Silk Farming: ರೇಷ್ಮೆ ಕೃಷಿಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ದೊಡ್ಡಬಳ್ಳಾಪುರ ಮಹಿಳೆ!

ರತ್ನಮ್ಮ ರಾಮಯ್ಯನವರು (Ratnamma Ramaiah) ಕಳೆದ 25  ವರ್ಷದಿಂದ ರೇಷ್ಮೆ ಕೃಷಿ ಮಾಡುತ್ತಿದ್ದು, ಇವರ ಇಡೀ ಕುಟುಂಬ ರೇಷ್ಮೆ ಕೃಷಿಯಲ್ಲಿ  ತೊಡಗಿದೆ. ರೇಷ್ಮೆ ಇಲಾಖೆ ಅಧಿಕಾರಿಗಳ ಸಲಹೆ ಮತ್ತು ಮಾರ್ಗದರ್ಶನವನ್ನು ನೆನೆಯುವ ರತ್ನಮ್ಮ ಕುಟುಂಬ ತಮ್ಮ ರೇಷ್ಮೆ ಕೃಷಿಯ ಅನುಭವ ಹಂಚಿಕೊಂಡಿದ್ದಾರೆ. 

Written by - Zee Kannada News Desk | Last Updated : Mar 9, 2022, 06:56 AM IST
  • ವರ್ಷಕ್ಕೆ 11 ಬೆಳೆ 3.83 ಲಕ್ಷ ಲಾಭಗಳಿಸುತ್ತಿರುವ ಪ್ರಗತಿಪರ ಮಹಿಳೆ
  • ರೇಷ್ಮೆ ಇಲಾಖೆಯಿಂದ ಪ್ರಶಂಸೆ ಪಡೆದ ರೈತ ಮಹಿಳೆ
  • ನೂರಾರು ಮಹಿಳೆಯರಿಗೆ ಮಾದರಿಯಾದ ರತ್ನಮ್ಮ
Silk Farming: ರೇಷ್ಮೆ ಕೃಷಿಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ದೊಡ್ಡಬಳ್ಳಾಪುರ ಮಹಿಳೆ! title=
Inspirational Woman silk farming

ಚಿಕ್ಕಬಳ್ಳಾಪುರ: "ಸ್ತ್ರೀ ಸಮಾನಳಲ್ಲ, ಪುರುಷರಿಗಿಂತ ಸಮರ್ಥಳು" ಎಂದು ಹಲವರು ಹೇಳಿರುವುದನ್ನು ನೀವು ಕೇಳಿರಬಹುದು. ಅದಕ್ಕೆ ಉತ್ತಮ ನಿದರ್ಶನ ರೇಷ್ಮೆ ಕೃಷಿಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ದೊಡ್ಡಬಳ್ಳಾಪುರದ ಮಹಿಳೆ. ಇವರು ನೋಡಲು ಓರ್ವ ಸಾಮಾನ್ಯ ರೈತ ಮಹಿಳೆಯಂತೆ ಕಂಡರೂ, ಇವರ ಸಾಧನೆ ಎಲ್ಲರಿಗೂ ಮಾದರಿ. ಇಡೀ ರಾಜ್ಯದ ಮಹಿಳೆಯರಿಗೆ ಸ್ಪೂರ್ತಿ ತುಂಬುವಂತ ಸಾಧನೆ ಮಾಡಿರುವ ಈ ಮಹಿಳೆ ಯಾರು? ಅವರ ಸಾಧನೆ ಏನು ಎಂದು ತಿಳಿಯಲು ಈ ಸುದ್ದಿ ಓದಿ...

ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ರೇಷ್ಮೆ ನಗರಿ ಎಂದು ಕರೆಯಲಾಗುತ್ತದೆ. ಏಕೆಂದರೆ ಈ ಜಿಲ್ಲೆಯಲ್ಲಿ ಎಲ್ಲಾ ರೀತಿಯ ಕೆಲಸ ಮಾಡಿದರೂ, ರೇಷ್ಮೆಯಲ್ಲಿ ಹೆಚ್ಚಾಗಿ ಪ್ರಾಬಲ್ಯ ಹೊಂದಿದ್ದಾರೆ. ಇದೇ ಜಿಲ್ಲೆಯ  ದೊಡ್ಡಬಳ್ಳಾಪುರ ತಾಲ್ಲೂಕಿನ  ಗ್ರಾಮೀಣ ಭಾಗದಲ್ಲಿ ರೇಷ್ಮೆ  ಕೃಷಿ ಅಷ್ಟಕಷ್ಟೇ, ಆದರೆ ತಾಲೂಕಿನ  ಮಹಿಳೆಯೊಬ್ಬರು ರೇಷ್ಮೆ ಕೃಷಿಯಲ್ಲಿ (Silk Farming) ರಾಜ್ಯಕ್ಕೆ ಮೊದಲ ಸ್ಥಾನ  ಪಡೆಯುವ ಮೂಲಕ ತಾಲೂಕಿಗೆ ಗೌರವ ತಂದಿದ್ದಾರೆ. 

ತಾಲ್ಲೂಕಿನ ತೂಬಗೆರೆ ಹೋಬಳಿಯ ಸೀಗೆಹಳ್ಳಿ ಗ್ರಾಮದ ರತ್ನಮ್ಮ ರಾಮಯ್ಯ (Ratnamma Ramaiah) ಅವರಿಗೆ ಮಹಿಳಾ ವಿಭಾಗದ  ರೇಷ್ಮೆ ಕೃಷಿ ಸಾಧನೆ 2020-21ರ ಸಾಲಿನ ರಾಜ್ಯ ಮಟ್ಟದ ಪ್ರಥಮ ಸ್ಥಾನ ಬಂದಿದೆ. ಇದರ ಜೊತೆಗೆ ತಾಲೂಕಿನ ಮರಳೇನಹಳ್ಳಿ ಗ್ರಾಮದ ತಿಮ್ಮರಾಜು ರವರಿಗೆ  ಜಿಲ್ಲಾ ಮಟ್ಟದ ದ್ವಿತೀಯ ಸ್ಥಾನ ಬಂದಿದ್ದು, ಇಡೀ ತಾಲ್ಲೂಕಿನ ರೈತರು ಹೆಮ್ಮೆ ಪಡುವಂತೆ ಮಾಡಿದ್ದಾರೆ. 

ಇದನ್ನೂ ಓದಿ- International Women's Day 2022: ಭಾರತದಲ್ಲಿ ಎಲ್ಲಾ ಮಹಿಳೆಯರು ತಿಳಿದಿರಬೇಕಾದ 5 ನಾಗರಿಕ ಹಕ್ಕುಗಳು

ರತ್ನಮ್ಮ ರಾಮಯ್ಯನವರು (Ratnamma Ramaiah) ಕಳೆದ 25  ವರ್ಷದಿಂದ ರೇಷ್ಮೆ ಕೃಷಿ ಮಾಡುತ್ತಿದ್ದು, ಇವರ ಇಡೀ ಕುಟುಂಬ ರೇಷ್ಮೆ ಕೃಷಿಯಲ್ಲಿ  ತೊಡಗಿದೆ. ರೇಷ್ಮೆ ಇಲಾಖೆ ಅಧಿಕಾರಿಗಳ ಸಲಹೆ ಮತ್ತು ಮಾರ್ಗದರ್ಶನವನ್ನು ನೆನೆಯುವ ರತ್ನಮ್ಮ ಕುಟುಂಬ ತಮ್ಮ ರೇಷ್ಮೆ ಕೃಷಿಯ ಅನುಭವ ಹಂಚಿಕೊಂಡಿದ್ದಾರೆ. 10 ವರ್ಷಗಳ  ಹಿಂದೆ ಪ್ರತಿ ಕೆಜಿ ರೇಷ್ಮೆಗೆ 150ರಿಂದ 300 ರೂಪಾಯಿ ಧಾರಣೆ ಇತ್ತು. ಆದರೆ ಇಂದು ಪ್ರತಿ ಕೆಜಿಗೆ 700 ರಿಂದ 900 ಬೆಲೆ ಸಿಗುತ್ತಿದೆ. ರೇಷ್ಮೆ ಇಲಾಖೆಯ ನೆರವಿನಿಂದ   ಹಿಪ್ಪು ನೇರಳೆ ಬೆಳೆಯಲು ನರೇಗದಿಂದ ಸಹಾಯ ಧನ, ರೇಷ್ಮೆ ಹುಳು ಸಾಕಾಣಿಕೆ ಮನೆ ನಿರ್ಮಾಣಕ್ಕೆ ಸಹಾಯ ಧನ ಸಿಕ್ಕಿದೆ. ಇದರಿಂದ ವರ್ಷಕ್ಕೆ ಸುಮಾರು 11 ಬೆಳೆಗಳನ್ನು ಬೆಳೆಯುತ್ತಿದ್ದೇವೆ ಮತ್ತು ವರ್ಷಕ್ಕೆ 3.83 ಲಕ್ಷ ಲಾಭ ಬಂದಿದೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.

ರತ್ನಮ್ಮ  ರಾಮಯ್ಯರವರಿಗೆ ರಾಜ್ಯ ಮಟ್ಟದ ಪ್ರಥಮ ಸ್ಥಾನ ಬಂದಿರುವುದಕ್ಕೆ ದೊಡ್ಡಬಳ್ಳಾಪುರ ರೇಷ್ಮೆ ಇಲಾಖೆ ಮತ್ತು ಜಿಲ್ಲಾ ರೇಷ್ಮೆ ಇಲಾಖೆ ಹೆಮ್ಮೆ ಪಟ್ಟಿದ್ದು, 2020-21ನೇ ಸಾಲಿನಿಂದ ರೇಷ್ಮೆ ಬೆಳೆಗಾರರು ದೊಡ್ಡಬಳ್ಳಾಪುರದಲ್ಲಿ ಹೆಚ್ಚುತ್ತಿದ್ದು, ಪ್ರಸ್ತುತ ದೊಡ್ಡಬಳ್ಳಾಪುರ ತಾಲೂಕಿನ 35 ಹೆಕ್ಟೇರ್‌ನಲ್ಲಿ ರೇಷ್ಮೆ ಕೃಷಿ ಮಾಡುತ್ತಿದ್ದಾರೆ. ಹಿಪ್ಪು ನೇರಳೆ ಬೆಳೆಯಲು ನರೇಗದಲ್ಲಿ ಸಹಾಯ ಧನ, ಹುಳು ಸಾಕಾಣಿಕೆ ಸಲಕರಣೆ, ಹುಳು ಸಾಕಾಣಿಕೆ ಮನೆ ನಿರ್ಮಾಣಕ್ಕೂ ಇಲಾಖೆಯಿಂದ ಸಹಾಯಧನ ಕೊಡಲಾಗುತ್ತಿದೆ. ರೇಷ್ಮೆ ಬೆಳೆಯಿಂದ ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದ್ದು, ರೈತರು ರೇಷ್ಮೆ ಕೃಷಿಯಲ್ಲಿ ತೊಡಗಿಕೊಂಡು ಉತ್ತಮ‌ ಜೀವನಕ್ಕೆ ದಾರಿ ಮಾಡಿಕೊಳ್ಳಿ ಎಂದು ಮನವಿ ಮಾಡಿದರು.

ಇದನ್ನೂ ಓದಿ- WhatsApp ಸ್ಟಿಕ್ಕರ್‌ಗಳ ಮೂಲಕ ಮಹಿಳಾ ದಿನಾಚರಣೆಯ ಶುಭಾಶಯಗಳನ್ನು ಕಳುಹಿಸಿ

ಇನ್ನು ಇದೇ ವೇಳೇ ಮಾತನಾಡಿದ ರತ್ನಮ್ಮ ಪುತ್ರ ಮಂಜುನಾಥ್, ನಾವು ಮೊದಲಿನಿಂದಲೂ ಗ್ರಾಮದಲ್ಲಿ ಕೃಷಿ ಮಾಡಿಕೊಂಡು ಬಂದಿದ್ದೇವೆ. ನಮ್ಮ ತಾಯಿಯವರು ರೇಷ್ಮೆಯಲ್ಲಿ ಉತ್ತಮ ಸಾಧನೆ ಮಾಡಿರುವುದು ಹಾಗೂ ಅವರಿಗೆ ಪ್ರಶಸ್ತಿ ಬಂದಿರುವುದು ತುಂಬಾ ಖುಷಿಯಾಗುತ್ತದೆ ಎಂದರು.

ಒಟ್ಟಾರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಮರಳೇನಳ್ಳಿ ಗ್ರಾಮದ ರತ್ನಮ್ಮ ಗುಣಮಟ್ಟದ ರೇಷ್ಮೆಯನ್ನು ಮಾಡಿ ಉತ್ತಮ‌ ಆದಾಯ ಸಂಪಾದನೆ ಮಾಡುತ್ತಿದ್ದು, ಈ ಮಹಿಳೆಯನ್ನು ನೋಡಿ ಸಾಕಷ್ಟು ಮಹಿಳೆಯರು ರೇಷ್ಮೆ ಯನ್ನು ಮಾಡಲು ಮುಂದಾಗಿದ್ದು ಎಲ್ಲರಿಗೂ ಮಾದರಿಯಾಗಿರೋದು ಖುಷಿ ತಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News