ನವದೆಹಲಿ: ಈಗ ಭಾರತದಲ್ಲಿ ಜಾವೆಲಿನ್ ಎನ್ನುವ ಸಮಾನಾರ್ಥ ಪದಕ್ಕೆ ನೀರಜ್ ಚೋಪ್ರಾ ಎನ್ನುವಷ್ಟು ಅವರ ಹೆಸರು ಜನಜನಿತವಾಗಿದೆ.
ಟೋಕಿಯೋ ಒಲಂಪಿಕ್ಸ್ ನಲ್ಲಿ ಜಾವಲಿನ್ ಥ್ರೋ ನಲ್ಲಿ ಭಾರತಕ್ಕೆ ಏಕೈಕ ಚಿನ್ನದ ಪದಕ ಗೆಲ್ಲುವ ಮೂಲಕ ಈಗ ನೀರಜ್ ಚೋಪ್ರಾ ಭಾರತೀಯರೆಲ್ಲಿಗೂ ಸ್ಪೋರ್ಟ್ಸ್ ಐಕಾನ್ ಆಗಿದ್ದಾರೆ.
ಈಗ ಮಾಲ್ಡೀವ್ಸ್‌ನಲ್ಲಿ ತಮ್ಮ ರಜಾ ದಿನಗಳನ್ನು ಕಳೆಯುತ್ತಿರುವ ನೀರಜ್ ಚೋಪ್ರಾ (Neeraj Chopra) ಸಮುದ್ರದ ಆಳದಲ್ಲಿಯೂ ಕೂಡ ಜಾವೆಲಿನ್ ಥ್ರೋ ಎಸೆಯುವ ಮೂಲಕ ಈಗ ಒಂದು ಕ್ಷಣ ಅಚ್ಚರಿ ಮೂಡಿಸಿದ್ದಾರೆ.ಹೌದು ಅವರು ಸ್ಕೂಬಾ ಡೈವಿಂಗ್ ನಲ್ಲಿ ಜಾವೆಲಿನ್ ಎಸೆಯುವಂತೆ ಅನುಕರಿಸುವ ವಿಡಿಯೋವೊಂದನ್ನು ಅವರು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡು ತಾವು ಯಾವಾಗಲೂ ಜಾವೆಲಿನ್ ಬಗ್ಗೆಯೇ ಚಿಂತಿಸುವುದಾಗಿ ಬರೆದುಕೊಂಡಿದ್ದಾರೆ. ಸದ್ಯ ನೀರಜ್ ಮಾಲ್ಡೀವ್ಸ್‌ನ ಫೂರವೇರಿ ರೆಸಾರ್ಟ್‌ನಲ್ಲಿ ತಂಗಿದ್ದಾರೆ.
ಇದನ್ನೂ ಓದಿ: ಶಾಂತ ಮನಸ್ಥಿತಿಗೆ ನೀರಜ್ ಚೋಪ್ರಾ ಕೊಟ್ಟ ಉಪಾಯವೇನು ಗೊತ್ತೇ ?
Aasman par, zameen pe, ya underwater, I'm always thinking of the javelin!
PS: Training shuru ho gayi hai 💪🏽 pic.twitter.com/q9aollKaJx
— Neeraj Chopra (@Neeraj_chopra1) October 1, 2021
ಈ ವರ್ಷ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನೀರಜ್ ಐತಿಹಾಸಿಕ ಚಿನ್ನವನ್ನು ಗೆದ್ದಾಗಿನಿಂದ, ಭಾರತದ ಜಾವೆಲಿನ್ ತಾರೆ ಅತ್ಯಾಕರ್ಷಕ ಆದರೆ ಒತ್ತಡದ ಜೀವನಶೈಲಿಯನ್ನು ಅನುಭವಿಸುತ್ತಿದ್ದಾರೆ. ಅವರು, ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಟ್ರ್ಯಾಕ್ ಅಂಡ್ ಫೀಲ್ಡ್ ಅಥ್ಲೀಟ್ ಆಗಿದ್ದಾರೆ, ಅನೇಕ ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡ ಹಲವಾರು ಅಭಿನಂದನಾ ಸಮಾರಂಭಗಳಲ್ಲಿ ಭಾಗಿಯಾಗಿದ್ದಾರೆ.
ಇದನ್ನೂ ಓದಿ: ಪೋಷಕರು ಜೊತೆ ಮೊದಲ ಬಾರಿಗೆ ವಿಮಾನ ಪ್ರಯಾಣ ಮಾಡಿ ನೀರಜ್ ಚೋಪ್ರಾ ಹೇಳಿದ್ದೇನು?
ಮಾಲ್ಡೀವ್ಸ್ ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಕ್ರಿಕೆಟಿಗರಿಗೆ ಜನಪ್ರಿಯ ತಾಣವಾಗಿದೆ. ಕಳೆದ ವರ್ಷದಲ್ಲಿ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ವಿಹಾರಕ್ಕಾಗಿ ಹಾರಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.