 PM IST
  • ಉಪ್ಪು ಆರೋಗ್ಯಕ್ಕೆ ಅಷ್ಟೇ ಅಲ್ಲ ಸೌಂದರ್ಯಕ್ಕೂ ಪ್ರಯೋಜನಕಾರಿ
  • ಬಿಸಿಲಿನಿಂದ ತ್ವಚೆ ಕಳೆಗುಂದಿದ್ದರೆ ಕೊಬ್ಬರಿ ಎಣ್ಣೆಗೆ ಉಪ್ಪು ಬೆರೆಸಿ ಸ್ಕ್ರಬ್ ನಂತೆ ಮುಖಕ್ಕೆ ಹಚ್ಚಿ
  • ಜೇನುತುಪ್ಪಕ್ಕೆ ಚಿಟಿಕೆ ಉಪ್ಪು ಬೆರೆಸಿ ಫೇಸ್ ಮಾಸ್ಕ್ ಮಾಡಿಕೊಳ್ಳಿ
Salt Benefits : ಆರೋಗ್ಯಕ್ಕೆ ಅಷ್ಟೇ ಅಲ್ಲ ಸೌಂದರ್ಯಕ್ಕೂ ಪ್ರಯೋಜನಕಾರಿಯಾಗಿದೆ 'ಉಪ್ಪು' title=

ಉಪ್ಪು ಆರೋಗ್ಯಕ್ಕೆ ಅಷ್ಟೇ ಅಲ್ಲ ಸೌಂದರ್ಯಕ್ಕೂ ಪ್ರಯೋಜನಕಾರಿಯಾಗಿದೆ. ಗಂಟಲು ನೋವಾದಾಗ ಬಿಸಿ ನೀರಿಗೆ ಚಿಟಿಕೆ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸುವುದರಿಂದ ಗಂಟಲು ನೋವು ನಿವಾರಣೆಯಾಗುತ್ತದೆ.

ತ್ವಚೆಯಲ್ಲಿ ಗುಳ್ಳೆಗಳಾಗಿದ್ದರೆ ಅಲರ್ಜಿಯ ಲಕ್ಷಣಗಳು ಕಂಡುಬಂದರೆ, ಸ್ನಾನ ಮಾಡುವ ನೀರಿಗೆ ಅರ್ಧ ಮುಷ್ಟಿ ಉಪ್ಪು(Salt) ಹಾಕಿ ಕರಗಿಸಿ. ಈ ನೀರಿನಿಂದ ಸ್ನಾನ ಮಾಡಿದರೆ ತ್ವಚೆಯ ಸಮಸ್ಯೆಗಳು ದೂರವಾಗುತ್ತದೆ.

ಇದನ್ನೂ ಓದಿ : ಕಟ್ ಮಾಡಿದ ಕಲ್ಲಂಗಡಿ ಹಣ್ಣನ್ನು ಫ್ರಿಜ್ ನಲ್ಲಿ ಏಕೆ ಇಡಬಾರದು ಗೊತ್ತಾ..?

ಬಿಸಿಲಿನಿಂದ ತ್ವಚೆ ಕಳೆಗುಂದಿದ್ದರೆ ಕೊಬ್ಬರಿ ಎಣ್ಣೆಗೆ ಉಪ್ಪು ಬೆರೆಸಿ ಸ್ಕ್ರಬ್(Face Scrubber) ನಂತೆ ಮುಖಕ್ಕೆ ಹಚ್ಚಿ. ಇದು ಸತ್ತ ಜೀವಕೋಶಗಳನ್ನು ತೆಗೆದುಹಾಕಿ ನಿಮ್ಮ ತ್ವಚೆಗೆ ಹೊಳಪು ನೀಡುತ್ತದೆ.

ಇದನ್ನೂ ಓದಿ : Coronasomia: Covid-19 ಮಹಾಮಾರಿಯ ನಡುವೆಯೇ ಹೆಚ್ಚಾಗುತ್ತಿದೆ ಈ ನಿಗೂಢ ಕಾಯಿಲೆಯ ಅಪಾಯ!

ಜೇನುತುಪ್ಪ(Honey)ಕ್ಕೆ ಚಿಟಿಕೆ ಉಪ್ಪು ಬೆರೆಸಿ ಫೇಸ್ ಮಾಸ್ಕ್ ಮಾಡಿಕೊಳ್ಳಿ. 15 ನಿಮಿಷಗಳ ಬಳಿಕ ಮುಖ ತೊಳೆದರೆ ಮೊಡವೆ ಹಾಗೂ ಅದರ ಕಲೆಗಳು ಮಾಯವಾಗುತ್ತದೆ.

ಇದನ್ನೂ ಓದಿ : Vitamin A : 'ವಿಟಮಿನ್-A' ಕೊರತೆಯ ಲಕ್ಷಣಗಳೇನು? ಸಮಸ್ಯೆಗಳು ಯಾವುವು? ನಿಯಂತ್ರಣ ಹೇಗೆ? ಇಲ್ಲಿದೆ ಮಾಹಿತಿ

ಉಪ್ಪನ್ನು ಟೋನರ್ ನಂತೆಯೂ ಬಳಸಬಹುದು. ಬಾಟಲಿಗೆ ಬೆಚ್ಚಗಿನ ನೀರು ಹಾಕಿ ಉಪ್ಪು ಸೇರಿಸಿ, ಕರಗಿಸಿ. ಹತ್ತಿಯ ಸಹಾಯದಿಂದ ಇದನ್ನು ಮುಖ(Face)ದ ಮೇಲೆ ಹಚ್ಚಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News