/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ಸ್ಯಾಂಡಲ್‌ವುಡ್‌ ಮೋಹಕ ತಾರೆ ರಮ್ಯಾ (Ramya) ಇತ್ತೀಚೆಗೆ ಒಮ್ಮಿಂದೊಮ್ಮೆಲೆ ಸಿನಿರಂಗದಲ್ಲಿ ಸಕ್ರಿಯರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ (Social Media) ನಟಿ ರಮ್ಯಾ ಒಂದಲ್ಲೊಂದು ರೀತಿ ಆಕ್ಟಿವ್‌ ಆಗಿರುತ್ತಾರೆ. ನಟಿ ರಮ್ಯಾ ಚಿತ್ರದಲ್ಲಿ ನಟಿಸುವುದನ್ನು ಬಿಟ್ಟು ಹಲವು ವರ್ಷಗಳೇ ಕಳೆದಿವೆ. ಆದರೆ ರಮ್ಯಾಗೆ ಇರುವ ಬೇಡಿಕೆ ಮಾತ್ರ ಒಂದಷ್ಟು ಕೂಡ ಕಡಿಮೆ ಆಗಿಲ್ಲ. 

ಇದನ್ನೂ ಓದಿ: Akatakata: ನಾಗರಾಜ್ ಸೋಮಯಾಜಿ ‘ಅಕಟಕಟ’ ಚಿತ್ರಕ್ಕೆ ಇವರೇ ನಾಯಕಿ!

ಚಿತ್ರರಂಗದಲ್ಲಿ ಕೂಡ ಹಲವರು ರಮ್ಯಾ ಅವರನ್ನು ಹಾಕಿಕೊಂಡು ಸಿನಿಮಾ ಮಾಡಲು ಕಾದು ಕುಳಿತಿದ್ದಾರೆ. ರಮ್ಯಾ ಕೂಡ ಇದಕ್ಕೆ ಪಾಸಿಟಿವ್‌ ಆಗಿಯೇ ಪ್ರತಿಕ್ರಿಯಿಸಿದ್ದು, ಸಿನಿಮಾದ ಕಥೆಗಳನ್ನು ಕೇಳುತ್ತಿರುವುದಾಗಿ ರಮ್ಯಾ ಹೇಳಿದ್ದರು.

ಇದೀಗ ಯುಗಾದಿ (Ugadi) ಹಬ್ಬದ ಪ್ರಯುಕ್ತ ನಟಿ ರಮ್ಯಾ ಟ್ವಿಟ್ಟರ್‌ನಲ್ಲಿ ಅಭಿಮಾನಿಗಳಿಗೆ ಒಂದು ಪ್ರಶ್ನೆ ಕೇಳಿದ್ದಾರೆ. ರಮ್ಯಾ ತಮ್ಮ ಫಾಲೋವರ್‌ಗಳಿಗೆ ಹೋಳಿಗೆ (Holige) ಬಗ್ಗೆ ಒಂದು ಸಿಹಿಯಾದ ಪ್ರಶ್ನೆ ಕೇಳಿದ್ದಾರೆ. ಈ ಪ್ರಶ್ನೆಗೆ ಕೇವಲ ಉತ್ತರ ಕೊಡುವುದಷ್ಟೇ ಅಲ್ಲಾ, ರಮ್ಯಾಗೂ ಜನ ಪ್ರಶ್ನೆ ಕೇಳಿದ್ದಾರೆ. 

ಯಾರಿಗೆ ಯಾವ ಹೋಳಿಗೆ ಇಷ್ಟ ಎಂದು ರಮ್ಯಾ ತಮ್ಮ ಅಭಿಮಾನಿಗಳಿಗೆ ಪ್ರಶ್ನಿಸಿದ್ದಾರೆ. ಅದಕ್ಕೆ ಅವರೇ ಆಪ್ಷನ್ ಕೊಟ್ಟಿದ್ದಾರೆ. ಕಾಯಿ ಹೋಳಿಗೆ ಮತ್ತು ಬೇಳೆ ಹೋಳಿಗೆ.. ಇದರಲ್ಲಿ ಯಾವ ಹೋಳಿಗೆ ನಿಮಗೆ ಇಷ್ಟ ಎಂದು ರಮ್ಯಾ ಪ್ರಶ್ನೆ ಮಾಡಿದ್ದಾರೆ. 

ಅಲ್ಲದೇ ರಮ್ಯಾ ತಮಗೆ ಯಾವ ಹೋಳಿಗೆ ಇಷ್ಟ ಎನ್ನುವ ಬಗ್ಗೆ ಕೂಡ ಹೇಳಿದ್ದಾರೆ. ರಮ್ಯಾಗೆ ಕಾಯಿ ಹೋಳಿಗೆ ಅಂದರೆ ಹೆಚ್ಚು ಇಷ್ಟವಂತೆ. ನಟಿ ರಮ್ಯಾ ಫ್ಯಾನ್ಸ್‌ (Ramya Fans) ಕೇಳಿದ ಪ್ರಶ್ನೆಗೆ ಹಲವರು ಕಾಮೆಂಟ್ಸ್‌ ಮೂಲಕ ಉತ್ತರ ಕೊಟ್ಟಿದ್ದಾರೆ.

ಇದನ್ನೂ ಓದಿ: Beast Trailer: ‘ಬೀಸ್ಟ್’ ಟ್ರೇಲರ್ ರಿಲೀಸ್! ‘ಕೆಜಿಎಫ್-2’ಗೆ ಸವಾಲ್ ಹಾಕೋದು ಗ್ಯಾರಂಟಿ?

ಇದಲ್ಲದೇ, ನಟಿ ರಮ್ಯಾ ಸಿನಿಮಾ ರಂಗಕ್ಕೆ ಕಮ್‌ ಬ್ಯಾಕ್‌ ಆಗುವುದು ಯಾವಾಗ? ಯಾವ ಚಿತ್ರದ ಮೂಲಕ ರಮ್ಯಾ ರೀ ಎಂಟ್ರಿ ಕೊಡ್ತಾರೆ? ಹೀಗೆ ಅನೇಕ ಪ್ರಶ್ನೆಗಳನ್ನು ಅಭಿಮಾನಿಗಳು ಕಾಮೆಂಟ್ಸ್‌ ಮೂಲಕ ಕೇಳಿದ್ದಾರೆ. ಈ ಎಲ್ಲ ಪ್ರಶ್ನೆಗಳಿಗೆ ರಮ್ಯಾ ಅವರ ಉತ್ತರವೇನು ಎಂಬುದನ್ನು ಮಾತ್ರ ಕಾದು ನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Section: 
English Title: 
Sandalwood Actress Ramya question to Fans
News Source: 
Home Title: 

Ramya:ಫ್ಯಾನ್ಸ್‌ಗೆ ನಟಿ ರಮ್ಯಾ ಕೇಳಿದ್ರು ಈ ಪ್ರಶ್ನೆ! ಏನಂದ್ರು ಅಭಿಮಾನಿಗಳು?

Ramya:ಫ್ಯಾನ್ಸ್‌ಗೆ ನಟಿ ರಮ್ಯಾ ಕೇಳಿದ್ರು ಈ ಪ್ರಶ್ನೆ! ಏನಂದ್ರು ಅಭಿಮಾನಿಗಳು?
Caption: 
ನಟಿ ರಮ್ಯಾ
Yes
Is Blog?: 
No
Tags: 
Facebook Instant Article: 
Yes
Highlights: 

ಸ್ಯಾಂಡಲ್‌ವುಡ್‌ ಮೋಹಕ ತಾರೆ ರಮ್ಯಾ

ಫ್ಯಾನ್ಸ್‌ಗೆ ನಟಿ ರಮ್ಯಾ ಕೇಳಿದ್ರು ಈ ಪ್ರಶ್ನೆ! 

ನಟಿ ರಮ್ಯಾಗೆ ‘ಕಾಯಿ ಹೋಳಿ’ಗೆ ಇಷ್ಟವಂತೆ

ನಿಮಗೆ ಏನಿಷ್ಟ ಅಂತ ಕೇಳಿದ್ದಾರೆ ಹೇಳಿ..! 

Mobile Title: 
Ramya:ಫ್ಯಾನ್ಸ್‌ಗೆ ನಟಿ ರಮ್ಯಾ ಕೇಳಿದ್ರು ಈ ಪ್ರಶ್ನೆ! ಏನಂದ್ರು ಅಭಿಮಾನಿಗಳು?
Chetana Devarmani
Publish Later: 
No
Publish At: 
Sunday, April 3, 2022 - 15:39
Created By: 
Chethana Devarmani
Updated By: 
Chethana Devarmani
Published By: 
Chethana Devarmani
Request Count: 
2
Is Breaking News: 
No