Kerala : ವ್ಯಾಕ್ಸಿನ್ ಪಡೆದ 39 ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್!

ಜೂನ್ 6 ರಂದು 175 ವಿದ್ಯಾರ್ಥಿಗಳ ಎರಡನೇ ಬ್ಯಾಚ್ ಆಗಮಿಸಿದ್ದು, ಅವರಲ್ಲಿ ಮೊದಲ ದಿನ ಕೋವಿಡ್ -19 ಪ್ರಕರಣಗಳು ದೃಢಪಟ್ಟಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣಗಳು ಹೆಚ್ಚಾಗಲು ಪ್ರಾರಂಭಿಸಿದಾಗ, ಅಧಿಕಾರಿಗಳು ಜುಲೈ 17 ರಂದು ಆ ಬ್ಯಾಚ್‌ನ ಎಲ್ಲಾ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆಗಳನ್ನು ನಡೆಸಿದರು. ಅವರಲ್ಲಿ 20 ಮಂದಿಗೆ ಪಾಸಿಟಿವ್ ಬಂದಿದೆ. ಹಾಗಾಗಿ ಅವರನ್ನ ಮನೆಗೆ ಕಳುಹಿಸಲಾಗಿದೆ.

Last Updated : Jul 20, 2021, 12:16 PM IST
  • ಸರ್ಕಾರಿ ವೈದ್ಯಕೀಯ ಆಸ್ಪತ್ರೆಯ ಲಸಿಕೆ ಪಡೆದ 39 ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಕೋವಿಡ್-19 ಪಾಸಿಟಿವ್
  • ಕೋವಿಡ್-19 ಲಾಕ್‌ಡೌನ್‌ನಿಂದಾಗಿ ವೈದ್ಯಕೀಯ ಕಾಲೇಜು ಬಂದ್
  • ಜೂನ್ 6 ರಂದು 175 ವಿದ್ಯಾರ್ಥಿಗಳ ಎರಡನೇ ಬ್ಯಾಚ್ ಆಗಮಿಸಿದ್ದು
Kerala : ವ್ಯಾಕ್ಸಿನ್ ಪಡೆದ 39 ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್! title=

ತ್ರಿಶೂರ್ : ಲಸಿಕೆ ಪಡೆದ 39 ಇಲ್ಲಿನ ಸರ್ಕಾರಿ ವೈದ್ಯಕೀಯ ಆಸ್ಪತ್ರೆಯ ವೈದ್ಯಕೀಯ ವಿದ್ಯಾರ್ಥಿಗಳಲ್ಲಿ  ಕೋವಿಡ್-19 ಪಾಸಿಟಿವ್ ಬಂದಿದೆ ಎಂದು ಆಸ್ಪತ್ರೆ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. 

ಕೋವಿಡ್-19 ಲಾಕ್‌ಡೌನ್‌(Lockdown)ನಿಂದಾಗಿ ವೈದ್ಯಕೀಯ ಕಾಲೇಜು ಬಂದ್ ಮಾಡಲಾಗಿತ್ತು ಜೂನ್ 1 ರಂದು ಮತ್ತೆ ಮರು ಪ್ರಾರಂಭ ಮಾಡಲಾಗಿತ್ತು. ಹಾಗಾಗಿ ವಿದ್ಯಾರ್ಥಿಗಳ ಮೊದಲ ಬ್ಯಾಚ್ ವ್ಯಾಕ್ಸಿನ್ ಪಡೆದು ಜೂನ್ 5 ರಂದು ಮತ್ತೆ ಕ್ಯಾಂಪಸ್‌ಗೆ ಬಂದಿದ್ದರು.

ಇದನ್ನೂ ಓದಿ : App ಇಲ್ಲದೆಯೇ Ola ಅಥವಾ Uber ಕ್ಯಾಬ್ ಬುಕ್ ಮಾಡಲು ಇಲ್ಲಿದೆ ಸುಲಭ ಮಾರ್ಗ

ಜೂನ್ 6 ರಂದು 175 ವಿದ್ಯಾರ್ಥಿಗಳ ಎರಡನೇ ಬ್ಯಾಚ್ ಆಗಮಿಸಿದ್ದು, ಅವರಲ್ಲಿ ಮೊದಲ ದಿನ ಕೋವಿಡ್ -19 ಪ್ರಕರಣಗಳು(Covid-19 Case) ದೃಢಪಟ್ಟಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣಗಳು ಹೆಚ್ಚಾಗಲು ಪ್ರಾರಂಭಿಸಿದಾಗ, ಅಧಿಕಾರಿಗಳು ಜುಲೈ 17 ರಂದು ಆ ಬ್ಯಾಚ್‌ನ ಎಲ್ಲಾ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆಗಳನ್ನು ನಡೆಸಿದರು. ಅವರಲ್ಲಿ 20 ಮಂದಿಗೆ ಪಾಸಿಟಿವ್ ಬಂದಿದೆ. ಹಾಗಾಗಿ ಅವರನ್ನ ಮನೆಗೆ ಕಳುಹಿಸಲಾಗಿದೆ.

ಅವರ ಶೈಕ್ಷಣಿಕ ಪರೀಕ್ಷೆ ಈಗ ನಡೆಯುತ್ತಿರುವುದರಿಂದ ಮೂರು ಬ್ಯಾಚ್‌ಗಳು ಕ್ಯಾಂಪಸ್‌ನಲ್ಲಿಯೇ ಉಳಿದಿವೆ ಎಂದು ತಿಳಿಸಿದ್ದಾರೆ. ಈ ಬ್ಯಾಚ್‌ಗಳಲ್ಲಿ ವಿದ್ಯಾರ್ಥಿಗಳಲ್ಲಿ ಕೋವಿಡ್ -19 ಪಾಸಿಟಿವ್(Covid-19 positive) ಬಂದಿದೆ. 

ಜೂನ್ 6 ರಿಂದ ಒಟ್ಟು 39 ವೈದ್ಯಕೀಯ ವಿದ್ಯಾರ್ಥಿಗಳು ಕೋವಿಡ್-19(Covid-19) ಗೆ ಪಾಸಿಟಿವ್ ಮಾಡಿದ್ದಾರೆ. ಇವರೆಲ್ಲರೂ ಎರಡು ಪ್ರಮಾಣದ ಲಸಿಕೆಗಳನ್ನು ತೆಗೆದುಕೊಂಡಿದ್ದಾರೆ ಎಂದು ಆಸ್ಪತ್ರೆಯ ಪ್ರಾಧಿಕಾರವು ಪಿಟಿಐಗೆ ತಿಳಿಸಿದೆ.

ಇದನ್ನೂ ಓದಿ : CBSE 10th exam 2021 Results : ಇಂದು ಪ್ರಕಟವಾಗಲ್ಲ CBSE 10ನೇ ತರಗತಿ ಪರೀಕ್ಷೆ ಫಲಿತಾಂಶ : ವಿವರಗಳಿಗೆ ಇಲ್ಲಿ ಪರಿಶೀಲಿಸಿ

ಪಾಸಿಟಿವ್(positive) ಬಂದ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಶೇಷವಾಗಿ ವ್ಯವಸ್ಥೆಗೊಳಿಸಲಾದ ಕೊಠಡಿಗಳಲ್ಲಿ ಪರೀಕ್ಷೆಗೆ ಹಾಜರಾಗಲು ಅವರಿಗೆ ಅವಕಾಶ ನೀಡಲಾಗಿದೆ. ಅವರಲ್ಲದೆ, ಮೆಡಿಕಲ್ ಕಾಲೇಜು ಕ್ಯಾಂಪಸ್‌ನ ಡೆಂಟಲ್ ಕಾಲೇಜಿನ 17 ವಿದ್ಯಾರ್ಥಿಗಳು ಸಹ ಕರೋನವೈರಸ್‌ ಪಾಸಿಟಿವ್ ಬಂದಿದೆ ಎಂದು ಹೇಳಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News