ಮೊಹಮ್ಮದ್ ಶಮಿ ಸಮರ್ಥನೆ: ವಿರಾಟ್ ಕೊಹ್ಲಿ 10 ತಿಂಗಳ ಪುತ್ರಿಗೆ ಅತ್ಯಾಚಾರದ ಬೆದರಿಕೆ..!

ಟಿ-20 ವಿಶ್ವಕಪ್‌ನಲ್ಲಿ ಅ.24ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತ ತಂಡವು 10 ವಿಕೆಟ್ ಗಳಿಂದ ಹೀನಾಯ ಸೋಲು ಕಂಡಿತ್ತು.

Written by - Puttaraj K Alur | Last Updated : Nov 1, 2021, 07:43 PM IST
  • ಪಾಕಿಸ್ತಾನ & ನ್ಯೂಜಿಲೆಂಡ್ ವಿರುದ್ಧ ಭಾರತ ತಂಡ ಸೋಲು ಕಂಡಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ವಿಕೃತಿ
  • ಮೊಹಮ್ಮದ್ ಶಮಿ ಪರ ಮಾತನಾಡಿದ್ದಕ್ಕೆ ವಿರಾಟ್ ಕೊಹ್ಲಿ ಪುತ್ರಿಗೆ ಅತ್ಯಾಚಾರದ ಬೆದರಿಕೆ
  • ಪಾಕ್ ಮಾಜಿ ನಾಯಕ ಇಂಜಮಾಮ್-ಉಲ್-ಹಕ್ ಸೇರಿದಂತೆ ಅನೇಕ ಕ್ರಿಕೆಟಿಗರಿಂದ ಖಂಡನೆ
ಮೊಹಮ್ಮದ್ ಶಮಿ ಸಮರ್ಥನೆ: ವಿರಾಟ್ ಕೊಹ್ಲಿ 10 ತಿಂಗಳ ಪುತ್ರಿಗೆ ಅತ್ಯಾಚಾರದ ಬೆದರಿಕೆ..! title=
ವಿರಾಟ್ ಕೊಹ್ಲಿ ಪುತ್ರಿಗೆ ಅತ್ಯಾಚಾರದ ಬೆದರಿಕೆ

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ದಿಟ್ಟ ಹೇಳಿಕೆಗಳಿಗೆ ಹೆಸರುವಾಸಿ. ಯಾವುದಾದರೂ ತಪ್ಪು ಅಂತಾ ಕಂಡುಬಂದರೆ ಅದರ ಬಗ್ಗೆ ಮಾತನಾಡಲು ಹಿಂದೆ ಮುಂದೆ ಯೋಚಿಸುವುದಿಲ್ಲ. ಪಾಕ್ ವಿರುದ್ಧ ಭಾರತ ತಂಡದ ಹೀನಾಯ ಸೋಲಿನ ಬಳಿಕ ಅವಾಚ್ಯ ಪದಗಳಿಂದ ವೇಗಿ ಮೊಹಮ್ಮದ್ ಶಮಿಯನ್ನು ನಿಂದಿಸಲಾಗಿತ್ತು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶಮಿಗೆ ಧರ್ಮನಿಂದನೆ ಮಾಡಿದವ ವಿರುದ್ಧ ಹರಿಹಾಯ್ದಿದ್ದರು. ಇದರ ಬಳಿಕ ಕೊಹ್ಲಿ ಪುತ್ರಿ(Virat Kohli Daughter)ಗೆ ಅತ್ಯಾಚಾರದ ಬೆದರಿಕೆಗಳು ಬಂದಿವೆ.

ಹೀನಾಯ ಸೋಲಿನ ಬಳಿಕ ಶಮಿಗೆ ಧರ್ಮನಿಂದನೆ

ಟಿ-20 ವಿಶ್ವಕಪ್‌(T20 World Cup 2021)ನಲ್ಲಿ ಅ.24ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತ ತಂಡವು 10 ವಿಕೆಟ್ ಗಳಿಂದ ಹೀನಾಯ ಸೋಲು ಕಂಡಿತ್ತು. ಈ ಪಂದ್ಯದಲ್ಲಿ ಮೊಹಮ್ಮದ್ ಶಮಿ 3.5 ಓವರ್‌ಗಳಿಗೆ 45 ರನ್‌ ನೀಡಿದ್ದರು. ವಿಶ್ವಕಪ್ ಟೂರ್ನಿಗಳಲ್ಲಿ ಇದುವರೆಗೂ ಭಾರತ ಪಾಕ್ ವಿರುದ್ಧ ಸೋತಿರಲಿಲ್ಲ. ಆದರೆ ಈ ಪಂದ್ಯದಲ್ಲಿ ಮಾತ್ರ ವಿರಾಟ್ ಕೊಹ್ಲಿ ಪಡೆ ಪಾಕ್ ಎದುರು ಹೀನಾಯ ಸೋಲು ಕಂಡಿತ್ತು. ಇದು ಕ್ರಿಕೆಟ್ ಪ್ರೇಮಿಗಳಿಗೆ ಭಾರೀ ನಿರಾಸೆ ಮೂಡಿಸಿತ್ತು.

ಇದನ್ನೂ ಓದಿ: ಭಾರತೀಯ ಕ್ರಿಕೆಟ್ ತಂಡದ ಕೋಚ್ ಹುದ್ದೆ ಮೇಲೆ ಕಣ್ಣಿಟ್ಟಿರುವ ಟಾಮ್ ಮೂಡಿ

ಈ ಹಿನ್ನೆಲೆ ಸೋಶಿಯಲ್‌ ಮೀಡಿಯಾ(Social Media)ದಲ್ಲಿ ಅನೇಕರು ಮೊಹಮ್ಮದ್‌ ಶಮಿಯನ್ನು ಗುರಿಯಾಗಿಸಿಕೊಂಡು ಅವಾಚ್ಯ ಪದಗಳಿಂದ ನಿಂದಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಶಮಿ ಅವರ ‘ದೇಶಭಕ್ತಿ’ ಪ್ರಶ್ನಿಸಿದ್ದ ಅನೇಕರು ಧರ್ಮನಿಂದನೆ ಮಾಡಿದ್ದರು. ಇದರ ಬೆನ್ನಲ್ಲೇ ಸಚಿನ್‌ ತೆಂಡೂಲ್ಕರ್‌ ಸೇರಿದಂತೆ ಅನೇಕರು ಶಮಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಸುದ್ದಿಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ ಕೂಡ ಆಕ್ರೋಶ ವ್ಯಕ್ತಪಡಿಸಿ ಶಮಿ ಬೆನ್ನಿಗೆ ನಿಂತಿದ್ದರು.

‘ಧರ್ಮದ ಆಧಾರದ ಮೇಲೆ ದಾಳಿ ನಡೆಸುವುದು ಒಬ್ಬ ಮನುಷ್ಯನಾಗಿ ಮಾಡಬಹುದಾದ ಅತ್ಯಂತ ಕರುಣಾಜನಕ ಕೆಲಸ. ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕಿದೆ. ಏನು ಮಾಡಬೇಕೆಂದು ತಿಳಿಯದೆ ಜನರು ತಮ್ಮ ಹತಾಶೆಯನ್ನು ಈ ರೀತಿ ಹೊರ ಹಾಕಿದ್ದಾರೆ. ನಾವು ‍ವ್ಯಕ್ತಿಗಳಾಗಿ ಏನು ಮಾಡುತ್ತೇವೆ ಮತ್ತು ಎಷ್ಟು ಶ್ರಮಿಸುತ್ತೇವೆಂಬುದರ ಬಗ್ಗೆ ಅವರಿಗೆ ತಿಳಿವಳಿಕೆ ಇರುವುದಿಲ್ಲ. ಅದನ್ನು ಮುಂದುವರಿಸದೆ ಅಲ್ಲಿಯೇ ಬಿಡಬೇಕು’ ಅಂತಾ ಕೊಹ್ಲಿ(Virat Kohli) ಹೇಳಿದ್ದರು.

Virat-Kohli-Daughter.jpg

ಮುಂದುವರಿದು ‘ನಾವು ಮೈದಾನದಲ್ಲಿ ಆಡುತ್ತಿದ್ದೇವೆ, ಸೋಶಿಯಲ್‌ ಮೀಡಿಯಾ(Social Media)ದಲ್ಲಿ ಬೆನ್ನುಮೂಳೆ ಇಲ್ಲದ ಜನರ ಗುಂಪು ಕೆಟ್ಟದಾಗಿ ಟ್ರೋಲ್ ಮಾಡುತ್ತಿದ್ದಾರೆ. ಕೆಲವರಿಗೆ ಇದು ಮನೋರಂಜನೆಯ ಮೂಲವಾಗಿರುವುದು ನನಗೆ ತುಂಬಾ ದುಃಖ ತರಿಸಿದೆ. ಒಬ್ಬ ವ್ಯಕ್ತಿಯ ವಿರುದ್ಧ ವೈಯಕ್ತಿಕ ನಿಂದನೆ, ಅದರಲ್ಲೂ ಧರ್ಮನಿಂದನೆ ಮಾಡಬಾರದು’ ಎಂದು ಕೊಹ್ಲಿ ಕಿಡಿಕಾರಿದ್ದರು.

ಇದನ್ನೂ ಓದಿ: IPL 2021: ರೋಹಿತ್ ಶರ್ಮ ಸ್ಥಾನವನ್ನು ತುಂಬಲಿದ್ದಾರೆ 21 ವರ್ಷದ ಈ ಬ್ಯಾಟ್ಸ್ ಮ್ಯಾನ್ , ಟೀಂ ಇಂಡಿಯಾದ ಹೊಸ ಹಿಟ್ ಮ್ಯಾನ್ ಇವರು   

ಶಮಿ ಪರವಾಗಿ ಕೊಹ್ಲಿ ಮಾತನಾಡುತ್ತಲೇ ಕೆಲವರು ಸಮಾಜಿಕ ಜಾಲತಾಣಗಳಲ್ಲಿ ವಿಕೃತಿ ಮೆರೆದಿದ್ದಾರೆ. ಕೊಹ್ಲಿ ಶಮಿಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆಂದು ಕೆಲವರು ಅವರ 10 ತಿಂಗಳ ಪುತ್ರಿ ವಾಮಿಕಾಗೆ ಅತ್ಯಾಚಾರದ ಬೆದರಿಕೆ(Rape Threats)ಗಳನ್ನು ಹಾಕಿದ್ದಾರೆ. ಸದ್ಯ ಡಿಲೀಟ್ ಮಾಡಿರುವ @Criccrazyygirl ಟ್ವಿಟರ್ ಖಾತೆಯಲ್ಲಿ ವಾಮಿಕಾ ಮೇಲೆ ಅತ್ಯಾಚಾರ ಬೆದರಿಕೆ ಹಾಕಲಾಗಿದೆ. ಶೀಘ್ರವೇ ನಿಮ್ಮ ಪುತ್ರಿಯ ಮುಖವನ್ನು ತೋರಿಸಿ ಎಂದು ಕ್ಯಾಪ್ಶನ್ ಬರೆಯಲಾಗಿದೆ.

ಕೊಹ್ಲಿ ಪುತ್ರಿಗೆ ಅತ್ಯಾಚಾರ ಬೆದರಿಕೆ ಬರುತ್ತಿದ್ದಂತೆ ಪಾಕಿಸ್ತಾನ ತಂಡದ ಮಾಜಿ ನಾಯಕ ಇಂಜಮಾಮ್-ಉಲ್-ಹಕ್ ಸೇರಿದಂತೆ ಅನೇಕ ಕ್ರಿಕೆಟಿಗರು ಇದನ್ನು ಖಂಡಿಸಿದ್ದಾರೆ. ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾರಿಗೆ ಧೈರ್ಯ ತುಂಬಿ ಬೆಂಬಲ ಸೂಚಿಸಿದ್ದಾರೆ. 10 ತಿಂಗಳ ಮಗುವಿನ ಮೇಲೆ ಅತ್ಯಾಚಾರದ ಬೆದರಿಕೆ ಹಾಕಿರುವವರು ಸೈತಾನ್ ವಂಶಸ್ಥರು ಅಂತಾ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News