ನವದೆಹಲಿ : ನಾವು ನಮ್ಮ ದಿನವನ್ನು ಯಾವ ರೀತಿ ಆರಂಭಿಸುತ್ತೇವೆ ಎನ್ನುವುದರ ಮೇಲೆ ಇಡೀ ದಿನ ಯಾವ ರೀತಿ ಇರುತ್ತದೆ ಎನ್ನುವುದು ನಿರ್ಧಾರವಾಗುತ್ತದೆ (Morning Tips). ಗೊತ್ತಿದ್ದೋ, ಗೊತ್ತಿಲ್ಲದೆಯೋ ನಾವು ಮಾಡುವ ಕೆಲವು ತಪ್ಪಿನಿಂದ ನಮ್ಮ ಇಡೀ ದಿನವೇ ಹಾಳಾಗಿ ಬಿಡುತ್ತದೆ. ಬೆಳಗಿನ ಜಾವದಲ್ಲಿ ಮಾಡುವ ಕೆಲವು ತಪ್ಪುಗಳಿಂದ ಇಡೀ ದಿನವೇ ಹಾಳಾಗುತ್ತದೆ (Mistakes to avoid in morning) . ನೀವು ಕೂಡ ಬೆಳಗ್ಗೆ ಎದ್ದ ತಕ್ಷಣ ಈ 5 ತಪ್ಪುಗಳನ್ನು ಮಾಡುತ್ತಿದ್ದರೆ ತಕ್ಷಣ ನಿಲ್ಲಿಸಿ.
1. ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ :
ಸ್ಮಾರ್ಟ್ ಫೋನ್ (Smart phone)ಹೊಂದಿರುವವರಲ್ಲಿ ಶೇ.90ಕ್ಕೂ ಹೆಚ್ಚು ಮಂದಿ ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ (Mobile) ನೋಡುತ್ತಾರೆ. ಹೀಗೆ ಮಾಡಿದರೆ, ಬೆಳಿಗ್ಗೆಯೇ ಒತ್ತಡಕ್ಕೆ ಒಳಗಾಗಬೇಕಾಗುತ್ತದೆ. ಬೆಳಿಗ್ಗೆ ಡಿಜಿಟಲ್ ಮಾಧ್ಯಮದಿಂದ (Digital media) ದೂರವಿರಲು ಪ್ರಯತ್ನಿಸಿ. ಹೀಗೆ ಮಾಡುವುದರಿಂದ ನೀವು ದಿನವಿಡೀ ಹಗುರವಾಗಿ ಮತ್ತು ಸಂತೋಷವಾಗಿರಲು ಸಾಧ್ಯವಾಗುತ್ತದೆ.
ಇದನ್ನೂ ಓದಿ : ಡಯಾಬಿಟೀಸ್ ರೋಗಿಗಳು ಮಧ್ಯಾಹ್ನದ ಊಟಕ್ಕೆ ಈ ವಸ್ತುಗಳನ್ನು ತಿನ್ನಬೇಕು
2. ಉಪಹಾರ ಸ್ಕಿಪ್:
ನೀವು ಅವಸರದಲ್ಲಿ ತಿಂಡಿ ಮಾಡದಿದ್ದರೂ (Breakfast), ಅದು ಇಡೀ ದಿನದ ಮೇಲೆ ಪ್ರಭಾವ ಬೀರುತ್ತದೆ. ಬೆಳಗಿನ ಉಪಾಹಾರ ಸೇವಿಸುವವರು ಹೆಚ್ಚು ಫಿಟ್ ಆಗಿದ್ದು, ಮಾನಸಿಕವಾಗಿ ಚುರುಕಾಗಿರುತ್ತಾರೆ. ಅವರಿಗೆ ಬೊಜ್ಜಿನ ಸಮಸ್ಯೆ ಕಾಡುವುದಿಲ್ಲ. ಅಷ್ಟೇ ಅಲ್ಲ, ಅಂತಹವರು ಟೈಪ್ 2 ಮಧುಮೇಹ (Type 2 diabetes)ಮತ್ತು ಹೃದ್ರೋಗದಿಂದಲೂ ಪಾರಾಗುತ್ತಾರೆ. ಅದಕ್ಕಾಗಿಯೇ ಬೆಳಗಿನ ಉಪಹಾರವನ್ನು ಎಂದಿಗೂ ಬಿಡಬಾರದು. ದಿನದ ಉತ್ತಮ ಆರಂಭಕ್ಕೆ ಬೆಳಗಿನ ಉಪಾಹಾರ ಅತ್ಯಗತ್ಯ.
3. ಹಾಸಿಗೆಯಿಂದ ತಕ್ಷಣ ಎದ್ದೇಳಬೇಡಿ :
ಮಲಗಿದ್ದವರು ಒಮ್ಮೆಲೇ ಇದ್ದು, ನಿಲ್ಲಬಾರದು. ಹೀಗೆ ಮಾಡಿದಾಗ, ಇದ್ದಕ್ಕಿದ್ದಂತೆ ಮತ್ತು ತ್ವರಿತವಾಗಿ, ಗುರುತ್ವಾಕರ್ಷಣೆಯು ನಿಮ್ಮ ಕಾಲುಗಳಿಗೆ ರಕ್ತವನ್ನು ವೇಗವಾಗಿ ಕಳುಹಿಸುತ್ತದೆ. ಇದು ರಕ್ತದೊತ್ತಡದ (Blood pressure)ಹಠಾತ್ ಕುಸಿತಕ್ಕೆ ಕಾರಣವಾಗಬಹುದು. ಬಿಪಿ ಸಮಸ್ಯೆ ಇದ್ದರೆ, ಇಂಥಹ ತಪ್ಪನ್ನು ತಪ್ಪಿಯೂ ಮಾಡಬೇಡಿ. ಮಲಗಿದ್ದವರು ನಿಧಾನವಾಗಿ ಎದ್ದು ಕುಳಿತುಕೊಳ್ಳಿ ಮತ್ತು ನಂತರ ಕೆಲವು ಸೆಕೆಂಡುಗಳ ಬಳಿಕ ನಿಂತುಕೊಳ್ಳಿ.
ಇದನ್ನೂ ಓದಿ : Desi Ghee Uses: ಕೂದಲ ಆರೈಕೆಗಾಗಿ ತುಪ್ಪವನ್ನು ಈ ರೀತಿ ಬಳಸಿ
4. ವ್ಯಾಯಾಮ ಮಾಡದಿರುವುದು:
ಬೆಳಗಿನ ಜಾವ ಸಮಯ ಇಲ್ಲ ಎನ್ನುವ ಕಾರಣಕ್ಕೆ ವ್ಯಾಯಾಮ (Exercise)ಮಾಡುವುದೇ ಇಲ್ಲ. ಹೀಗೆ ಮಾಡುವುದರಿಂದ ದಿನವಿಡೀ ಸುಸ್ತಾಗಿರುತ್ತೀರಿ. ವ್ಯಾಯಾಮ ಮಾಡುವುದರಿಂದ ದೇಹ ಮಾತ್ರವಲ್ಲದೆ ಮನಸ್ಸು ಕೂಡ ಫಿಟ್ ಆಗಿರುತ್ತೆ. ಆದ್ದರಿಂದ, ಇಡೀ ದಿನವನ್ನು ಉತ್ತಮವಾಗಿಡಲು, ಬೆಳಿಗ್ಗೆ ವ್ಯಾಯಾಮ ಮಾಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.