ಬೆಂಗಳೂರು : ಪ್ರಸ್ತುತ, ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಕಲುಷಿತ ನೀರಿನಿಂದ ಜನರ ಕೂದಲು ಚಿಕ್ಕ ವಯಸ್ಸಿನಲ್ಲಿಯೇ ಬೆಳ್ಳಗಾಗಲು ಪ್ರಾರಂಭಿಸಿದೆ (White hair problem). ಈ ಸಮಸ್ಯೆಯ ಪರಿಹಾರವಾಗಿ ಸಾಮಾನ್ಯವಾಗಿ ಜನರು ಹಲವಾರು ವಿಧಾನಗಳನ್ನು ಅನುಸರಿಸುತ್ತಾರೆ. ಆದರೆ ಮನೆಯಲ್ಲಿಯೇ ಇರುವ ಸಾಮಾಗ್ರಿಗಳನ್ನು ಬಳಸಿಕೊಂಡು ಬಿಳಿ ಕೂದಲನ್ನು ಕಪ್ಪಾಗಿಸಬಹುದು (white hair problem sollution). ಶಾಂಪೂ ಜೊತೆ ಈ ವಸ್ತುಗಳನ್ನು ಮಿಶ್ರಣ ಮಾಡಿಕೊಳ್ಳುವುದರಿಂದ ಬಿಳಿ ಕೂದಲಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ಶಾಂಪೂ ಜೊತೆಗೆ ಗಿಡಮೂಲಿಕೆಗಳ ನೀರನ್ನು ಮಿಶ್ರಣ ಮಾಡಿ :
ಬೇಕಾಗುವ ವಸ್ತುಗಳು :
-2 ಟೀ ಸ್ಪೂನ್ ಚಹಾ ಪುಡಿ
- 2 ಟೀಸ್ಪೂನ್ ಮೆಂತ್ಯ ಬೀಜಗಳು
- 2 ಟೀಸ್ಪೂನ್ ಆಮ್ಲಾ ಪುಡಿ
ಇದನ್ನೂ ಓದಿ : Black Plum Health Benefits: ನಿತ್ಯ ನೇರಳೆ ಹಣ್ಣು ಸೇವನೆಯ 6 ಲಾಭಗಳು ಇಲ್ಲಿವೆ
ಈ ರೀತಿಯಲ್ಲಿ ಗಿಡಮೂಲಿಕೆಗಳ ನೀರನ್ನು ತಯಾರಿಸಿಕೊಳ್ಳಿ :
ಇದಕ್ಕಾಗಿ, ಒಂದು ಪಾತ್ರೆಯಲ್ಲಿ ಅರ್ಧ ಲೀಟರ್ ನೀರನ್ನು (water) ತೆಗೆದುಕೊಂಡು ಅದನ್ನು ಬಿಸಿ ಮಾಡಿ. ನೀರನ್ನು ಬಿಸಿ ಮಾಡಲು ಇಡುವಾಗ ಅದರಲ್ಲಿ ಮೇಲೆ ಹೇಳಿದ ಎಲ್ಲಾ ವಸ್ತುಗಳನ್ನು ಸೇರಿಸಿಕೊಳ್ಳಿ. ಈ ನೀರನ್ನು ಅರ್ಧದಷ್ಟಾಗುವವರೆಗೆ ಕುದಿಸಿ. ಈಗ ಈ ನೀರನ್ನು ತಣ್ಣಗಾಗಲು ಬಿಡಿ. ಅದು ತಣ್ಣಗಾದ ನಂತರ, ಅದನ್ನು ಫಿಲ್ಟರ್ ಮಾಡಿ ಮತ್ತು ಗಾಜಿನ ಅಥವಾ ಪ್ಲಾಸ್ಟಿಕ್ ಬಾಟಲಿಯಲ್ಲಿ ತುಂಬಿಸಿ ಫ್ರಿಜ್ ನಲ್ಲಿ ಇಡಿ (white hair problem sollution).
ಶಾಂಪೂ ಜೊತೆ ಹೇಗೆ ಬಳಸುವುದು?
ಕೂದಲು ತೊಳೆಯುವಾಗ ಶಾಂಪೂವನ್ನು (shampoo) ನೇರವಾಗಿ ಕೂದಲಿಗೆ ಹಚ್ಚಬೇಡಿ. ಅದನ್ನು ಒಂದು ಸಣ್ಣ ಬೌಲ್ ನಲ್ಲಿ ತೆಗೆದುಕೊಳ್ಳಿ. ಈಗ ಅದಕ್ಕೆ ಅರ್ಧ ಕಪ್ ತಯಾರಿಸಿಟ್ಟುಕೊಂಡ ಗಿಡಮೂಲಿಕೆಗಳ ನೀರನ್ನು ಸೇರಿಸಿ ಬಳಸಿ. ನಿಮ್ಮ ಕೂದಲನ್ನು ತೊಳೆಯುವಾಗ ವಾರಕ್ಕೆ 2-3 ಬಾರಿ ಶಾಂಪೂ ಜೊತೆ ಈ ನೀರನ್ನು ಬಳಸಿ. ಹೀಗೆ ಮಾಡುತ್ತಾ ಬಂದರೆ ಬಿಳಿ ಕೂದಲು ಕಪ್ಪಾಗುತ್ತದೆ.
ಇದನ್ನೂ ಓದಿ : Sugarcane Juice: ಬೇಸಿಗೆಯಲ್ಲಿ ಕಬ್ಬಿನ ರಸ ಸೇವನೆಯಿಂದ ಸಿಗುತ್ತೆ ಅದ್ಭುತ ಆರೋಗ್ಯ ಪ್ರಯೋಜನಗಳು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ