ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಹೇಳುವುದೆಲ್ಲವೂ ಸುಳ್ಳು, ಸುಳ್ಳು, ಸುಳ್ಳು ಅಂತಾ ಬಿಜೆಪಿ ಟೀಕಿಸಿದೆ. ಬಿಜೆಪಿ ಸರ್ಕಾರ ಕಾಲವ್ಯಯಮಾಡದೆ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ತಕ್ಷಣ ಒಪ್ಪಿಕೊಂಡು ಜಾರಿಗೆ ತರಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದರು. ಇದೇ ವಿಚಾರವಾಗಿ #ಬುರುಡೆರಾಮಯ್ಯ ಹ್ಯಾಶ್ ಟ್ಯಾಗ್ ಬಳಿಸಿ ಬಿಜೆಪಿ ಟ್ವೀಟ್ ಮಾಡಿದೆ.
ಇದನ್ನೂ ಓದಿ: ಸಮಾಜ ಘಾತುಕರನ್ನು ಬೆಳೆಸಿದ್ದು ಕಾಂಗ್ರೆಸ್, ಮತಾಂಧರನ್ನು ಪೋಷಿಸಿದ್ದು ಸಿದ್ದರಾಮಯ್ಯ: ಬಿಜೆಪಿ
ಸಿದ್ದರಾಮಯ್ಯನವರೇ ಸುಳ್ಳೇ ನಿಮ್ಮ ಮನೆ ದೇವರು ಎಂದು ಮತ್ತೊಮ್ಮೆ ಸಾಬೀತು ಮಾಡಿದ್ದೀರಿ.
ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿಯನ್ನು ಲಕ್ಷ್ಯದಲ್ಲಿಟ್ಟುಕೊಂಡು ನಮ್ಮ ಸರ್ಕಾರ ಜಾತಿ ಗಣತಿ ನಡೆಸಿತ್ತು ಎಂದು ಹೊಸ ಸುಳ್ಳನ್ನು ತೇಲಿಬಿಟ್ಟಿದ್ದೀರಿ.
ಸಿದ್ದರಾಮಯ್ಯ ಹೇಳುವುದೆಲ್ಲವೂ ಸುಳ್ಳು, ಸುಳ್ಳು, ಸುಳ್ಳು.#ಬುರುಡೆರಾಮಯ್ಯ
— BJP Karnataka (@BJP4Karnataka) February 23, 2022
‘ಸಿದ್ದರಾಮಯ್ಯನವರೇ ಸುಳ್ಳೇ ನಿಮ್ಮ ಮನೆ ದೇವರು ಎಂದು ಮತ್ತೊಮ್ಮೆ ಸಾಬೀತು ಮಾಡಿದ್ದೀರಿ. ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿ(Reservation Policy for Backward Classes)ಯನ್ನು ಲಕ್ಷ್ಯದಲ್ಲಿಟ್ಟುಕೊಂಡು ನಮ್ಮ ಸರ್ಕಾರ ಜಾತಿ ಗಣತಿ ನಡೆಸಿತ್ತು ಎಂದು ಹೊಸ ಸುಳ್ಳನ್ನು ತೇಲಿಬಿಟ್ಟಿದ್ದೀರಿ. ಸಿದ್ದರಾಮಯ್ಯ ಹೇಳುವುದೆಲ್ಲವೂ ಸುಳ್ಳು, ಸುಳ್ಳು, ಸುಳ್ಳು’ ಅಂತಾ ಕುಟುಕಿದೆ.
‘ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮಹಾಮೈತ್ರಿ ಹಿಂದುಳಿದ ವರ್ಗ(Backward Class)ದ ಮೀಸಲು ವಿಚಾರ ಇತ್ಯರ್ಥಗೊಳಿಸಲು ವಿಫಲವಾಗಿದೆ. ಆದರೆ #ಬುರುಡೆರಾಮಯ್ಯ ಇಲ್ಲಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಜಾತಿಗಣತಿ ಸಿದ್ದರಾಮಯ್ಯರ ಗುಪ್ತ ರಾಜಕೀಯದ ಭಾಗ. ಇದರಿಂದಲೇ ಮೀಸಲು ವಿವಾದಕ್ಕೆ ಮುಕ್ತಿ ಸಿಗುವುದಾಗಿದ್ದರೆ ಅಧಿಕಾರದಲ್ಲಿದ್ದಾಗ ಕೈ ಕಟ್ಟಿ ಕುಳಿತಿದ್ದೇಕೆ?’ ಅಂತಾ ಬಿಜೆಪಿ ಪ್ರಶ್ನಿಸಿದೆ.
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮಹಾಮೈತ್ರಿ ಹಿಂದುಳಿದ ವರ್ಗದ ಮೀಸಲು ವಿಚಾರ ಇತ್ಯರ್ಥಗೊಳಿಸಲು ವಿಫಲವಾಗಿದೆ.
ಆದರೆ #ಬುರುಡೆರಾಮಯ್ಯ ಇಲ್ಲಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಜಾತಿ ಗಣತಿ ಸಿದ್ದರಾಮಯ್ಯರ ಗುಪ್ತ ರಾಜಕೀಯದ ಭಾಗ.
ಇದರಿಂದಲೇ ಮೀಸಲು ವಿವಾದಕ್ಕೆ ಮುಕ್ತಿ ಸಿಗುವುದಾಗಿದ್ದರೆ ಅಧಿಕಾರದಲ್ಲಿದ್ದಾಗ ಕೈ ಕಟ್ಟಿ ಕುಳಿತಿದ್ದೇಕೆ?
— BJP Karnataka (@BJP4Karnataka) February 23, 2022
ಇದನ್ನೂ ಓದಿ: #ಸಾಮಾಜಿಕನ್ಯಾಯ: OBC ಆಯೋಗದ ವರದಿ ಜಾರಿಗೆ ಸಿದ್ಧರಾಮಯ್ಯ ಆಗ್ರಹ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.