ಬೆಂಗಳೂರು: ಮೇಕೆದಾಟು ಪಾದಯಾತ್ರೆ (Mekedatu Padayatre) ನಡೆಸುತ್ತಿರುವ ಕಾಂಗ್ರೆಸ್ ವಿರುದ್ಧ ಕೆಂಡಕಾರಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ (Naleen Kumar Kateel), ಭ್ರಷ್ಟಾಚಾರ ಮಾಡಿ ತಿಹಾರ್ ಜೈಲಿಗೆ ಹೋದವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಎಂದು ಟೀಕಿಸಿದರು.
ಇದನ್ನೂ ಓದಿ: ಬೆಂಗಳೂರು ಜನತೆಯ ಕ್ಷಮೆಯಾಚಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಮಾಜಿ ಜೆಡಿಎಸ್ ಶಾಸಕ ಪಿಳ್ಳ ನಾರಾಯಣಸ್ವಾಮಿ (Pilla Narayanaswamy) ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಇವರು, ಕಾಂಗ್ರೆಸ್ ನವರು ಪಾದಯಾತ್ರೆ ಮಾಡ್ತಿರೋದು ಅಧಿಕಾರಕ್ಕಾಗಿ ಮಾತ್ರ. ಅವರು ಸುದೀರ್ಘವಾದ ಅಧಿಕಾರದಲ್ಲಿ ಇರುವಾಗ ನೀರು ಕೊಡಬೇಕು ಎಂದು ಅನ್ನಿಸರಲಿಲ್ಲ. ನಮ್ಮ ಕಡೆ ಕಂಬಳ ಆಟ ಇದೆ. ಆ ಕಂಬಳಕ್ಕೆ (Kambala) ಎರಡು ಜೋಡೆತ್ತುಗಳನ್ನು ಕಟ್ಟಿ ಓಡಿಸುತ್ತಾರೆ. ಅದರಂತೆ ಕಾಂಗ್ರೆಸ್ ನಲ್ಲಿ ಎರಡು ಜೋಡೆತ್ತುಗಳನ್ನು ಓಡಿಸಲು ಸುರ್ಜೇವಾಲಾರನ್ನು ರಾಹುಲ್ ಗಾಂಧಿ ಬಿಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ನವರು ಭಾರತ್ ಮತಾಕಿ ಜೈ ಎಂದು ಎಲ್ಲಿಯೂ ಹೇಳಿರಲಿಲ್ಲ. ಇಲ್ಲಿಯವರೆಗೂ ಜೈಕಾರ ಹೇಳಿದ್ದು ಬರೀ ಇಂದಿರಾಗಾಂಧಿ (indira gandhi), ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಮಾತ್ರ. ಆದರೆ ಮೊನ್ನೆ ಸಿಎಎ (CAA) ಗಲಾಟೆ ಆದಾಗ ಪ್ರಧಾನಮಂತ್ರಿಗಳು ಕಾಂಗ್ರೆಸ್ ನವರಿಂದ ಭಾರತ್ ಮತಾಕಿ ಜೈ ಎಂದು ಘೋಷಣೆ ಕೂಗಿಸಿದ್ರು ಎಂದರು.
ಇದನ್ನೂ ಓದಿ: ತಮಿಳುನಾಡಿನಿಂದ ಪತ್ರ ಬರೆಸ್ಕೊಂಡ್ ಬಂದ್ರೆ ನಾಡಿದ್ದೇ ಮೇಕೆದಾಟು ಯೋಜನೆಗೆ ಗುದ್ದಲಿಪೂಜೆ: ಸಿಟಿ ರವಿ
ಗಲಾಟೆ ಮಾಡಿ ಜೈಲಿಗೆ ಹೋದವರು ಯೂತ್ ಕಾಂಗ್ರೆಸ್ (Youth Congress) ಅಧ್ಯಕ್ಷರು, ಇವರ ಪಾದಯಾತ್ರೆ ಜನರಿಗೆ ಕಣ್ಣೀರು ತರಿಸಲು, ಗಲಭೆ ಎಬ್ಬಿಸಲು ಮಾತ್ರ ಸೀಮಿತ. ಪಂಚರಾಜ್ಯ ಚುನಾವಣಾ ಫಲಿತಾಂಶ ಬಂದ ನಂತರ ರಾಜ್ಯದಲ್ಲಿ ಅರ್ಧ ಕಾಂಗ್ರೆಸ್ ಖಾಲಿ ಆಗುತ್ತದೆ. ಇವತ್ತು ಪಾದಯಾತ್ರೆ ಮಾಡ್ತಿರೋದು ಬಲಾಬಲ ತೋರಿಸಲು. ಮುಂದಿನ ಸಿಎಂ ಗಾಗಿ ಹೋರಾಟ ಮಾಡ್ತಿದ್ದಾರೆ. ನಾನು ಪ್ರಮಾಣ ಮಾಡಿ ಹೇಳ್ತೀನಿ, ಮುಂದಿನ 10 ವರ್ಷ ನೀವು ಅಧಿಕಾರಕ್ಕೆ ಬರೋದಿಲ್ಲ. ಅವರಲ್ಲೇ ಒಳ ಜಗಳ ಜೋರಾಗಿ ನಡೀತ್ತಿದೆ ಎಂದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.