Disadvantages of Drinking cold water after Workout For Health: ವ್ಯಾಯಾಮದ ನಂತರ ನೀವೂ ಕೂಡ ತಣ್ಣೀರು ಕುಡಿಯುತ್ತೀರಾ? ಒಂದು ವೇಳೆ ನಿಮ್ಮ ಉತ್ತರ ಹೌದು ಎಂದಾದಲ್ಲಿ ಅದನ್ನು ತಕ್ಷಣವೇ ನಿಲ್ಲಿಸಿ, ಏಕೆಂದರೆ ಈ ಮೂಲಕ ನೀವು ಅನೇಕ ರೀತಿಯ ರೋಗಗಳಿಗೆ ಆಹ್ವಾನವನ್ನು ನೀಡುತ್ತಿರುವಿರಿ ಎಂದರ್ಥ. ಇದು ಹೃದಯಾಘಾತದಿಂದ ಹಿಡಿದು ತೂಕ ಹೆಚ್ಚಾಗುವವರೆಗೆ ಕಾಯಿಲೆಗಳು ಇದರಲ್ಲಿ ಶಾಮೀಲಾಗಿವೆ. ವ್ಯಾಯಾಮದ ನಂತರ ತಣ್ಣೀರು ಕುಡಿಯಬಾರದು ಎಂದು ತಜ್ಞರು ಸಲಹೆ ನೀಡಲು ಕೂಡ ಇದೇ ಕಾರಣ. ಇದನ್ನು ಹೊರತುಪಡಿಸಿ, ಬೇರೆ ಯಾವ ಸಮಸ್ಯೆಗಳು ಎದುರಾಗಬಹುದು ತಿಳಿದುಕೊಳ್ಳೋಣ ಬನ್ನಿ,
ತಣ್ಣೀರು ಏಕೆ ಕುಡಿಯಬಾರದು?
ವಾಸ್ತವದಲ್ಲಿ, ವರ್ಕೌಟ್ ಮಾಡಿದ ನಂತರ, ನಿಮ್ಮ ದೇಹವು ಸಾಮಾನ್ಯವಾಗಿ ಬಿಸಿಯಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ತಣ್ಣೀರನ್ನು (Cold Water) ಕುಡಿದಾಗ, ಅದು ಇದ್ದಕ್ಕಿದ್ದಂತೆ ನಿಮ್ಮ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ, ಇದು ನಿಮ್ಮ ವ್ಯಾಯಾಮದ ಕಠಿಣ ಪರಿಶ್ರಮವನ್ನು ಹಾಳುಮಾಡುತ್ತದೆ. ಇದರೊಂದಿಗೆ, ನಿಮಗೆ ಶೀತ-ಕಾವಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.
ಹೃದಯ ಬಡಿತದ ಮೇಲೆ ಪರಿಣಾಮ
ಇದಲ್ಲದೆ, ವ್ಯಾಯಾಮದ ನಂತರ ತಣ್ಣೀರು ಕುಡಿಯುವುದರಿಂದ ಹೃದಯ ಬಡಿತದ ಮೇಲೆ ಪರಿಣಾಮ ಉಂಟಾಗುತ್ತದೆ. ವಾಸ್ತವದಲ್ಲಿ, ತಾಲೀಮು ಸಮಯದಲ್ಲಿ, ನಮ್ಮ ರಕ್ತನಾಳಗಳಲ್ಲಿ ತ್ವರಿತ ರಕ್ತ ಸಂಚಾರ ಇರುತ್ತದೆ. ಹೀಗಿರುವಾಗ ನೀವು ಹಠಾತ್ತನೆ ತಣ್ಣೀರನ್ನು ಕುಡಿಯುವುದರಿಂದ, ಅದು ನಿಮ್ಮ ನರಗಳನ್ನು ತ್ವರಿತವಾಗಿ ತಂಪಾಗಿಸುತ್ತದೆ.
ತಲೆನೋವು ಸಮಸ್ಯೆ ಎದುರಾಗಬಹುದು
ವ್ಯಾಯಾಮದ ನಂತರ ನೀವು ತಣ್ಣೀರು ಕುಡಿದ ತಕ್ಷಣ, ನಿಮಗೆ ತಲೆನೋವು ಕೂಡ ಸಂಭವಿಸಬಹುದು. ಸೈನಸ್ ರೋಗಿಗಳು ತಣ್ಣೀರು ಕುಡಿಯಲೇಬಾರದು. ಏಕೆಂದರೆ ಇದು ನಿಮ್ಮ ತೊಂದರೆಯನ್ನು ಹೆಚ್ಚಿಸಬಹುದು.
ಇದನ್ನೂ ಓದಿ-InspectIR: ಈ ಡಿವೈಸ್ ಮೂಲಕ ಕೇವಲ ಮೂರೇ ನಿಮಿಷಗಳಲ್ಲಿ ಉಸಿರಾಟದ ಮೂಲಕ ಕೊರೊನಾ ಟೆಸ್ಟ್ ನಡೆಸಿ
ಜೀರ್ಣಕ್ರಿಯೆಯ ಮೇಲೂ ಪರಿಣಾಮ ಬೀರಬಹುದು
ಇದಲ್ಲದೆ, ನಿಮ್ಮ ಜೀರ್ಣಕ್ರಿಯೆಯು ಸಹ ಇದರ ಪರಿಣಾಮಕ್ಕೆ ಒಳಗಾಗುವ ಸಾಧ್ಯತೆ ಇದೆ. ಭಾರೀ ವರ್ಕ್ ಔಟ್ ಬಳಿಕ ಇದ್ದಕ್ಕಿದ್ದಂತೆ ತಣ್ಣೀರು ಕುಡಿಯುವುದು ನಿಮ್ಮ ದೇಹದಲ್ಲಿ ಶೀತ-ಬಿಸಿ ಸ್ಥಿತಿಯನ್ನು ಉಂಟುಮಾಡುವ ಸಾಧ್ಯತೆಯಿದೆ, ಇದರಿಂದಾಗಿ ನೀವು ಹೊಟ್ಟೆ ನೋವು, ಸೆಳೆತ ಮತ್ತು ಅಜೀರ್ಣ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಇದನ್ನೂ ಓದಿ-Blood Pressure Control Tips: ಬೆಳಗಿನ ಉಪಹಾರದಲ್ಲಿ ಇವುಗಳನ್ನು ಶಾಮೀಲುಗೊಳಿಸಿ, BP ನಿಯಂತ್ರಣದಲ್ಲಿರುತ್ತದೆ
(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ, ಮನೆಮದ್ದು ಹಾಗೂ ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
ಇದನ್ನೂ ನೋಡಿ -
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.