Make Calls without Network: ಇಂದಿನ ಕಾಲದಲ್ಲಿ ಕೈಯಲ್ಲಿ ಮೊಬೈಲ್ ಇಲ್ಲದೆ ಇರುವ ವ್ಯಕ್ತಿಯೇ ಇಲ್ಲ. ಎಲ್ಲಿ ಹೋದರೂ ಕೂಡ ನಮ್ಮ ಫೋನ್ ನಮ್ಮೊಂದಿಗೆ ಇರುತ್ತದೆ ಮತ್ತು ಹಲವು ರೀತಿಯಲ್ಲಿ ನಾವು ಅದನ್ನು ಅವಲಂಭಿಸಿದ್ದೇವೆ. ನಮ್ಮ ಸ್ಮಾರ್ಟ್ಫೋನ್ ಮೂಲಕ ನಾವು ಹಲವು ಕೆಲಸಗಳನ್ನು ಮಾಡಬಹುದು. ಆದರೆ, ಅದರಲ್ಲೂ ಪ್ರಮುಖವಾಗಿ ಕರೆ ಮಾಡಿ ಸಂಪರ್ಕದಲ್ಲಿರಲು ನಾವು ಅದನ್ನು ಹೆಚ್ಚಾಗಿ ಬಳಸುತ್ತೇವೆ. ನೆಟ್ವರ್ಕ್ ಇಲ್ಲದ ಸ್ಥಳಗಳನ್ನು ಹೊರತುಪಡಿಸಿ ಎಲ್ಲಿಂದ ಬೇಕಾದರೂ ಕೂಡ ನೀವು ನಿಮ್ಮ ಸ್ಮಾರ್ಟ್ಫೋನ್ ಮೂಲಕ ಕರೆಗಳನ್ನು ಮಾಡಬಹುದು. ಆದರೆ, ನೆಟ್ವರ್ಕ್ ಇಲ್ಲದೆ ಇರುವ ಸ್ಥಳದಿಂದ ಹೇಗೆ ಕರೆ ಮಾಡಬೇಕು ಎಂಬುದರ ಕುರಿತು ಇಂದು ನಾವು ನಿಮಗೆ ಟ್ರಿಕ್ ವೊಂದನ್ನು ಹೇಳಲಿದ್ದೇವೆ.
ನೆಟ್ವರ್ಕ್ ಇಲ್ಲದಿದ್ದರೂ ಫೋನ್ ಕರೆಗಳನ್ನು ಮಾಡಿ
ನೆಟ್ವರ್ಕ್ ಇಲ್ಲದೆ ಫೋನ್ ಕರೆಗಳನ್ನು ಮಾಡುವುದು ಹೇಗೆ? ಎಂದು ನೀವೂ ಕೂಡ ಯೋಚಿಸುತ್ತಿರಬಹುದು, VoWiFi ಕರೆ ಸೇವೆ ಬಳಸಿ ನೀವು ಈ ಕೆಲಸ ಮಾಡಬಹುದು, ಈ ಸೇವೆಯನ್ನು ದೇಶದ ಎಲ್ಲಾ ಪ್ರಮುಖ ಟೆಲಿಕಾಂ ಕಂಪನಿಗಳು ಒದಗಿಸುತ್ತಿವೆ ಮತ್ತು ನೀವು ಯಾವುದೇ ತೊಂದರೆಯಿಲ್ಲದೆ ನಿಮ್ಮ Android ಸ್ಮಾರ್ಟ್ಫೋನ್ ಮತ್ತು ಐಫೋನ್ನಲ್ಲಿ ಇದನ್ನು ಸಕ್ರಿಯಗೊಳಿಸಬಹುದು. ನೆಟ್ವರ್ಕ್ ಇಲ್ಲದೆ, ಈ ಸೇವೆಯ ಮೂಲಕ ಫೋನ್ ಕರೆಗಳನ್ನು ಮಾಡಲು ನಿಮ್ಮ ಫೋನ್ ನಲ್ಲಿ ವೈಫೈ ಸಕ್ರಿಯವಾಗಿರಬೇಕು, ಏಕೆಂದರೆ ವೈಫೈ ಇಲ್ಲದೆ ನೀವು ಈ ಸೇವೆಯನ್ನು ಬಳಸಲು ಸಾಧ್ಯವಿಲ್ಲ.
ಇದನ್ನೂ ಓದಿ-WhatsAppನ ಈ ವೈಶಿಷ್ಟ್ಯ ಬಳಸಲು ಬಳಕೆದಾರರು ಶುಲ್ಕ ಪಾವತಿಸಬೇಕು, ಸಿಗಲಿವೆ ಸಾಕಷ್ಟು ಸೌಲಭ್ಯಗಳು
ಆಂಡ್ರಾಯ್ಡ್ ಸ್ಮಾರ್ಟ್ಫೋನ್ನಲ್ಲಿ VoWiFi ಸೇವೆಯನ್ನು ಬಳಸುವುದು ಹೇಗೆ?
ನೀವು ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಬಳಕೆದಾರರಾಗಿದ್ದರೆ ಮತ್ತು ನೀವು ಇರುವಲ್ಲಿ ನೆಟ್ವರ್ಕ್ ಬರುತ್ತಿಲ್ಲ ಎಂದಾದರೆ ಗಾಬರಿ ಪಡಬೇಕಾದ ಅವಶ್ಯಕತೆ ಇಲ್ಲ.. ಮೊದಲನೆಯದಾಗಿ, ನಿಮ್ಮ ಫೋನ್ನ ಸೆಟ್ಟಿಂಗ್ಗಳಿಗೆ ಹೋಗಿ, 'ಸಿಮ್ ಮತ್ತು ನೆಟ್ವರ್ಕ್' ವಿಭಾಗದಲ್ಲಿರುವ 'ಸಿಮ್' ಆಯ್ಕೆಯನ್ನು ಮೊದಲು ಕ್ಲಿಕ್ ಮಾಡಿ. ನಂತರ ಅದರಲ್ಲಿ ನೀವು 'ವೈಫೈ ಕಾಲಿಂಗ್' ಆಯ್ಕೆಯನ್ನು ನೋಡಬಹುದು, ಅದನ್ನು ಸಕ್ರಿಯಗೊಳಿಸಿ. ಇದರ ನಂತರ ನೀವು ನೆಟ್ವರ್ಕ್ ಇಲ್ಲದೆ ಯಾರಿಗೆ ಬೇಕಾದರೂ ಕೂಡ ಸುಲಭವಾಗಿ ಕರೆ ಮಾಡಬಹುದು.
ಇದನ್ನೂ ಓದಿ-Facebook: ಶೀಘ್ರದಲ್ಲಿಯೇ ಫೇಸ್ ಬುಕ್ ನಲ್ಲಿ ಶಾರ್ಟ್ ಫಾರ್ಮ್ ಸೌಂಡ್ ಬೈಟ್ಸ್ ಹಾಗೂ ಪಾಡಕಾಸ್ಟ್ ಗಳು ಬರಲಿವೆ !
ಐಫೋನ್ ಬಳಕೆದಾರರು ನೆಟ್ವರ್ಕ್ ಇಲ್ಲದೆಯೇ ಯಾವ ರೀತಿ ಕರೆಗಳನ್ನು ಮಾಡಬಹುದು?
ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಬಳಕೆದಾರರಂತೆ, ಐಫೋನ್ ಬಳಕೆದಾರರು ಕೂಡ VoWiFi ಸೇವೆಯ ಮೂಲಕ ನೆಟ್ವರ್ಕ್ ಇಲ್ಲದೆ ಇರುವ ಪ್ರದೇಶಗಳಿಂದ ಸುಲಭವಾಗಿ ಫೋನ್ ಕರೆಗಳನ್ನು ಮಾಡಬಹುದು. ಐಫೋನ್ ಬಳಕೆದಾರರು ಈ ಸೇವೆಯನ್ನು ಸಕ್ರಿಯಗೊಳಿಸಲು, ಮೊದಲು ನಿಮ್ಮ ಐಫೋನ್ನ ಸೆಟ್ಟಿಂಗ್ಗಳಿಗೆ ಹೋಗಿ, 'ಮೊಬೈಲ್ ಡೇಟಾ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ಅಲ್ಲಿ ನಿಮಗೆ 'ವೈಫೈ ಕಾಲಿಂಗ್' ಆಯ್ಕೆ ಸಿಗಲಿದೆ, ಅದನ್ನು ಆಯ್ಕೆ ಮಾಡಿ. ನಂತರ 'ವೈ-ಫೈ ಕಾಲಿಂಗ್ ಆನ್ ದಿಸ್ ಫೋನ್' ಅನ್ನು ಆಯ್ಕೆ ಮಾಡಿ ಅಷ್ಟೇ. ಈಗ ನೀವು ನಿಮ್ಮ ಐಫೋನ್ ಮೂಲಕ ಕೂಡ ನೆಟ್ವರ್ಕ್ ಇಲ್ಲದೆಯೇ ಕಾಲ್ ಮಾಡಬಹುದು.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.