Tea : ಚಹಾದೊಂದಿಗೆ ಅಪ್ಪಿತಪ್ಪಿಯೂ ಸೇವಿಸಬೇಡಿ ಈ ಆಹಾರಗಳನ್ನ : ತಿಂದರೆ ಪಶ್ಚಾತ್ತಾಪಡಬೇಕಾದಿತ್ತು ಎಚ್ಚರ!

ಅದು ಜೀರ್ಣಕ್ರಿಯೆಯ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ ಮತ್ತು ನಿಮಗೆ ಅಸಿಡಿಟಿ, ಮಲಬದ್ಧತೆ ಮತ್ತು ಹೊಟ್ಟೆ ಉಬ್ಬರ ಮುಂತಾದ ಸಮಸ್ಯೆಗಳು ಉಂಟಾಗಬಹುದು. ನೀವು ಚಹಾದೊಂದಿಗೆ ತಿನ್ನಬಾರದ ಆಹಾರಗಳು ಯಾವವು ನೋಡೋಣ ಬನ್ನಿ..

Written by - Channabasava A Kashinakunti | Last Updated : Oct 14, 2021, 09:25 AM IST
  • ಚಹಾದೊಂದಿಗೆ ಚೀಸ್ ತಿನ್ನುವುದು ಜೀರ್ಣಕ್ರಿಯೆಗೆ ಡೇಂಜರ್
  • ಇದು ಜೀರ್ಣಕ್ರಿಯೆಯನ್ನು ದುರ್ಬಲಗೊಳಿಸುತ್ತದೆ
  • ಬಿಸಿ ಚಹಾ ಸೇವಿಸಿದ ನಂತರ, ಕನಿಷ್ಠ 30 ನಿಮಿಷಗಳವರಗೆ ಯಾವುದೇ ತಣ್ಣನೆಯ ಪದಾರ್ಥ ತಿನ್ನಬೇಡಿ
Tea : ಚಹಾದೊಂದಿಗೆ ಅಪ್ಪಿತಪ್ಪಿಯೂ ಸೇವಿಸಬೇಡಿ ಈ ಆಹಾರಗಳನ್ನ : ತಿಂದರೆ ಪಶ್ಚಾತ್ತಾಪಡಬೇಕಾದಿತ್ತು ಎಚ್ಚರ! title=

ಕೆಲವು ಆಹಾರಗಳಿವೆ ಅವುಗಳನ್ನ ಚಹಾದೊಂದಿಗೆ ಅಪ್ಪಿತಪ್ಪಿಯೂ ನೀವು ಸೇವಿಸಬಾರದು. ಒಂದು ವೇಳೆ ನೀವು ಚಹಾದೊಂದಿಗೆ ಸೇವಿಸಿದರೆ, ಅದು ಜೀರ್ಣಕ್ರಿಯೆಯ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ ಮತ್ತು ನಿಮಗೆ ಅಸಿಡಿಟಿ, ಮಲಬದ್ಧತೆ ಮತ್ತು ಹೊಟ್ಟೆ ಉಬ್ಬರ ಮುಂತಾದ ಸಮಸ್ಯೆಗಳು ಉಂಟಾಗಬಹುದು. ನೀವು ಚಹಾದೊಂದಿಗೆ ತಿನ್ನಬಾರದ ಆಹಾರಗಳು ಯಾವವು ನೋಡೋಣ ಬನ್ನಿ..

ಕಬ್ಬಿಣದ ಅಂಶದ ತರಕಾರಿಗಳು

ಕಬ್ಬಿಣದ ಅಂಶ ಸಮೃದ್ಧವಾಗಿರುವ ತರಕಾರಿಗಳು(Vegetables), ಅವುಗಳನ್ನು ಚಹಾದೊಂದಿಗೆ ತಿನ್ನುವುದು ಹಾನಿಕಾರಕ. ಕಬ್ಬಿಣಾಂಶವಿರುವ ಆಹಾರಗಳು ಮತ್ತು ಚಹಾದೊಂದಿಗೆ ಒಂದಕ್ಕೊಂದು ಹೊಂದಿಕೆಯಾಗುವುದಿಲ್ಲ ಏಕೆಂದರೆ, ಚಹಾವು ಟ್ಯಾನಿನ್ ಮತ್ತು ಆಕ್ಸಲೇಟ್ ಗಳನ್ನು ಹೊಂದಿರುತ್ತದೆ ಮತ್ತು ಈ ಕಾರಣದಿಂದಾಗಿ, ಕಬ್ಬಿಣದಂಶವಿರುವ ಆಹಾರವನ್ನು ಸೇವಿಸಿದ ನಂತರವೂ ನಿಮ್ಮ ದೇಹವು ಕಬ್ಬಿಣವನ್ನು ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ. ಚಹಾದಲ್ಲಿ ಇರುವ ಸಂಯುಕ್ತಗಳು ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ನಿರ್ಬಂಧಿಸುತ್ತವೆ ಮತ್ತು ದೇಹವು ಪೋಷಣೆಯನ್ನು ಪಡೆಯುವುದಿಲ್ಲ. ಕಬ್ಬಿಣಾಂಶವಿರುವ ಬೀಜಗಳು, ಹಸಿರು ಎಲೆಗಳ ತರಕಾರಿಗಳು, ಓಟ್ ಮೀಲ್, ಧಾನ್ಯಗಳು ಮತ್ತು ದ್ವಿದಳ ಧಾನ್ಯಗಳನ್ನು ಚಹಾದೊಂದಿಗೆ ಸೇವಿಸಬೇಡಿ.

ಇದನ್ನೂ ಓದಿ : ನೀವೂ ಕಾಫಿ ಪ್ರಿಯರೇ! ಹಾಗಿದ್ದರೆ Coffee ಕುಡಿಯಲು ಸರಿಯಾದ ಸಮಯದ ಬಗ್ಗೆ ಇರಲಿ ಎಚ್ಚರ

ನಿಂಬೆ

ನಿಂಬೆ ಚಹಾ(Lemon Tea) ತೂಕ ಇಳಿಕೆಯ ಜನಪ್ರಿಯ ಪಾನೀಯವೆಂದು ಪರಿಗಣಿಸಲಾಗುತ್ತದೆ ಮತ್ತು ಹೆಚ್ಚಿನ ಜನರು ಇದನ್ನು ಬೆಳಿಗ್ಗೆ ಕುಡಿಯಲು ಇಷ್ಟಪಡುತ್ತಾರೆ. ಆದರೆ ನಾವು ಚಹಾ ಎಲೆಗಳು ಮತ್ತು ನಿಂಬೆ ರಸವನ್ನು ಒಟ್ಟಿಗೆ ಬೆರೆಸಿದಾಗ ಚಹಾವು ಆಮ್ಲೀಯವಾಗುತ್ತದೆ ಮತ್ತು ಅದು ನಿಮಗೆ ವಾಯು ಸಮಸ್ಯೆ ಅಂದರೆ ಹೊಟ್ಟೆ ಉಬ್ಬು ಆಗುತ್ತದೆ ಎಂಬುವುದು ನಿಮಗೆ ಗೊತ್ತಾ? ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಲೇಮನ್ ಟೀ ಕುಡಿಯುವುದರಿಂದ ಕೆಲವರಿಗೆ ಆಸಿಡ್ ರಿಫ್ಲಕ್ಸ್ ಮತ್ತು ಎದೆಯುರಿ ಉಂಟಾಗಬಹುದು. ನಿಮಗೆ ಈಗಾಗಲೇ ಅಸಿಡಿಟಿ ಸಮಸ್ಯೆ ಇದ್ದರೆ ಈ ಚಹಾವನ್ನು ಕುಡಿಯಬೇಡಿ.

ಕಡಲೆ ಹಿಟ್ಟು

ಚಹಾ(Tea)ದೊಂದಿಗೆ ಪಕೋಡ ಅಥವಾ ನಾಮ್ಕೀನ್ ತಿನ್ನುವುದು ಸಾಮಾನ್ಯ ಅಭ್ಯಾಸ. ಹೆಚ್ಚಿನ ಜನರು ಇದನ್ನು ಮಾಡುತ್ತಾರೆ, ಆದರೆ ಈ ಟೀ ಟೈಮ್ ತಿಂಡಿಗಳನ್ನು ಹೆಚ್ಚಾಗಿ ಕಡಲೆ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಚಹಾ ಜೊತೆ ಕಡೆಲೆ ಹಿಟ್ಟಿನಿಂದ ಮಾಡಿದ ಆಹಾರಗಳನ್ನ ತಿನ್ನುವುದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು ಮತ್ತು ಈ ಕಾರಣದಿಂದಾಗಿ ದೇಹವು ಸಾಕಷ್ಟು ಪ್ರಮಾಣದಲ್ಲಿ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ನೀವು ಈ ಎರಡು ಆಹಾರಗಳನ್ನ ಒಟ್ಟಿಗೆ ತಿಂದರೂ, ಅವುಗಳನ್ನು ಸಾಂದರ್ಭಿಕವಾಗಿ ಮಾತ್ರ ತಿನ್ನಿರಿ.

ಅರಿಶಿನ

ತಜ್ಞರ ಪ್ರಕಾರ, ಅರಿಶಿನ(Turmeric) ಇರುವಂತಹ ಆಹಾರಗಳನ್ನ ತಿನ್ನುವುದು, ಚಹಾದೊಂದಿಗೆ ಇವುಗಳನ್ನು ತಿನ್ನುವುದರಿಂದ ಹೊಟ್ಟೆಯ ಸಮಸ್ಯೆಗಳು ಉಂಟಾಗಬಹುದು. ಇದು ಗ್ಯಾಸ್, ಅಸಿಡಿಟಿ ಮತ್ತು ಮಲಬದ್ಧತೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅರಿಶಿನ ಮತ್ತು ಚಹಾ ಎಲೆಗಳು ಒಂದಕ್ಕೊಂದು ಹೊಂದಿಕೊಳ್ಳುವುದಿಲ್ಲ ಮತ್ತು ಇದು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ.

ಇದನ್ನೂ ಓದಿ : ಬಿಳಿ ಕೂದಲಿಗೆ ರಾಸಾಯನಿಕ ಕಲರ್ ಬಳಸುವ ಬದಲು ನೆಲ್ಲಿಕಾಯಿ ರಸ ಬಳಸಿ, ನೈಸರ್ಗಿಕವಾಗಿ ಕಪ್ಪಾಗಲಿದೆ ಕೂದಲು

ತಂಪಾದ ಆಹಾರಗಳು

ಚಹಾದೊಂದಿಗೆ ಯಾವುದೇ ತಣ್ಣನೆಯ ಪದಾರ್ಥವನ್ನು ತಿನ್ನುವುದು ಜೀರ್ಣಕ್ರಿಯೆ(Digestion)ಯ ಪ್ರಕ್ರಿಯೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಒಂದೇ ಸಮಯದಲ್ಲಿ ಬೇರೆ ಬೇರೆ ತಾಪಮಾನದ ಎರಡು ವಸ್ತುಗಳನ್ನು ತಿನ್ನುವುದರಿಂದ ಜೀರ್ಣಕ್ರಿಯೆ ದುರ್ಬಲಗೊಳ್ಳುತ್ತದೆ ಮತ್ತು ವಾಕರಿಕೆಯ ಸಮಸ್ಯೆ ಇರಬಹುದು. ಬಿಸಿ ಚಹಾ ಸೇವಿಸಿದ ನಂತರ, ಕನಿಷ್ಠ 30 ನಿಮಿಷಗಳ ಕಾಲ ಯಾವುದೇ ತಣ್ಣನೆಯ ಪದಾರ್ಥವನ್ನು ತಿನ್ನಬೇಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News