COVID-19:ಕರ್ನಾಟಕದಲ್ಲಿ 5 ಹೊಸ ಒಮಿಕ್ರಾನ್ ಪ್ರಕರಣಗಳು ವರದಿ

Karnataka Omicron cases: ಓರ್ವ ಪುರುಷ ಹಾಗೂ ನಾಲ್ವರು ಮಹಿಳೆಯರಲ್ಲಿ ಒಮಿಕ್ರಾನ್ ದೃಢಪಟ್ಟಿದೆ.  ಹೊಸ ಸೋಂಕುಗಳ ದೃಢೀಕರಣದೊಂದಿಗೆ, ಕರ್ನಾಟಕವು ಇದುವರೆಗೆ ಕೋವಿಡ್-19 ರ ಒಮಿಕ್ರಾನ್ ರೂಪಾಂತರದ 13 ಪ್ರಕರಣಗಳನ್ನು ವರದಿ ಮಾಡಿದೆ.

Edited by - Zee Kannada News Desk | Last Updated : Dec 20, 2021, 10:05 AM IST
  • ಕರ್ನಾಟಕದಲ್ಲಿ 5 ಹೊಸ ಒಮಿಕ್ರಾನ್ ಪ್ರಕರಣಗಳು ವರದಿ
  • ಧಾರವಾಡ, ಭದ್ರಾವತಿ, ಉಡುಪಿ ಮತ್ತು ಮಂಗಳೂರಿನಲ್ಲಿ ಸೊಂಕಿತರು ಪತ್ತೆ
  • ರಾಜ್ಯದಲ್ಲಿ 13 ಕ್ಕೆ ಏರಿದ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ
COVID-19:ಕರ್ನಾಟಕದಲ್ಲಿ 5 ಹೊಸ ಒಮಿಕ್ರಾನ್ ಪ್ರಕರಣಗಳು ವರದಿ title=
ಒಮಿಕ್ರಾನ್

ಬೆಂಗಳೂರು: ಕರ್ನಾಟಕದಲ್ಲಿ ಭಾನುವಾರ ಐದು ಕೊರೊನಾ ವೈರಸ್‌ನ ಒಮಿಕ್ರಾನ್ ರೂಪಾಂತರದ ( Omicron variant) ಪ್ರಕರಣಗಳು ದೃಢಪಟ್ಟಿವೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ (Health Minister Dr K Sudhakar) ಹೇಳಿದ್ದಾರೆ.

ಓರ್ವ ಪುರುಷ ಹಾಗೂ ನಾಲ್ವರು ಮಹಿಳೆಯರಲ್ಲಿ ಒಮಿಕ್ರಾನ್ ದೃಢಪಟ್ಟಿದೆ. ಧಾರವಾಡ, ಭದ್ರಾವತಿ, ಉಡುಪಿ ಮತ್ತು ಮಂಗಳೂರಿನಲ್ಲಿ ಪ್ರಕರಣಗಳು ವರದಿಯಾಗಿವೆ.

ಹೊಸ ಸೋಂಕುಗಳ ದೃಢೀಕರಣದೊಂದಿಗೆ, ಕರ್ನಾಟಕವು ಇದುವರೆಗೆ ಕೋವಿಡ್-19 ರ ಒಮಿಕ್ರಾನ್ ರೂಪಾಂತರದ (Karnataka Omicron cases) 13 ಪ್ರಕರಣಗಳನ್ನು ವರದಿ ಮಾಡಿದೆ.

 

 

COVID-19 ನ ಹೊಸ ರೂಪಾಂತರವು ನವೆಂಬರ್ 25 ರಂದು ದಕ್ಷಿಣ ಆಫ್ರಿಕಾದಿಂದ ವಿಶ್ವ ಆರೋಗ್ಯ ಸಂಸ್ಥೆಗೆ (WHO) ಮೊದಲ ಬಾರಿಗೆ ವರದಿಯಾಗಿದೆ. WHO ಪ್ರಕಾರ, ಈ ವರ್ಷದ ನವೆಂಬರ್ 9 ರಂದು ಸಂಗ್ರಹಿಸಲಾದ ಮಾದರಿಯಿಂದ B.1.1.529 ಸೋಂಕು ಮೊದಲ ಬಾರಿಗೆ ದೃಢಪಟ್ಟಿದೆ.

ನವೆಂಬರ್ 26 ರಂದು, ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಹೊಸ COVID-19 ರೂಪಾಂತರ B.1.1.529 ಅನ್ನು WHO 'ಒಮಿಕ್ರಾನ್' ಎಂದು ಹೆಸರಿಸಿದೆ. WHO ಒಮಿಕ್ರಾನ್ ಅನ್ನು 'ಕಳವಳಕಾರಿ ರೂಪಾಂತರ' (variant of concern) ಎಂದು ವರ್ಗೀಕರಿಸಿದೆ.

ಇದನ್ನೂ ಓದಿ: ‘ಅಧಿಕಾರ ಯಾವುದೂ ಶಾಶ್ವತವಲ್ಲ’: ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡ್ತಾರಾ ಬೊಮ್ಮಾಯಿ..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News