Viral News: ಕೊನೆಗೂ ತನ್ನನ್ನೇ ಮದುವೆಯಾದ ಯುವತಿ.. ಹನಿಮೂನ್ ಮಾತ್ರ ಬಾಕಿ!

ತಮ್ಮಿಷ್ಟದಂತೆ ತಮ್ಮ ಕನಸು ನನಸು ಮಾಡಿಕೊಂಡು ಏಕಾಂಗಿ ಮದುವೆಯಾಗಿರುವ ಕ್ಷಮಾ ಇದೀಗ ತನ್ನ ಜೊತೆಗೆ ತಾನೇ ಗೋವಾಕ್ಕೆ ತೆರಳಿ ಹನಿಮೂನ್ ಆಚರಿಸಲಿದ್ದಾರಂತೆ.  

Written by - Puttaraj K Alur | Last Updated : Jun 9, 2022, 05:24 PM IST
  • ಕೊನೆಗೂ ತನ್ನನ್ನು ತಾನೇ ಮದುವೆಯಾದ ಗುಜರಾತ್‍ನ ಯುವತಿ
  • ಶಾಸ್ತ್ರೋಕ್ತವಾಗಿಯೇ ಏಕಾಂಗಿ ಮದುವೆಯಾದ ಕ್ಷಮಾ ಬಿಂದು
  • ವರನಿಲ್ಲದೆ ಮದುವೆಯಾಗಿ ಗೋವಾಕ್ಕೆ ಹನಿಮೂನ್‍ಗೆ ರೆಡಿಯಾದ ಯುವತಿ
Viral News: ಕೊನೆಗೂ ತನ್ನನ್ನೇ ಮದುವೆಯಾದ ಯುವತಿ.. ಹನಿಮೂನ್ ಮಾತ್ರ ಬಾಕಿ! title=
ಏಕಾಂಗಿ ಮದುವೆಯಾದ ಕ್ಷಮಾ ಬಿಂದು

ನವದೆಹಲಿ: ದೇಶದಾದ್ಯಂತ ಸಖತ್ ಸೌಂಡ್ ಮಾಡಿದ್ದ ಗುಜರಾತ್‍ನ​ ವಡೋದರ ಮೂಲದ ಯುವತಿ ಕ್ಷಮಾ ಬಿಂದು ಕೊನೆಗೆ ತನ್ನ ಕನಸನ್ನು ನನಸು ಮಾಡಿಕೊಂಡಿದ್ದಾಳೆ. ಶಾಸ್ತ್ರೋಕ್ತವಾಗಿಯೇ ಆಕೆ ತನ್ನನ್ನು ತಾನೇ ಮದುವೆಯಾಗುವಲ್ಲಿ ಯಶಸ್ವಿಯಾಗಿದ್ದಾಳೆ. ಅಚ್ಚರಿಯಾದ್ರೂ ಇದು ನಿಜ. ತನ್ನನ್ನು ತಾನೇ ಮದುವೆಯಾಗುವುದಾಗಿ ಘೋಷಿಸುವ ಮೂಲಕ ಕ್ಷಮಾ ಬಿಂದು ದೊಡ್ಡ ಸುದ್ದಿಯಾಗಿದ್ದಳು.

ಗಂಡು-ಹೆಣ್ಣು ಮದುವೆಯಾಗುವುದು ಸಹಜ. ಸಲಿಂಗಿಗಳು ಮದುವೆಯಾಗಿ ಆಗಾಗ ಸುದ್ದಿಯಲ್ಲಿರುತ್ತಾರೆ. ಆದರೆ, ಈ ಯುವತಿ ತನ್ನನ್ನು ತಾನೇ ಮದುವೆಯಾಗುವ ಮೂಲಕ ದೊಡ್ಡ ಸುದ್ದಿಯಾಗಿದ್ದಾಳೆ. ಈಕೆಯ ಈ ವಿಚಿತ್ರ ನಿರ್ಧಾರದಿಂದ ಅನೇಕರು ಬಾಯ್ ಮೇಲೆ ಬೆರಳಿಟ್ಟಿದ್ದಾರೆ. ನೆಟಿಜನ್‍ಗಳು ಮಾತ್ರ 'ದೇಶದಲ್ಲಿ ಗಂಡಸರಿಗೆ ಏನು ಬರ?' ಅಂತಾ ತಮ್ಮಲ್ಲಿಯೇ ಪ್ರಶ್ನಿಸಿಕೊಂಡಿದ್ದಾರೆ.

ಇದನ್ನೂ ಓದಿ: Viral Video: ಉದ್ಘಾಟನೆ ವೇಳೆಯೇ ಕುಸಿದ ತೂಗು ಸೇತುವೆ, ಮೇಯರ್ ಸೇರಿ ಹಲವರು ಚರಂಡಿ ಪಾಲು!

 
 
 
 

 
 
 
 
 
 
 
 
 
 
 

A post shared by Kshama Bindu (@kshamachy)

ಅಂದಹಾಗೆ ಜೂನ್ 11ರಂದು ಕ್ಷಮಾ ಬಿಂದು ಮದುವೆಯಾಗಬೇಕಿತ್ತು. ಆದರೆ, ಹಲವರ ವಿರೋಧ ಹಿನ್ನೆಲೆ ನಿಗದಿತ ಸಮಯಕ್ಕಿಂತ 3 ದಿನ ಮುಂಚೆಯೇ ಅವರು ಮದುವೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಕ್ಷಮಾ ಬಿಂದು ಏಕಾಂಗಿಯಾಗಿ ವಿವಾಹವಾಗಲು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಹಿಂದೂ ಧರ್ಮದಲ್ಲಿ ಈ ರೀತಿ ಮದುವೆಗೆ ಅವಕಾಶವಿಲ್ಲ. ದೇವಸ್ಥಾನದಲ್ಲಿ ಇಂತಹ ಮದುವೆಗೆ ಅವಕಾಶ ನೀಡಬಾರದು. ಈ ರೀತಿಯ ವಿದೇಶ ಸಂಸ್ಕೃತಿ ನಮ್ಮ ದೇಶಕ್ಕೆ ಕಾಲಿಡುವುದು ಬೇಡ ಅಂತಾ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಇದ್ಯಾವುದಕ್ಕೂ ಸೊಪ್ಪು ಹಾಕದ ಕ್ಷಮಾ ತಾವು ಅಂದುಕೊಂಡಂತೆಯೇ ಮದುವೆಯಾಗಿದ್ದಾರೆ. ವರನಿಲ್ಲದೆ ಸಪ್ತಪದಿ ತುಳಿದಿರುವ ಕ್ಷಮಾ ಬಿಂದುವಿಗೆ ಅನೇಕರು ಆಕೆಗೆ ಹುಚ್ಚು ಹಿಡಿದಿರಬೇಕು ಅಂತಾ ಟೀಕಿಸಿದ್ದಾರೆ.

ವಿಶೇಷ ವಿವಾಹಕ್ಕೆ ಸ್ನೇಹಿತರು-ಸಂಬಂಧಿಕರು ಸಾಕ್ಷಿ

ಇನ್ನು ಕ್ಷಮಾ ಬಿಂದುರವರ ವಿಶೇಷ ವಿವಾಹಕ್ಕೆ ಅವರ ಅಪಾರ ಸ್ನೇಹಿತರು-ಸಂಬಂಧಿಕರು ಸಾಕ್ಷಿಯಾಗಿದ್ದಾರೆ. ದೇವಾಲಯದಲ್ಲಿ ಏಕಾಂಗಿ ಮದುವೆಯಾಗಲು ವಿರೋಧ ವ್ಯಕ್ತವಾದ ಹಿನ್ನೆಲೆ ಅವರು ತಮ್ಮ ಮನೆಯಲ್ಲಿಯೇ ಹಿಂದೂ ಸಂಪ್ರದಾಯದ ಪ್ರಕಾರವೇ ಮದುವೆಯಾಗಿದ್ದಾರೆ. ಆದರೆ, ಈ ಮದುವೆಗೆ ಪುರೋಹಿತರು ಗೈರಾಗಿದ್ದರು. ಹಿಂದೂ ಸಂಪ್ರದಾಯದ ಶಾಸ್ತ್ರಗಳ ಪ್ರಕಾರ ಕ್ಷಮಾ ತಮ್ಮನ್ನು ತಾವೇ ಮದುವೆಯಾಗಿದ್ದಾರೆ. ತಮ್ಮಿಷ್ಟದಂತೆ ತಮ್ಮ ಕನಸು ನನಸು ಮಾಡಿಕೊಂಡು ಏಕಾಂಗಿ ಮದುವೆಯಾಗಿರುವ ಕ್ಷಮಾ ಇದೀಗ ತನ್ನ ಜೊತೆಗೆ ತಾನೇ ಗೋವಾಕ್ಕೆ ತೆರಳಿ ಹನಿಮೂನ್ ಆಚರಿಸಲಿದ್ದಾರಂತೆ.  

 
 
 
 

 
 
 
 
 
 
 
 
 
 
 

A post shared by Kshama Bindu (@kshamachy)

ಇದನ್ನೂ ಓದಿ: Viral Video: ಕುಚೇಷ್ಟೆ ಮಾಡಿದವನಿಗೆ ಓರಾಂಗುಟನ್ ಮಾಡಿದ್ದೇನು ನೋಡಿ..!  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News