Horoscope Weekly (6 June to 12 June 2022) - ಮುಂದಿನ ವಾರ ಹಲವು ಜನರಿಗೆ ಶುಭ ಸಮಾಚಾರಗಳು ಪ್ರಾಪ್ತಿಯಾಗಲಿವೆ. ಸಿಂಹ ರಾಶಿಯ ಜನರಿಗೆ ತಮ್ಮ ಸಂಸ್ಥೆಯಲ್ಲಿ ಉನ್ನತ ಸ್ಥಾನ ಪಡೆಯಲು ತಮ್ಮ ತಂಡ ಹಾಗೂ ಮೇಲಾಧಿಕಾರಿಗಳ ನಡುವೆ ಉತ್ತಮ ಸಮತೋಲನ ಏರ್ಪಡಿಸುವ ಅವಶ್ಯಕತೆ ಇದೆ. ಧನು ರಾಶಿಯ ಜನರಿಗೆ ಕಚೇರಿಯಲ್ಲಿ ಸ್ಥಿತಿ ಉತ್ತಮವಾಗಿರಲಿದೆ.
ಮೇಷ ರಾಶಿ: ಜೋತಿಷ್ಯ ಶಾಸ್ತ್ರದ ಪ್ರಕಾರ ಕೆಲಸ ಪೂರ್ಣಗೊಳಿಸಲು ನೀವು ಅಧಿಕ ಪರಿಶ್ರಮ ಪಡಬೇಕಾದ ಅವಶ್ಯಕತೆ ಇದೆ. ಇಂದೇ ನಿಮ್ಮನ್ನು ನೀವು ಪರಿಶ್ರಮದಲ್ಲಿ ತೊಡಗಿಸಿಕೊಳ್ಳಿ. ಧಾನ್ಯ ವ್ಯಾಪಾರಿಗಳು ಧಾನ್ಯದ ಗುಣಮಟ್ಟದ ಮೇಲೆ ಗಮನ ಕೇಂದ್ರೀಕರಿಸಿ. ಯುವಕರ ಮೇಲೆ ಸಾಂಗತ್ಯದ ಪ್ರಭಾವ ಕಾಣಿಸಿಕೊಳ್ಳಲಿದೆ. ಹೀಗಾಗಿ ಸಾಕಷ್ಟು ಯೋಚಿಸಿ ಸ್ನೇಹ ಬೆಳೆಸಿ. ಇಲ್ಲದೆ ಹೋದಲ್ಲಿ ನಿಮ್ಮ ವ್ಯಕ್ತಿತ್ವಕ್ಕೆ ಕುಂದುಂಟಾಗುವ ಸಾಧ್ಯತೆ ಇದೆ. ಕೌಟುಂಬಿಕ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಆಪ್ತರೊಂದಿಗೆ ಚರ್ಚಿಸಿ. ಕ್ಯಾಲ್ಸಿಯಂ ಕೊರತೆ ಅಥವಾ ತಲೆನೋವಿನಂತಹ ಸಮಸ್ಯೆಗಳು ಎದುರಾಗಬಹುದು ಎಚ್ಚರದಿಂದಿರಿ.
ವೃಷಭ ರಾಶಿ: ಜೂನ್ 9 ರ ಬಳಿಕ ಈ ರಾಶಿಯ ಜನರಲ್ಲಿ ಅತ್ಯಧಿಕ ಹುಮ್ಮಸ್ಸು ಇರಲಿದೆ. ಇದೆ ಅವಧಿಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಿ. ಸರ್ಕಾರಿ ಕೆಲಸಗಳೇನೆ ಇದ್ದರೂ ಕೂಡ ಅವುಗಳನ್ನು ಪೂರ್ಣಗೊಳಿಸಿಕೊಳ್ಳಿ. ಲೇಖನ ಆರಂಭಿಸಲು ಬಯಸುವವರಿಗೆ ಈ ಸಮಯ ಉತ್ತಮವಾಗಿರಲಿದೆ. ಕುಟುಂಬದಲ್ಲಿ ಹಳೆ ವಿಷಯಗಳನ್ನು ಕೆದಕಿ ವಿವಾದ ಎಳೆದುಕೊಳ್ಳಬೇಡಿ. ಅಸಿಡಿಟಿ ಸಮಸ್ಯೆ ಕಾಡಲಿದೆ.
ಮಿಥುನ ರಾಶಿ: ಮಿಥುನ ರಾಶಿಯ ಜನರು ಕೆಲಸ ಮತ್ತು ತಮ್ಮ ತನ್ನ್ದದಲ್ಲಿ ಉತ್ತಮ ನಿರ್ದೇಶನಗಳನ್ನು ನೀಡುವುದಕ್ಕಾಗಿ ಸಂಸ್ಥೆಯಲ್ಲಿ ಪ್ರಶಂಸೆಯನ್ನು ಪಡೆಯಲಿದ್ದಾರೆ, ಎಲೆಕ್ಟ್ರಾನಿಕ್ ವಸ್ತುಗಳ ವ್ಯಾಪಾರವು ಈ ವಾರ ವೇಗವಾಗಿ ಬೆಳೆಯುವುದನ್ನು ನೀವು ನೋಡಬಹುಚು, ನಿಮ್ಮ ಜನಸಂಪರ್ಕ ದುರ್ಬಲಗೊಳ್ಳಲು ಬಿಡಬೇಡಿ. ಸ್ನೇಹಿತರ ಜೊತೆ ಘರ್ಷಣೆಗಳು ಸಂಭವಿಸುವ ಸಾಧ್ಯತೆಯಿದೆ, ಸಂಭವಿಸದಂತೆ ಕಾಳಜಿವಹಿಸಿ. ಅಂತಹ ಸಂದರ್ಭಗಳು ಉದ್ಭವಿಸಿದಾಗ ಅವುಗಳನ್ನು ತಪ್ಪಿಸಲು ಪ್ರಯತ್ನಿಸಿ. ಪ್ರೀತಿಪಾತ್ರರ ಮಾತುಗಳು ಸ್ವಾಭಿಮಾನದ ಮೇಲೆ ತೆಗೆದುಕೊಳ್ಳಬೇಡಿ, ವಾರದ ಆರಂಭದಲ್ಲಿ ಈ ವಿಷಯವನ್ನು ನೆನಪಿನಲ್ಲಿಡಿ. ಹೃದ್ರೋಗಿಗಳು ಅಜಾಗರೂಕತೆಯಿಂದ ದೂರವಿರಬೇಕು, ಈ ಬಾರಿ ನಿಮ್ಮ ನಿರ್ಲಕ್ಷ್ಯದಿಂದಲೇ ಸಮಸ್ಯೆ ಉಲ್ಭಣಿಸಬಹುದು. ಜನಸಂಪರ್ಕಕ್ಕೆ ಅನುಕೂಲಕರ ವಾತಾವರಣವಿರಲಿದೆ, ಸಾಮಾಜಿಕವಾಗಿ ಕ್ರಿಯಾಶೀಲರಾಗಿ. ಸಂಬಂಧಗಳ ಸಕ್ರೀಯಗೊಳಿಸಿ.
ಕರ್ಕ ರಾಶಿ: ಸೃಜನಾತ್ಮಕ ಕೆಲಸಗಳಿಗೆ ಆದ್ಯತೆ ನೀಡಿ. ಕಾರ್ಯದಲ್ಲಿ ತೊಡಗಿಸಿಕೊಳ್ಳಿ ಇಲ್ಲದಿದ್ದರೆ ಅಸಮಾಧಾನ ಹೆಚ್ಚಾಗಲಿದೆ. ಸ್ನೇಹಿತರ ಭೇಟಿ ನಡೆಯಲಿದೆ. ಯುವಕರು ಈ ವಾರ ಕ್ರಿಯಾಶೀಲರಾಗಿರಬೇಕು. ಜೀವನ ಸಂಗಾತಿಯ ಆರೋಗ್ಯದ ಬಗ್ಗೆ ಗಮನ ಕೊಡಿ ಮತ್ತು ಮನೆಯಲ್ಲಿ ಬೆಂಕಿಗೆ ಸಂಬಂಧಿಸಿದ ಅಪಘಾತಗಳ ಬಗ್ಗೆ ಎಚ್ಚರದಿಂದಿರಲು ಸಲಹೆ ನೀಡಲಾಗುತ್ತದೆ. ಸಣ್ಣಪುಟ್ಟ ಕಾಯಿಲೆಗಳಲ್ಲಿಯೂ ಸಹ ಎಚ್ಚರದಿಂದಿರುವುದು ಸೂಕ್ತ, ಗಾಯ ಅಥವಾ ಸೋಂಕು ಇದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಸಾಮಾಜಿಕ ದೃಷ್ಟಿಕೋನವನ್ನು ತಪ್ಪಿಸಿ ಮತ್ತು ಅಗತ್ಯವಿರುವಲ್ಲಿ ಮಾತ್ರ ಖರ್ಚು ಮಾಡಿ, ಅನಗತ್ಯವಾಗಿ ಖರ್ಚು ಮಾಡುವ ಅಗತ್ಯವಿಲ್ಲ.
ಸಿಂಹ ರಾಶಿ: ಸಿಂಹ ರಾಶಿಯ ಜನರು ಸಂಸ್ಥೆಯಲ್ಲಿ ಉನ್ನತ ಸ್ಥಾನವನ್ನು ಪಡೆಯಲು ತಂಡ ಮತ್ತು ಉನ್ನತ ಅಧಿಕಾರಿಗಳ ಜೊತೆಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಳ್ಳಬೇಕಾಗಲಿದೆ. ಈ ವಾರ ವಾಹನಗಳ ವ್ಯವಹಾರದಲ್ಲಿ ಲಾಭದ ಸಿಗುವ ಸಾಧ್ಯತೆಯಿದೆ, ಇದು ಎಲ್ಲಾ ವಿತರಕರು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಒಳ್ಳೆಯದು. ಯುವಕರು ಈ ವಾರ ಜ್ಞಾನ ಸಂಪಾದನೆಗಾಗಿ ಮಾತ್ರ ತಮ್ಮ ಗಮನವನ್ನು ಕೇಂದ್ರೀಕರಿಸಬೇಕು, ಜ್ಞಾನವನ್ನು ಹೆಚ್ಚಿಸಿಕೊಂಡರೆ ಮಾತ್ರ ಪ್ರಗತಿಯಾಗುತ್ತದೆ. ಕುಟುಂಬ ಸದಸ್ಯರ ಜೊತೆಗೆ ಹೊಂದಾಣಿಕೆ ತುಂಬಾ ಮುಖ್ಯ. ಇದರಿಂದ ಎಲ್ಲರಿಗೂ ಕೂಡ ಒಳ್ಳೆಯದಾಗಲಿದೆ. ಹಳೆ ರೋಗಗಳು ತಲೆ ಎತ್ತುವ ಸಾಧ್ಯತೆ ಇದೆ, ನಿರ್ಲಕ್ಷ ತೋರದಿರಿ, ಇಲ್ಲದಿದ್ದರೆ ರೋಗ ಮತ್ತೆ ಉಲ್ಭಣಿಸಾಲಿದೆ, ಮಾಂಸಾಹಾರ ತ್ಯಜಿಸಿ. ಧಾರ್ಮಿಕ ಜನರ ಭೇಟಿ ಸಂಭವಿಸಲಿದೆ, ಇದು ನಿಮ್ಮ ಸಹವಾಸವನ್ನು ಉತ್ತಮಗೊಳಿಸಲಿದೆ.
ಕನ್ಯಾ ರಾಶಿ: ನಿಮ್ಮ ಕೆಲಸದ ಮೇಲೆ ಮೇಲಾಧಿಕಾರಿಗಳ ಗಮನವಿರಲಿದೆ. ಹೀಗಾಗಿ ಕೆಲಸವನ್ನು ಸಾಕಷ್ಟು ಗಮನವಿಟ್ಟು ಪೂರ್ಣಗೊಳಿಸಿ. ಟೆಲಿಕಮ್ಯೂನಿಕೇಶನ್ ವ್ಯವಹಾರದಲ್ಲಿ ನಿರಾಸೆ. ನಿಮ್ಮ ಬುದ್ಧಿ ಚುರುಕಾಗಿದೆ. ಅದನ್ನು ಸಕಾರಾತ್ಮಕವಾಗಿ ಬಳಸಿ ಗುರಿಯನ್ನು ಸಾಧಿಸಿ. ಶುಭ ಸಮಾಚಾರ ಪ್ರಾಪ್ತಿಯಾಗಲಿದೆ. ಕೌಟುಂಬಿಕ ವಾತಾವರಣ ಸುಖದಿಂದ ಕೂಡಿರಲಿದೆ. ಕಾಲು ಮತ್ತು ಬೆನ್ನು ನೋವು ಸಮಸ್ಯೆ ನಿಮ್ಮನ್ನು ಪೀಡಿಸಬಹುದು. ನಿರ್ಗತಿಕರಿಗೆ ಮತ್ತು ಅಸಹಾಯಕರಿಗೆ ಸಾಧ್ಯವಾದ ನೆರವು ಒದಗಿಸಿ.
ತುಲಾ ರಾಶಿ: ನಿಮ್ಮ ಆಫಿಸಿಯಲ್ ತಂಡವನ್ನು ಸಾಧ್ಯವಾದಷ್ಟು ಬೆಳಸಿ. ಗುರಿಯತ್ತ ತಲುಪಲು ತಂಡದ ಸಹಕಾರ ಅಗತ್ಯ ಎಂಬುದನ್ನು ನೆನಪಿನಲ್ಲಿಡಿ. ವ್ಯಾಪಾರದ ವಿಷಯದಲ್ಲಿ ಸ್ಪರ್ಧೆ ಹೆಚ್ಚಾಗಲಿದೆ. ಬಾಳಸಂಗಾತಿ ಹಾಗೂ ಸ್ನೇಹಿತರ ಸಹಕಾರ ಸಿಗಲಿದೆ. ಮಕ್ಕಳ ಕಡೆಗೆ ಗಮನಹರಿಸುವ ಅವಶ್ಯಕತೆ ಇದೆ. ಒಂಟಿಯಾಗಿ ಆಟವಾಡಲು ಬಿಡಬೇಡಿ.
ವೃಶ್ಚಿಕ ರಾಶಿ: ಕಚೇರಿಯ ಹಲವು ಕಾರ್ಯಗಳಲ್ಲಿ ನಿಮ್ಮ ಸಹಯೋಗವಿರಲಿದೆ. ಇದರಿಂದ ಕಚೇರಿಯಲ್ಲಿ ನಿಮ್ಮ ಮಹತ್ವ ಹೆಚ್ಚಾಗಲಿದೆ. ವಿದ್ಯಾಭ್ಯಾಸಕ್ಕಾಗಿ ಅಥವಾ ನೌಕರಿಗಾಗಿ ಯುವಕರು ವಿದೇಶ ಯಾತ್ರೆ ಕೈಗೊಳ್ಳಬಹುದು. ಮಹಿಳೆಯರಿಗೆ ಹಾರ್ಮೋನ್ ಗೆ ಸಂಬಂಧಿಸಿದ ಅಡಚಣೆಗಳು ಎದುರಾಗುವ ಸಾಧ್ಯತೆ ಇದೆ. ಇದರಿನ ಮಾನಸಿಕವಾಗಿ ಅಶಾಂತಿ ಇರಲಿದೆ.
ಧನು ರಾಶಿ: ಜವಾಬ್ದಾರಿಗಳು ಹಾಗೂ ಸೋಮಾರಿತನದ ಮನೋಭಾವನೆಗಳಿಂದ ಕೆಲಸ ಕಾರ್ಯಗಳಲ್ಲಿ ಅಡಚಣೆ ಎದುರಾಗಲಿದೆ. ಸೋಮಾರಿತನವನ್ನು ಬಿಟ್ಟು ಮುಂದಕ್ಕೆ ಸಾಗಿ. ಹಿರಿಯರಿಂದ ಬಂದ ವ್ಯಾಪಾರದಲ್ಲಿ ಒತ್ತಡ ಹೆಚ್ಚಾಗಲಿದೆ. ತಂದೆಯ ಹಣ ವ್ಯಾಪಾರಕ್ಕಾಗಿ ಬಳಸದೆ ಇರುವುದು ಉತ್ತಮ. ಸಣ್ಣ ಪುಟ್ಟ ವಿಷಯಗಳಲ್ಲಿ ಅಹಂಕಾರ ಹಾಗೂ ಕ್ರೋಧವನ್ನು ಮದ್ಯಕ್ಕೆಳೆಯಬೇಡಿ. ಕೆಲಸ ಬಿಗಡಾಯಿಸಬಹುದು. ಸಾಮಾಜಿಕ ಕೆಲಸಕಾರ್ಯಗಳಲ್ಲಿ ಪಾಲ್ಗೊಳ್ಳಿ. ಆದ್ರೆ, ಮಾತಿನ ಮೇಲೆ ನಿಯಂತ್ರಣವಿರಲಿ.
ಮಕರ ರಾಶಿ: ನೌಕರಿಯಲ್ಲಿ ಕಠಿಣ ಸ್ಥಿತಿ ಇರಲಿದೆ. ವರಿಷ್ಠರ ಸಾನಿಧ್ಯದಲ್ಲಿದ್ದರೆ, ಗುರಿಯಿಂದ ವಿಚಲಿತರಾಗುವುದಿಲ್ಲ. ಅವರು ನೀಡುವ ಸಲಹೆ ನಿಮ್ಮ ಕೆಲಸಕ್ಕೆ ಬರಲಿದೆ. ಐಶಾರಮಿ ಸಂಗತಿಗಳ ವ್ಯಾಪಾರದಿಂದ ಲಾಭ ಸಿಗಲಿದೆ. ಸಕ್ಕರೆ ಕಾಯಿಲೆಯಿಂದ ಬಳಲುವವರು ಸಾಕಷ್ಟು ಎಚ್ಚರಿಕೆವಹಿಸಬೇಕಾಗಲಿದೆ. ನಿಯಮಿತವಾಗಿ ಔಷಧಿಗಳನ್ನು ತೆಗೆದುಕೊಳ್ಳುವುದನ್ನು ಮರೆಯಬೇಡಿ. ಈ ವಾರ ನಿಮ್ಮ ಮನೆಯ ಪಾಲಿಗೆ ಸಂತಸಗಳನ್ನು ಹೊತ್ತು ತರುವ ಸಮಯವಾಗಿದೆ.
ಇದನ್ನೂ ಓದಿ-Astrology Tips: ಈ ಕೆಟ್ಟ ಅಭ್ಯಾಸಗಳು ನಿಮ್ಮನ್ನು ಬಡವರನ್ನಾಗಿ ಮಾಡಬಹುದು ಎಚ್ಚರ!
ಕುಂಭ ರಾಶಿ: ನೆನೆಗುದಿಗೆ ಬಿದ್ದ ನಿಮ್ಮ ಕೆಲಸಗಳು ಈ ವಾರ ಪೂರ್ತಿಯಾಗಲಿವೆ. ಇಲ್ಲದೆ ಹೋದರೆ, ಮೇಲಾಧಿಕಾರಿಗಳ ಕೋಪಕ್ಕೆ ತುತ್ತಗುವಿರಿ. ಲೋಹಕ್ಕೆ ಸಂಬಂಧಿಸಿದ ವ್ಯಾಪಾರದಲ್ಲಿ ತೊಡಗಿರುವವರಿಗೆ ಅಪೇಕ್ಷೆಗೆ ತಕ್ಕಂತೆ ಆದಾಯ ಸಿಗಲಿದೆ. ಚಟಗಳಿಗೆ ಬಲಿಯಾದವರಿಂದ ಯುವಕರು ದೂರ ಉಳಿಯಬೇಕು. ಮನೆಯಲ್ಲಿ ಅಗ್ನಿ ಅವಘಡದಿಂದ ಪಾರಾಗಲು ಎಲ್ಲಾ ನಿಯಮಗಳನ್ನು ಪಾಲಿಸಿ. ಅಡುಗೆ ಅನಿಲ ಓಲೆ, ವಿದ್ಯುತ್ ಸಂಪರ್ಕ ಸರಿಯಾಗಿದೆಯೋ ಇಲ್ಲವೋ ಪರಿಶೀಲಿಸಿ. ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಕಾಡಬಹುದು.
ಇದನ್ನೂ ಓದಿ-ಎರಡು ಮಿತ್ರ ಗ್ರಹಗಳ ನಡೆಯಲ್ಲಿ ಬದಲಾವಣೆ .! ಬಹಳ ಎಚ್ಚರದಿಂದ ಇರಬೇಕು ಈ ರಾಶಿಯವರು
ಮೀನ ರಾಶಿ: ಭಾಗ್ಯದ ಸಾಥ್ ಸಿಗಲಿದೆ. ನೌಕರಿಯಲ್ಲಿ ಬಡ್ತಿ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಹೊಸ ಪಾರ್ಟ್ನರ್ ಸಿಗುವ ಸಾಧ್ಯತೆ ಇದೆ. ಆದರೆ, ಸದ್ಯ ಯಾವುದೇ ರೀತಿಯ ಹೂಡಿಕೆಯಿಂದ ದೂರ ಉಳಿಯುವ ಅವಶ್ಯಕತೆ ಇದೆ. ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಕುಟುಂಬ ಸದಸ್ಯರ ಜೊತೆಗೆ ವಾದ-ವಿವಾದ ಬೇಡ. ವಾರದ ಮಧ್ಯಭಾಗದಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರುವ ಅವಶ್ಯಕತೆ ಇದೆ. ದೀರ್ಘಕಾಲದಿಂದ ನೆನೆಗುದಿಗೆ ಬಿದ್ದ ಸರ್ಕಾರಿ ಕೆಲಸಗಳು ಈ ವಾರ ಸುಲಭವಾಗಿ ಪೂರ್ಣಗೊಳ್ಳಲಿವೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ