ನವದೆಹಲಿ : Shani Nakshatra Parivartan 2022 : ಜ್ಯೋತಿಷ್ಯದಲ್ಲಿ (Astrology), ಶನಿಯ ರಾಶಿ ಬದಲಾವಣೆ (Shani rashi parivarthan) ಮತ್ತು ನಕ್ಷತ್ರ ಬದಲಾವಣೆಗಳನ್ನು ವಿಶೇಷವೆಂದು ಪರಿಗಣಿಸಲಾಗುತ್ತದೆ . ಏಪ್ರಿಲ್ 29 ರಂದು, ಶನಿಯ ರಾಶಿಚಕ್ರ ಚಿಹ್ನೆಯಲ್ಲಿ ಬದಲಾವಣೆಯಾಗಲಿದೆ. ಆದರೆ ಇದಕ್ಕೂ ಮುನ್ನ ಶನಿದೇವ ನಕ್ಷತ್ರ ಬದಲಾಯಿಸಲಿದ್ದಾನೆ (shani nakshatra parivarthan). ಶನಿದೇವನ ಚಲನೆ ನಿಧಾನವಾಗಿರುತ್ತದೆ. ಈ ಕಾರಣದಿಂದಾಗಿ, ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸಲು ಶನಿ ದೇವ ಎರಡೂವರೆ ವರ್ಷಗಳನ್ನು ತೆಗೆದುಕೊಳ್ಳುತ್ತಾನೆ.
ಶನಿ ನಕ್ಷತ್ರ ಪರಿವರ್ತನೆ 2022 (Shani Nakshatra Parivartan 2022) :
ಜ್ಯೋತಿಷ್ಯಶಾಸ್ತ್ರದ (Astrology) ಪ್ರಕಾರ, ಪ್ರಸ್ತುತ ಶನಿದೇವ ಶ್ರವಣ ನಕ್ಷತ್ರದಲ್ಲಿದ್ದಾನೆ. ಶನಿದೇವನು (Shanideva) ಜನವರಿ 22 ರಂದು ಈ ನಕ್ಷತ್ರವನ್ನು ಪ್ರವೇಶಿಸಿದ್ದನು. ಫೆಬ್ರವರಿ 18 ರವರೆಗೆ ಶನಿದೇವ ಶ್ರವಣ ನಕ್ಷತ್ರದಲ್ಲಿಯೇ ಇರಲಿದ್ದಾನೆ. ಫೆಬ್ರವರಿ 18 ರಿಂದ ಶನಿ ಶ್ರಾವಣ ನಕ್ಷತ್ರದಿಂದ ಧನಿಷ್ಠ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ. ನಂತರ ಮಾರ್ಚ್ 15, 2023 ರವರೆಗೆ ಧನಿಷ್ಟ ನಕ್ಷತ್ರದಲ್ಲಿಯೇ (Dhanishta nakshatra) ಇರಲಿದ್ದಾನೆ.
ಇದನ್ನೂ ಓದಿ : ಮಂಗಳ ರಾಶಿ ಪರಿವರ್ತನೆಯಿಂದ ಈ ರಾಶಿಯವರಿಗೆ ಉದ್ಯೋಗದಲ್ಲಿ ಸಿಗಲಿದೆ ಬಡ್ತಿ, ಮುಟ್ಟಿದ್ದೆಲ್ಲಾ ಚಿನ್ನ
2022 ರಲ್ಲಿ ಶನಿಯ ರಾಶಿ ಪರಿವರ್ತನೆ ಯಾವಾಗ ? (Shani Rashi Parivartan 2022) :
ಏಪ್ರಿಲ್ 29 ರಂದು ಶನಿದೇವನು ರಾಶಿಚಕ್ರವನ್ನು (Shani rashi parivarthan) ಬದಲಾಯಿಸಲಿದ್ದಾನೆ. ಈ ದಿನ ಶನಿಯು ಮಕರ ರಾಶಿಯಿಂದ ಕುಂಭ ರಾಶಿಗೆ ತನ್ನ ಸ್ಥಾನವನ್ನು ಬದಲಿಸಲಿದ್ದಾನೆ. ಶನಿ ದೇವನು ಕುಂಭ ರಾಶಿಯ (Aquarius) ಅಧಿಪತಿ. ಜಾತಕದಲ್ಲಿ ಶನಿಯು ಅಶುಭವಾಗಿದ್ದರೆ, ವ್ಯಕ್ತಿಯು ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಇದರ ಹೊರತಾಗಿ, ಶನಿಯ ಸಾಡೇಸಾತಿ (shani sadesati) ಮತ್ತು ಧೈಯ್ಯಾದ ವೇಳೆ ಬಹಳ ಜಾಗರೂಕರಾಗಿರಬೇಕು. ಶನಿದೇವನ ಕೃಪೆಗೆ ಪಾತ್ರರಾಗಬೇಕಾದರೆ ಮಂಗಳವಾರ ಮತ್ತು ಶನಿವಾರದಂದು ಶನಿದೇವನನ್ನು ಪೂಜಿಸಬೇಕು.
ಯಾವ ರಾಶಿಯ ಮೇಲೆ ವಕ್ರ ದೃಷ್ಟಿ ಬೀರಲಿದ್ದಾನೆ ಶನಿ : (Shani Sadhe Sati and Dhaiya 2022):
ಶನಿದೇವನು ಏಪ್ರಿಲ್ 29 ರಂದು ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಪರಿಣಾಮವಾಗಿ, ಕರ್ಕ ಮತ್ತು ವೃಶ್ಚಿಕ ರಾಶಿಗಳಿಗೆ ಶನಿ ಧೈಯ್ಯಾ ಪ್ರಾರಂಭವಾಗುತ್ತದೆ. ಮತ್ತೊಂದೆಡೆ, ಮೀನ ರಾಶಿಯವರಿ ಗೆ ಸಾಡೇಸಾತಿ (shani sadesati) ಆರಂಭವಾಗಲಿದೆ. ಮಿಥುನ, ತುಲಾ (Libra), ಮಕರ ಮತ್ತು ಕುಂಭ ರಾಶಿಯ ಮೇಲೆ ಈಗಾಗಲೇ ಶನಿ ತನ್ನ ಪ್ರಭಾವ ಬೀರುತ್ತಿದ್ದಾನೆ. ಒಟ್ಟಾರೆಯಾಗಿ 8 ರಾಶಿಚಕ್ರದ ಚಿಹ್ನೆಗಳ ಮೇಲೆ ಶನಿ ಪ್ರಭಾವ ಬೀರಲಿದ್ದಾನೆ.
ಇದನ್ನೂ ಓದಿ : Weekly Horoscope : ಈ ರಾಶಿಯವರ ಪಾಲಿಗೆ ಅದೃಷ್ಟವನ್ನೇ ಹೊತ್ತು ತರಲಿದೆ ಈ ವಾರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.