ನವದೆಹಲಿ: SBI Alert! - ದೇಶದ ಸಾರ್ವಜನಿಕ ವಲಯದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. 30 ಸೆಪ್ಟೆಂಬರ್ 2021 ರ ಮೊದಲು ಗ್ರಾಹಕರು ತಮ್ಮ ಖಾಯಂ ಖಾತೆ ಸಂಖ್ಯೆಯನ್ನು (Permanent Account Number) ಆಧಾರ್‌ನೊಂದಿಗೆ ಲಿಂಕ್ ಮಾಡುವಂತೆ ಎಸ್‌ಬಿಐ ಸೂಚನೆ ನೀಡಿದೆ. ಗ್ರಾಹಕರು ಇದನ್ನು ಮಾಡದಿದ್ದರೆ, ಬ್ಯಾಂಕಿನ ಸೇವೆಗಳನ್ನು ಪಡೆಯಲು ಅವರಿಗೆ ಕಷ್ಟವಾಗುತ್ತದೆ ಎಂದು ಹೇಳಲಾಗಿದೆ. ಗ್ರಾಹಕರ ಬ್ಯಾಂಕ್ ಖಾತೆ ಕೂಡ ಸ್ಥಗಿತಗೊಳ್ಳಲಿದೆ ಎಂದು ಬ್ಯಾಂಕ್ ಎಚ್ಚರಿಸಿದೆ. ಇನ್ನೊಂದೆಡೆ ಸೆಪ್ಟೆಂಬರ್ 30 ರೊಳಗೆ ಪ್ಯಾನ್ - ಆಧಾರ್ ಲಿಂಕ್ ಮಾಡದಿದ್ದರೆ, ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ (Income Tax Department) ಹೇಳಿದೆ. ಇದು ಸಂಭವಿಸಿದಲ್ಲಿ, ನೀವು ಆದಾಯ ತೆರಿಗೆ ಕಾಯಿದೆಯಡಿ 1000 ರೂಪಾಯಿ ದಂಡವನ್ನು ಪಾವತಿಸಬೇಕಾಗುತ್ತದೆ.
PAN Card Aadhaar Card Link ಆಗಿದೆಯಾ ಎಂದು ಹೀಗೆ ಚೆಕ್ ಮಾಡಿ
1. ಮೊದಲನೆಯದಾಗಿ ನೀವು ಆದಾಯ ತೆರಿಗೆ ಇಲಾಖೆ www.incometaxindiaefiling.gov.in ನ ಹೊಸ ವೆಬ್‌ಸೈಟ್ https://www.incometax.gov.in/iec/foportal ಗೆ ಭೇಟಿ ನೀಡಿ.
2. ಇಲ್ಲಿ ಕೆಳಗಿನ 'Link Aadhaar' ಆಯ್ಕೆಯನ್ನು ಕ್ಲಿಕ್ ಮಾಡಿ.
3. ನಿಮ್ಮ ಸ್ಟೇಟಸ್ ನೋಡಲು 'Click here' ಕ್ಲಿಕ್ ಮಾಡಿ.
4 ಈಗ ಇಲ್ಲಿ ನೀವು ನಿಮ್ಮ ಆಧಾರ್ ಮತ್ತು ಪ್ಯಾನ್ ಕಾರ್ಡ್ ವಿವರಗಳನ್ನು ಭರ್ತಿ ಮಾಡಿ.
5. ನಿಮ್ಮ ಪ್ಯಾನ್ ಕಾರ್ಡ್ ಈಗಾಗಲೇ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿದ್ದರೆ, PAN is linked to Aadhaar Number ಎಂದು ಬರುತ್ತದೆ.
ಇದನ್ನೂ ಓದಿ-RBI Rule Alert : ನಿಮ್ಮ ಖಾತೆಯಲ್ಲಿ ಎಷ್ಟು ಬ್ಯಾಲೆನ್ಸ್ ಇದೆ ತಿಳಿದುಕೊಂಡಿರಿ, ಇಲ್ಲವಾದರೆ ದಂಡ ತೆರಬೇಕಾದಿತು
ನಿಮ್ಮ ಆಧಾರ್ ಕಾರ್ಡ್ (Aadhaar card) ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡದಿದ್ದರೆ ನೀವು ಈ https://www.incometaxindiaefiling.gov.in/home. ಅನ್ನು ಕ್ಲಿಕ್ ಮಾಡಿ..
1. ಈಗ ನೀವು Link Aadhaar ಮೇಲೆ ಕ್ಲಿಕ್ ಮಾಡಿ.
2. ಈಗ ನಿಮ್ಮ ವಿವರಗಳನ್ನು ಇಲ್ಲಿ ಭರ್ತಿ ಮಾಡಿ.
3. ಇದಾದ ನಂತರ ನಿಮ್ಮ ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಆಗುತ್ತದೆ.
ಎಸ್ ಎಂಎಸ್ ಮೂಲಕವೂ ಲಿಂಕ್ ಮಾಡಬಹುದು
SMS ಸೇವೆಯನ್ನು ಬಳಸಲು, 567678 ಅಥವಾ 56161 ಗೆ ಸಂದೇಶ ಕಳುಹಿಸುವ ಮೂಲಕ ಆಧಾರ್ ಅನ್ನು ಪ್ಯಾನ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಬಹುದು.
ಇದನ್ನೂ ಓದಿ-EPF ಖಾತೆದಾರರು ತಕ್ಷಣ ಈ ಕೆಲಸ ಮಾಡಿ, ಇಲ್ಲವಾದರೆ 7 ಲಕ್ಷ ರೂ ಗಳ ನಷ್ಟವಾಗಬಹುದು
ನಿಷ್ಕ್ರೀಯಗೊಂಡ PAN Card ಅನ್ನು ಹೇಗೆ ಸಕ್ರೀಯಗೊಳಿಸಬೇಕು?
ನಿಷ್ಕ್ರಿಯ ಪ್ಯಾನ್ ಕಾರ್ಡ್ ಅನ್ನು ಮತ್ತೆ ಕಾರ್ಯಗತಗೊಳಿಸಬಹುದು. ಇದಕ್ಕಾಗಿ ನೀವು SMS ಕಳುಹಿಸಬೇಕು. ಸಂದೇಶ ವಿಭಾಗಕ್ಕೆ ಹೋಗುವ ಮೂಲಕ ನಿಮ್ಮ ನೋಂದಾಯಿತ ಮೊಬೈಲ್‌ನಿಂದ ನೀವು 12 ಅಂಕಿಯ ಪ್ಯಾನ್ ಅನ್ನು ನಮೂದಿಸಬೇಕು. ಇದರ ನಂತರ, ಜಾಗವನ್ನು ನೀಡುವ ಮೂಲಕ 10-ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ. ನಂತರ ಈ ಸಂದೇಶವನ್ನು 567678 ಅಥವಾ 56161 ಗೆ SMS ಮಾಡಿ.
ಇದನ್ನೂ ಓದಿ-Gold Price Today : ಹತ್ತು ಸಾವಿರದಷ್ಟು ಅಗ್ಗವಾಯಿತು ಚಿನ್ನದ ಬೆಲೆ , ಇಂದಿನ ದರಕ್ಕಾಗಿ ಇಲ್ಲಿ ಚೆಕ್ ಮಾಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.