GOOD NEWS:ಇಂದಿನಿಂದ ಬೆಳಗ್ಗೆ 5 ಗಂಟೆಗೆ Metro ಸೇವೆ ಆರಂಭ, ನಿಮ್ಮ ನಿಲ್ದಾಣಕ್ಕೆ ಟ್ರೈನ್ ಬರುವ ಸಮಯ ತಿಳಿದುಕೊಳ್ಳಿ.!

Namma Metro: ಸೋಮವಾರದಿಂದ ಶನಿವಾರದ ವರಗೆ ಮೆಟ್ರೋ ಸೇವೆಯ ಒಂದು ಗಂಟೆ ಮುಂಚೆ ಪ್ರಾರಂಭಿಸಲು BMRCL ನಿರ್ಧರಿಸಿದೆ.

Edited by - Zee Kannada News Desk | Last Updated : Dec 20, 2021, 11:45 AM IST
  • ಸೋಮವಾರ-ಶನಿವಾರ ಒಂದು ಗಂಟೆ ಮುಂಚೆ ಸೇವೆ ಪ್ರಾರಂಭಿಸಲು BMRCL ನಿರ್ಧಾರ
  • ಇಂದಿನಿಂದ ಬೆಳಗ್ಗೆ 5 ಗಂಟೆಗೆ Metro ಸೇವೆ ಆರಂಭ
  • ಭಾನುವಾರದ ಕಾರ್ಯಾಚರಣೆಗಳು ಬೆಳಿಗ್ಗೆ 7 ಗಂಟೆಗೆ ಪ್ರಾರಂಭ
GOOD NEWS:ಇಂದಿನಿಂದ ಬೆಳಗ್ಗೆ 5 ಗಂಟೆಗೆ Metro ಸೇವೆ ಆರಂಭ, ನಿಮ್ಮ ನಿಲ್ದಾಣಕ್ಕೆ ಟ್ರೈನ್ ಬರುವ ಸಮಯ ತಿಳಿದುಕೊಳ್ಳಿ.!  title=
ಮೆಟ್ರೋ

ಬೆಂಗಳೂರು: ಆಧುನಿಕ ಯುಗದ ಭರಾಟೆಯಲ್ಲಿ ಎಲ್ಲವೂ ಯಾಂತ್ರಿಕವಾಗಿವೆ. ಗಂಟೆಗಟ್ಟಲೆ ಪ್ರಯಾಣಿಸಬೇಕಿದ್ದ ಜಾಗಕ್ಕೆ ನಿಮಿಷಗಳಲ್ಲಿ ಹೋಗಬಹುದು. ಅದರಲ್ಲೂ ಬೆಂಗಳೂರಿನಲ್ಲಿ ಟ್ರಾಫಿಕ್ ಕಿರಿಕಿರಿ ಅನುಭವಿಸುತ್ತಿದ್ದವರ ಪಾಲಿಗೆ ವರವಾಗಿ ಬಂದಿದ್ದು 'ನಮ್ಮ ಮೆಟ್ರೋ'  (Namma Metro).

ಇದೀಗ ನಮ್ಮ ಮೆಟ್ರೋ ಪ್ರಯಾಣಿಕರಿಗೆ (Passengers) ಗುಡ್ ನ್ಯೂಸ್ ಸಿಕ್ಕಿದೆ. ಭಾನುವಾರ ಹೊರತುಪಡಿಸಿ ಉಳಿದ ಎಲ್ಲ ದಿನಗಳಲ್ಲಿ ಮೆಟ್ರೋ ಸಂಚಾರವನ್ನು (Bengaluru Metro Timing) ಒಂದು ಗಂಟೆ ಮುಂಚಿತವಾಗಿ ಪ್ರಾರಂಭಿಸಲು BMRCL ನಿರ್ಧರಿಸಿದೆ.

ಸೋಮವಾರದಿಂದ, ಮೆಟ್ರೋ ರೈಲು ಕಾರ್ಯಾಚರಣೆಗಳು ವಾರದ ಆರು ದಿನಗಳಲ್ಲಿ ಬೆಳಿಗ್ಗೆ 6 ರ ಬದಲು 5 ಗಂಟೆಗೆ ಪ್ರಾರಂಭವಾಗುತ್ತವೆ. ಭಾನುವಾರದ ಕಾರ್ಯಾಚರಣೆಗಳು ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗುತ್ತವೆ. 

 

 

ರೈಲುಗಳು ಟರ್ಮಿನಲ್ ನಿಲ್ದಾಣಗಳಿಂದ ಬೆಳಿಗ್ಗೆ 5 ಗಂಟೆಗೆ ಮೆಟ್ರೋ ಸೇವೆ ಪ್ರಾರಂಭವಾಗುತ್ತವೆ. ನಾಗಸಂದ್ರ, ರೇಷ್ಮೆ ಸಂಸ್ಥೆ, ಕೆಂಗೇರಿ ಮತ್ತು ಬೈಯಪ್ಪನಹಳ್ಳಿಯಿಂದ ಮೊದಲನೇ ಮೆಟ್ರೋ ರೈಲು ಸೇವೆಯು ಬೆಳಗ್ಗೆ 5 ಗಂಟೆಯಿಂದ ಲಭ್ಯವಿರುತ್ತದೆ. ಭಾನುವಾರದಂದು ಯಾವುದೇ ಬದಲಾವಣೆ ಇಲ್ಲದೇ ರೈಲುಗಳ ಸೇವೆಯು ಬೆಳಗ್ಗೆ 7 ಗಂಟೆಗೆ ಪ್ರಾರಂಭವಾಗುತ್ತದೆ. 

ಕೊನೆಯ ಮೆಟ್ರೋ ರೈಲು ವಾರದ ಎಲ್ಲ ದಿನಗಳಲ್ಲಿ ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ರಾತ್ರಿ 11 ಗಂಟೆಗೆ ಹೊರಡಲಿದೆ. ಮೆಜೆಸ್ಟಿಕ್‌ನಿಂದ ಕೊನೆಯ ರೈಲು ರಾತ್ರಿ 11.30ಕ್ಕೆ ಹೊರಡಲಿದೆ. 

ಈ ಹಿಂದೆ ಮಹಾಮಾರಿ ಕೊರೊನಾ (Corona) ಭೀತಿ ಹಿನ್ನೆಲೆ ಮೆಟ್ರೋ ಸಾರ್ವಜನಿಕರ ಪ್ರಯಾಣ ವೇಳೆಯನ್ನು ಸೀಮಿತಗೊಳಿಸಲಾಗಿತ್ತು. ಇದೀಗ ಕೊವಿಡ್ ಪ್ರಮಾಣ ಕಡಿಮೆ ಆಗುತ್ತಿರುವಕಾರಣ ಪ್ರಯಾಣದ ಅವಧಿಯನ್ನು ಹಂತ ಹಂತವಾಗಿ ವಿಸ್ತರಿಸುತ್ತಿದೆ. ನವೆಂಬರ್ 18ರಂದು ಕೊನೆಯ ಬಾರಿ ರೈಲು ಸಂಚಾರ ಅವಧಿ ವಿಸ್ತರಣೆ ಮಾಡಲಾಗಿತ್ತು.

ಇದನ್ನೂ ಓದಿ: ದ್ವೇಷದ ಬೆಂಕಿ ಆರಲಿ.. ಕನ್ನಡದ ಬಾವುಟ ಹಾರಲಿ: ನಟಿ ಹರಿಪ್ರಿಯಾ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News