ಬೆಂಗಳೂರು: ಬೇರೆ ರಾಜ್ಯ ಹಾಗೂ ವಿದೇಶಗಳಲ್ಲಿ ಹೊಸ ಕೋವಿಡ್ ತಳಿಯ ಉಪಟಳ ಹೆಚ್ಚಳ ಆಗ್ತಿರೋದ್ರಿಂದ ಆರೋಗ್ಯ ಸಚಿವ ಕೆ.ಸುಧಾಕರ್ ಸೋಮವಾರ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿದರು. ಬಳಿಕ ಮಾತನಾಡಿದ ಅವರು, 8 ದೇಶಗಳಲ್ಲಿ ಕೋವಿಡ್ 4ನೇ ಅಲೆ ಆರಂಭವಾಗಿದ್ದು, ಕೋವಿಡ್ ಹೊಸ ಪ್ರಬೇಧ XE ಹಾಗೂ ME ಪತ್ತೆಯಾಗ್ತಿದೆ. ನಮ್ಮ ದೇಶದ ದೆಹಲಿ ಹಾಗೂ ಹರಿಯಾಣದಲ್ಲೂ ಹೆಚ್ಚಾಗುತ್ತಿದೆ. ಹೀಗಾಗಿ ತುರ್ತು ಸಭೆ ನಡೆಸಲಾಗಿದೆ ಎಂದರು.
ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾವಹಿಸಲು ಟೆಲಿಮಾನಿಟರಿಂಗ್ ವ್ಯವಸ್ಥೆ ಆರಂಭಿಸಲಾಗುವುದು. ಲಸಿಕೆ ಹಾಕದ ಮಕ್ಕಳಿಗೆ ಸುಮಾರು 5 ಸಾವಿರ ಜನಕ್ಕೆ ರಾಜ್ಯದಾದ್ಯಂತ ಕೋವಿಡ್ ಟೆಸ್ಟ್ ಮಾಡಿಸಲು ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಿದೆ ಎಂದು ಹೇಳಿದರು.
ಇದನ್ನೂ ಓದಿ: ಅತೀಹೆಚ್ಚು ಸುಳ್ಳು ಹೇಳಿದ ಬಿಜೆಪಿ ಹಾಲಿ ಶಾಸಕರಿಗೆಲ್ಲರಿಗೂ ಟಿಕೆಟ್ ಖಚಿತ: ಸಿದ್ದರಾಮಯ್ಯ
ಜೂನ್-ಜುಲೈನಲ್ಲಿ 4ನೇ ಅಲೆ!
ವಿಶ್ವದಾದ್ಯಂತ ಕೆಲವು ದೇಶಗಳಲ್ಲಿ ಮತ್ತು ನಮ್ಮ ದೇಶದ ಇತರೆ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳ ಕಂಡು ಬಂದಿರುವ ಹಿನ್ನೆಲೆಯಲ್ಲಿ ಆರೋಗ್ಯ ಸೌಧದಲ್ಲಿ ಇಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಲಾಯಿತು.@CMofKarnataka @BSBommai@DHFWKA
1/4 pic.twitter.com/Is8bHF2UrS
— Dr Sudhakar K (@mla_sudhakar) April 11, 2022
ಈ ವರ್ಷ ಜೂನ್-ಜುಲೈ ತಿಂಗಳಿನಲ್ಲಿ ಕೋವಿಡ್ 4ನೇ ಅಲೆ ಆರಂಭವಾಗಬಹುದೆಂದು ಐಐಟಿ ಕಾನ್ಪುರ ಈಗಾಗಲೇ ಅಭಿಪ್ರಾಯ ನೀಡಿದೆ. ಹೀಗಾಗಿ ಮಾಸ್ಕ್ ನಿಯಮ ಮತ್ತೆ ಕಟ್ಟುನಿಟ್ಟಾಗಿ ಪಾಲಿಸಬೇಕಾಗುವ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನಿರ್ಲಕ್ಷ್ಯ ಬೇಡ
60 ವರ್ಷ ಮೇಲ್ಪಟ್ಟವರ ಪೈಕಿ ಹೆಚ್ಚಿನವರು 3ನೇ ಡೋಸ್ ಪಡೆದಿಲ್ಲ. ಶೇ.51ರಷ್ಟು ಜನರು ಬಾಕಿ ಇದ್ದಾರೆ. 2ನೇ ಡೋಸ್ ಲಸಿಕೆಯನ್ನೂ ಶೇ.2ರಷ್ಟು ಜನ ಹಾಕಿಸಿಕೊಂಡಿಲ್ಲ. ಶೇ.98ರಷ್ಟು ಮಾತ್ರ 2ನೇ ಡೋಸ್ ಲಸಿಕೆ ನೀಡಲಾಗಿದೆ. ಮೊದಲನೇ ಡೋಸ್ 4,97,00,000 ಜನ ಪಡೆದುಕೊಂಡಿದ್ದರೆ, 2ನೇ ಡೋಸ್ 4,77,00,000 ಮಾತ್ರ ಆಗಿದೆ. ಇನ್ನೂ 32 ಲಕ್ಷ ಜನರು ಡೋಸ್ 2ನೇ ಲಸಿಕೆಯನ್ನೇ ಪಡೆದಿಲ್ಲ. ಏಕೆ ಈ ಉದಾಸೀನತೆ, 4ನೇ ಅಲೆ ಗಂಭೀರವಾದರೆ ಸರ್ಕಾರವನ್ನು ಹೊಣೆ ಮಾಡುತ್ತೀರಾ ಎಂದು ಇದೇ ವೇಳೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಚಂದ್ರು ಹತ್ಯೆ ಪ್ರಕರಣ: ಗೃಹ ಸಚಿವ ‘ಅರ್ಧ ಜ್ಞಾನೇಂದ್ರ’ ಎಂದ ಮೊಹಮ್ಮದ್ ನಲಪಾಡ್!
ಮಕ್ಕಳಲ್ಲೂ 15ರಿಂದ 17 ವರ್ಷದವರಿಗೆ ಶೇ.79ರಷ್ಟು ಮಾತ್ರ ಆಗಿದೆ. 20 ಲಕ್ಷ ಮಕ್ಕಳು ಮೊದಲ ಡೋಸ್ ಲಸಿಕೆ ಪಡೆದಿಲ್ಲ. 2ನೇ ಡೋಸ್ ಶೇ.65ರಷ್ಟು ಮಾತ್ರ ಆಗಿದೆ. 12ರಿಂದ 14 ವರ್ಷದ ಮಕ್ಕಳು 20 ಲಕ್ಷದ ಪೈಕಿ 13,9600 ಅಂದರೆ ಶೇ.61ರಷ್ಟು ಮಾತ್ರ ಆಗಿದ್ದು, ಆದಷ್ಟು ಬೇಗ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಹೇಳಿದರು.
ಹೊಸ ಪ್ರಬೇಧದ ಪತ್ತೆ ಹೇಗೆ?
ಕೋವಿಡ್ ಹೊಸ ಪ್ರಬೇಧ ದಕ್ಷಿಣ ಕೊರಿಯಾ, ಹಾಂಕಾಂಗ್, ಕೊರಿಯಾ, ಜರ್ಮನಿ, ಚೀನಾ ಸೇರಿದಂತೆ 8 ದೇಶಗಳಲ್ಲಿ ಹೆಚ್ಚಾಗುತ್ತಿದೆ. ಇಲ್ಲಿಂದ ಬರುವವರಿಗೆ ಮಾರ್ಗಸೂಚಿ ಹೊರಡಿಸುತ್ತೇವೆ. ರಾಜ್ಯದಲ್ಲಿ ಪ್ರತಿದಿನ 50 ಪ್ರಕರಣ ಮಾತ್ರ ಕಂಡುಬರುತ್ತಿದ್ದು, ಕೆಲವು 10-12 ಪ್ರಕರಣದ ಜೀನೋಮ್ ಸೀಕ್ವೆನ್ಸ್ ನಡೆಸಲಾಗ್ತಿದೆ. ಈ ಮೂಲಕ ಹೊಸ ಪ್ರಬೇಧ ಪತ್ತೆ ಬಗ್ಗೆ ಗಮನಿಸಲಾಗುವುದು. ನಿನ್ನೆಯಿಂದ 18 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ಆರಂಭವಾಗಿದ್ದು, ಸಾಕಷ್ಟು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಲಭ್ಯವಾಗ್ತಿಲ್ಲ. ಈ ಬಗ್ಗೆ ಗಮನಿಸಲಾಗುವುದು ಎಂದರು.
ಖಾಸಗಿ ಆಸ್ಪತ್ರೆಗಳಿಂದ ಹೆಚ್ಚು ಹಣ ಸುಲಿಗೆ
ಇನ್ನು ಖಾಸಗಿ ಆಸ್ಪತ್ರೆಗಳು ಕೋವಿಡ್ ಸಮಯದಷ್ಟೇ ಅಲ್ಲದೆ ಉಳಿದ ಸಮಯದಲ್ಲೂ ನಿಗದಿಗಿಂತ ಅಧಿಕ ದರ ವಸೂಲಿ ಮಾಡಿದರೆ ಲೈಸೆನ್ಸ್ ರದ್ದು ಮಾಡಬೇಕಾಗ್ತದೆ ಎಂದು ಇದೇ ವೇಳೆ ಸಚಿವ ಖಡಕ್ ಎಚ್ಚರಿಕೆ ನೀಡಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.