Types of Cheaters: ನೀವೂ ವಂಚನೆಗೆ ಬಲಿಯಾಗಿದ್ದೀರಾ? ಈ ರೀತಿ ವಂಚಕರನ್ನು ಗುರುತಿಸಿ

ನೀವು ಜೀವನದಲ್ಲಿ ಎನಾದರೂ ಸಾಧನೆ ಮಾಡಲು ಬಯಸಿದರೆ ಮೋಸಗಾರರಿಂದ ಆದಷ್ಟು ದೂರವಿರಬೇಕು. ನಿಮ್ಮ ವಿಶ್ವಾಸಿಗಳಾಗುವ ಮೂಲಕ ಅನೇಕ ಜನರು ನಿಮಗೆ ಗೊತ್ತಿಲ್ಲದಂತೆಯೇ ಮೋಸ ಮಾಡುತ್ತಾರೆ. ಇದು ನಿಮಗೆ ಸಾಕಷ್ಟು ಹಾನಿ ಉಂಟುಮಾಡಬಹುದು. ಹೀಗಾಗಿ ಇಂತಹ ಮೋಸಗಾರರನ್ನು ಗುರುತಿಸುವುದು ಬಹಳ ಮುಖ್ಯ.

Written by - Puttaraj K Alur | Last Updated : May 15, 2022, 08:48 AM IST
  • ಜಗತ್ತಿನಲ್ಲಿ ಅನೇಕರು ನಮಗೆ ಗೊತ್ತಿಲ್ಲದಂತೆಯೇ ಮೋಸ ಮಾಡುತ್ತಾರೆ
  • ಪರಿಚಿತರಿಂದ ಮೋಸ ಹೋದರೆ ನಮ್ಮ ಮನಸ್ಸಿಗೆ ತುಂಬಾ ಬೇಸರವಾಗುತ್ತದೆ
  • ಜೀವನದಲ್ಲಿ ಏನಾದರೂ ಸಾಧಿಸಲು ಬಯಸಿದರೆ ಮೋಸಗಾರರಿಂದ ದೂರವಿರಬೇಕು
Types of Cheaters: ನೀವೂ ವಂಚನೆಗೆ ಬಲಿಯಾಗಿದ್ದೀರಾ? ಈ ರೀತಿ ವಂಚಕರನ್ನು ಗುರುತಿಸಿ  title=
ಮೋಸಗಾರರಿಂದ ದೂರವಿರಬೇಕು

ನವದೆಹಲಿ: ಜೀವನದಲ್ಲಿ ನಾವು ಅನೇಕ ಜನರನ್ನು ಭೇಟಿಯಾಗುತ್ತೇವೆ. ಯಾವುದೋ ಒಂದು ಹಂತದಲ್ಲಿ ಕೆಲವರಿಂದ ನಾವು ಮೋಸ ಹೋಗುತ್ತೇವೆ. ಹೀಗಾಗಿ ವಂಚಕ ಜನರೊಂದಿಗೆ ಜಾಗರೂಕರಾಗಿರಬೇಕು. ವಿಶೇಷವೆಂದರೆ ಈ ಜನರನ್ನು ಗುರುತಿಸುವುದು ತುಂಬಾ ಕಷ್ಟ. ಮೋಸಗಾರನ ಬಗ್ಗೆ ಸತ್ಯ ಗೊತ್ತಾದಾಗ ನಾವು ತುಂಬಾ ಬೇಸರಪಟ್ಟುಕೊಳ್ಳುತ್ತೇವೆ. ಯಾರು ಯಾರಿಗೆ ಯಾವಾಗ ಹೇಗೆ ಮೋಸ ಮಾಡುತ್ತಾರೆ ಅನ್ನೋದರ ಬಗ್ಗೆ ನಾವು ಊಹಿಸಲು ಸಾಧ್ಯವಿಲ್ಲ. ಜಗತ್ತಿನಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಮೋಸ ಹೋಗಿರುತ್ತಾರೆ.

‘ಈ ಜಗತ್ತಿನಲ್ಲಿ ಮೋಸ ಹೋಗುವವರು ಎಲ್ಲಿವರೆಗೆ ಇರುತ್ತಾರೋ, ಅಲ್ಲಿವರೆಗೆ ಮೋಸ ಮಾಡುವವರು ಇರುತ್ತಾರೆ’ ಅನ್ನೋ ಗಾದೆ ಮಾತೇ ಇದೆ. ಕೆಲವರು ತಮ್ಮ ಸಂಗಾತಿಗೆ ಗೊತ್ತಿಲ್ಲದೆ ಮೋಸ ಮಾಡುತ್ತಾರೆ, ಕೆಲವರು ಉದ್ದೇಶಪೂರ್ವಕವಾಗಿಯೇ ಮೋಸ ಮಾಡುತ್ತಾರೆ. ಇಂತಹವರನ್ನು ಎಂದಿಗೂ ನಂಬಬೇಡಿ. ಇಂದು ನಾವು ನಿಮಗೆ ಅಂತಹ 5 ವಂಚಕರ ಬಗ್ಗೆ ಹೇಳುತ್ತಿದ್ದೇವೆ. ಇವರು ಯಾವ ರೀತಿಯಲ್ಲಿ ಮೋಸ ಮಾಡುತ್ತಾರೆ ಅನ್ನೋದರ ಬಗ್ಗೆ ನೀವು ಇಲ್ಲಿ ತಿಳಿದುಕೊಳ್ಳಬಹುದು.

ಇದನ್ನೂ ಓದಿ: ನಿವಾರ ಮಾಡುವ ಈ ತಪ್ಪಿನಿಂದ ಶನಿದೇವನ ಕೋಪಕ್ಕೆ ಪಾತ್ರವಾಗಬೇಕಾಗುತ್ತದೆ

ಇಂತಹ ಜನರು ನಿಮಗೆ ವಂಚಿಸಬಹುದು!

1. ಕೆಲವರು ಬೇಟೆಗಾರರಂತೆ ಇರುತ್ತಾರೆ. ಇಂತಹ ವಂಚಕರು ಸಕ್ರಿಯವಾಗಿ ಜನರೊಂದಿಗೆ ಸಂಪರ್ಕ ಸಾಧಿಸಲು ನೋಡುತ್ತಿರುತ್ತಾರೆ. ಸಂಬಂಧದ ವಿಷಯದಲ್ಲಿ ಇಂತಹ ಜನರು ಸಾಧ್ಯವಾದಷ್ಟು ಬೇಗ ಅನ್ಯೋನ್ಯವಾಗಲು ಪ್ರಯತ್ನಿಸುತ್ತಾರೆ. ಇವರು ಯಾರನ್ನೂ ಪ್ರೀತಿಸುವುದಿಲ್ಲ ಆದರೆ, ತಮ್ಮ ಅಗತ್ಯಗಳನ್ನು ಪೂರೈಸಲು ಜನರನ್ನು ಬಳಸಿಕೊಳ್ಳುತ್ತಾರೆ. ಇಂತಹ ಜನರು ನಿಮ್ಮ ಜೀವನದ ಜೊತೆಗೆ ಚೆಲ್ಲಾಟವಾಡುತ್ತಾರೆ. ಇವರು ಸದಾ ಅಲ್ಲೊಂದು ಇಲ್ಲೊಂದು ಬೇಟೆಯನ್ನು ಹುಡುಕುತ್ತಲೇ ಇರುತ್ತವೆ.

2. ಕೆಲವರು ತುಂಬಾ ಸರಳ ಮತ್ತು ಒಳ್ಳೆಯ ಸ್ವಭಾವದವರಾಗಿ ಕಾಣುತ್ತಾರೆ. ಆದರೆ, ಇವರ ನಿಜವಾದ ರೂಪ ಬೇರೆಯೇ ಇರುತ್ತದೆ. ಈ ರೀತಿಯ ಮೋಸಗಾರರು ಅವರು ವಂಚಿಸಲು ಉದ್ದೇಶಿಸಿರುವ ವ್ಯಕ್ತಿಯನ್ನು ಹೊಗಳುತ್ತಾರೆ. ಈ ಜನರು ತುಂಬಾ ಒಳ್ಳೆಯವರಂತೆ ಕಾಣುತ್ತಾರೆ. ಸಮಸ್ಯೆಗಳನ್ನು ಎಚ್ಚರಿಕೆಯಿಂದ ಆಲಿಸುತ್ತಾರೆ ಮತ್ತು ಅವುಗಳನ್ನು ಪರಿಹರಿಸಲು ಪ್ರಯತ್ನಿಸುತ್ತಾರೆ. ಇವರು ತುಂಬಾ ಸಹಾಯಕವಾಗುತ್ತಾರೆ ಮತ್ತು ಕೆಟ್ಟ ಸಮಯದಲ್ಲಿ ತಮ್ಮ ಅವಕಾಶಗಳನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಾರೆ.

ಇದನ್ನೂ ಓದಿ: Chanakya Niti: ಚಿನ್ನ ಸೇರಿದಂತೆ ಈ ವಸ್ತುಗಳು ಕೇಸರಲ್ಲಿ ಬಿದ್ದಿದ್ದರೂ ಕೂಡ ಕೈಗೆತ್ತಿಕೊಳ್ಳಲು ತಡಮಾಡಬೇಡಿ

3. ಕೆಲವರು ಯಾವಾಗಲೂ ತಮ್ಮನ್ನು ಬಡವರು, ಒಡೆದ ಹೃದಯದ ವ್ಯಕ್ತಿ ಎಂದು ಬಿಂಬಿಸಲು ಪ್ರಯತ್ನಿಸುತ್ತಾರೆ ಮತ್ತು ಇತರರಿಂದ ಪ್ರೀತಿಯನ್ನು ಪಡೆಯಲು ಬಯಸುತ್ತಾರೆ. ಇವರು ತಮ್ಮ ಸಮಸ್ಯೆಗಳ ಬಗ್ಗೆಯೇ ಮಾತನಾಡುತ್ತಾರೆ ಮತ್ತು ಇದು ಅವರ ಬಗ್ಗೆ ಸಹಾನುಭೂತಿ ಹೊಂದಲು ಜನರನ್ನು ಆಕರ್ಷಿಸುತ್ತದೆ. ಆದರೆ, ಕೊಂಚ ಅವಕಾಶ ಸಿಕ್ಕರೂ ಮೋಸ ಮಾಡಿ ನಿಮ್ಮನ್ನು ಮಧ್ಯದಲ್ಲಿ ಒಂಟಿಯನ್ನಾಗಿ ಮಾಡಿ ಎಸ್ಕೇಪ್ ಆಗುತ್ತಾರೆ.   

4. ಕೆಲವು ಮೋಸಗಾರರು ಅತ್ಯಂತ ಅವಕಾಶವಾದಿಗಳು. ಈ ರೀತಿಯ ಮೋಸಗಾರರು ಯಾವಾಗಲೂ ಒಳ್ಳೆಯ ಸಮಯಕ್ಕಾಗಿ ಪ್ರತಿ ಅವಕಾಶಕ್ಕಾಗಿ ಹುಡುಕುತ್ತಿರುತ್ತಾರೆ. ಇವರು ಯಾವುದೇ ಅವಕಾಶವನ್ನು ಸುಲಭವಾಗಿ ಬಿಟ್ಟುಕೊಡುವುದಿಲ್ಲ. ಹೀಗಾಗಿ ನೀವು ಇಂತವರ ಬಗ್ಗೆ ಜಾಗರೂಕರಾಗಿರಬೇಕು ಮತ್ತು ಇಂತವರ ಮಾತುಗಳಿಗೆ ಮಾರುಹೋಗಬೇಡಿ.

5. ಕೆಲವರು ವೃತ್ತಿಪರವಾಗಿ ಮೋಸ ಮಾಡುತ್ತಾರೆ. ಕೆಲವೊಮ್ಮೆ ಇವರು ಮೋಜಿಗಾಗಿ ಮಾತ್ರ ಯಾರನ್ನಾದರೂ ಪ್ರೀತಿಸುತ್ತಾರೆ. ಸ್ವತಃ ಕಟ್ಟಿಕೊಂಡ ಹೆಂಡತಿಗೆ ಇವರು ವಂಚಿಸುತ್ತಾರೆ. ಆದರೆ, ತಾನು ಮದುವೆಯಾಗಿ ಹೆಂಡತಿಗೆ ಮೋಸ ಮಾಡುತ್ತಿದ್ದಾನೆಂಬ ಕಿಂಚಿತ್ತೂ ಪಶ್ಚಾತ್ತಾಪ ಪಡುವುದಿಲ್ಲ. ಇಂತಹವರು ತಮ್ಮ ವ್ಯವಹಾರಗಳನ್ನು ಮರೆಮಾಚುವಲ್ಲಿ ಬಹಳ ಬುದ್ಧಿವಂತರು. ಇಂತಹ ಜನರೊಂದಿಗೆ ಸಹ ನೀವು ಜಾಗರೂಕರಾಗಿರಬೇಕು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News